'ಪಿಎಫ್' ಹಣ ಪಡೆಯುವುದು ಹೇಗೆ ..? ಇಲ್ಲಿದೆ ಸಂಪೂರ್ಣ ಮಾಹಿತಿ..

ವರ್ಷವೆಲ್ಲಾ ದುಡಿದ ಸಂಬಳದಲ್ಲಿ ಒಂದಿಷ್ಟು ದುಡ್ಡನ್ನ ಸೇವಿಂಗ್ಸ್ ಅಂತ ಉಳಿಸಿಕೊಳ್ಳುತ್ತಿವಿ… ಅದು ಕೂಡ ಪಿಎಫ್ ರೂಪದಲ್ಲಿ.. ಆದರೆ ಅದನ್ನು ತೆಗೆದುಕೊಳ್ಳುವ ಸಮಯದಲ್ಲಿ ನೀವು ಕಟ್ಟಿರುವ ಪ್ರಾವಿಡೆಂಟ್ ಫಂಡ್ ಹಣವನ್ನು ತೆಗೆದುಕೊಳ್ಳಲು ಸಿಕ್ಕಪಟ್ಟೆ ಓಡಾಡಬೇಕಾಗಿತ್ತು.. ಆದರೆ ಇದೀಗ ಪಿಎಫ್ ಹಣವನ್ನು ಬಿಡಿಸಿಕೊಳ್ಳಲು ಇದ್ದ ತಲೆ ಬಿಸಿ ಇನ್ನಿಲ್ಲ. ಪಿಎಫ್ ವಾಪಸು ಪಡೆಯುವುದಕ್ಕೆ ಆನ್ ಲೈನ್ ಅರ್ಜಿ ಸಲ್ಲಿಸಲು ಈಗ ಅವಕಾಶ ಕಲ್ಪಿಸಲಾಗಿದೆ.ಈ ಮೊದಲು ಹಣ ಬಿಡಿಸಿಕೊಳ್ಳಲು, ಉದ್ಯೋಗಿಗಳು ತಮ್ಮ ಕಚೇರಿಯಿಂದ ಪಿಎಫ್ ಕಚೇರಿಗೆ ಅಲೆದಾಡಬೇಕಿತ್ತು.
ಇದೀಗ ಆನ್ ಲೈನ್ ನಲ್ಲಿಯೇ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದು, ಯುಎಎನ್ ನಂಬರ್ ಇದ್ದರೆ ಸಾಕು ಎಂದು ಪಿಎಫ್ ಇಲಾಖೆ ಹೇಳಿದೆ.ಪಾನ್, ಆಧಾರ್, ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಯುಎಎನ್ ನಂಬರ್ ಮೂಲಕ ಹಣ ತೆಗೆದುಕೊಳ್ಳಬಹುದಾಗಿದೆ. ಇದರೊಂದಿಗೆ, ಆನ್ ಲೈನ್ ಪ್ರಕ್ರಿಯೆಗೆ ಸಂಸ್ಥೆಯಿಂದಲೂ ಯಾವುದೇ ಪರವಾನಗಿ ಬೇಕಿಲ್ಲ. ಆದರೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿರುವವರು ಪೂರ್ಣ ಪ್ರಮಾಣದ ಹಣವನ್ನು ಬಿಡಿಸಿಕೊಳ್ಳಬೇಕು ಹಾಗೂ ಐದು ವರ್ಷದೊಳಗೆ ಬಿಡಿಸಿಕೊಂಡರೆ, ಅದನ್ನು ತೆರಿಗೆ ವಿನಾಯಿತಿ ಎಂದು ಪರಿಗಣಿಸುವುದಿಲ್ಲ. ಆದ್ದರಿಂದ ನಿವೃತ್ತಿ ಜೀವನಕ್ಕೆ ಯಾವುದೇ ಸೇವಿಂಗ್ಸ್ ಉಳಿಯುವುದಿಲ್ಲ. ಆದ್ದರಿಂದ ಹಣ ಬಿಡಿಸುವಾಗ ಎಚ್ಚರ. ಆನ್ ಲೈನ್ ಅರ್ಜಿ ಸಲ್ಲಿಸಲು www.epfindia.gov.in ಭೇಟಿ ನೀಡಿ. ಹೀಗಾಗಿ ಪಿಎಫ್ ಪಡೆಯುವವರೆಗೆ ಸುಲಭ ಮಾರ್ಗವಾಗಿದೆ.. ಈ ಮಾಹಿತಿಯನ್ನು ನೀವು ಬಳಸಿಕೊಂಡು ಇತರರಿಗೂ ತಿಳಿಸಿ…
Comments