ಮನೆ ಕಟ್ಟುವ ಯೋಚನೆಯಲ್ಲಿದ್ದೀರಾ...ಹಾಗಿದ್ರೆ ಇದನ್ನು ಓದಿ, ನಿಮಗೆ ಸಿಗುತ್ತೆ ಬಂಪರ್ ಆಫರ್…!

31 Jan 2019 9:53 AM | General
534 Report

ಫೆ. 1 ರಂದು ಪ್ರಧಾನಿ ನರೇಂದ್ರ ಮೋದಿಯವರ ಕೇಂದ್ರ ಸರ್ಕಾರ ಮಂಡನೆ ಮಾಡಲಿರುವ ಮಧ್ಯಂತರ ಬಜೆಟ್ ನಲ್ಲಿ ಈ ಬಾರಿ ಜನ ಸಾಮಾನ್ಯರಿಗೆ ಆಧ್ಯತೆ ನೀಡಲಾಗಿದೆ. ಈ ಸಲದ  ಬಜೆಟ್ ನಲ್ಲಿ ಜನ ಸಾಮನ್ಯರನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನಗರಗಳಲ್ಲಿ ಗೃಹ ನಿರ್ಮಾಣ ಸಾಲದ ಬಡ್ಡಿ ಸಬ್ಸಿಡಿ ವಿತರಣೆಗೆ ನೂತನ ವಿಧಾನ ಅಳವಡಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ಅದರಂತೇ ಬಜೆಟ್ ನಲ್ಲಿ ಜನಸಾಮ್ಯರನ್ನು ವಿಶೇಷವಾಗಿ ಗಣನೆಗೆ ತೆಗೆದುಕೊಂಡು ಗೃಹಸಾಲದ ಬಡ್ಡಿ ಸಬ್ಸಿಡಿ ಸಂಬಂಧ ಹೊಸ ಆದೇಶ ಜಾರಿಗೆ ಬರುವ ನಿರೀಕ್ಷೆ ಇದೆ. ಮೊದಲ ಬಾರಿಗೆ ಮನೆ ಖರೀದಿ ಮಾಡುವವರು ಬ್ಯಾಂಕ್ ಶಾಖೆಗಳಲ್ಲಿ ಸಬ್ಸಿಡಿ ಸಹಿತ ಸಾಲಕ್ಕಾಗಿ ಕಾಯುವ ಬದಲಿಗೆ ಆದಾಯ ತೆರಿಗೆ ಇಲಾಖೆಯಿಂದ ಮಾಹಿತಿ ಪಡೆದು ಸಂಭಾವ್ಯ ಫಲಾನುಭವಿಗಳನ್ನು ಗುರುತಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಈ ಯೋಜನೆಯಲ್ಲಿವಾರ್ಷಿಕ 18 ಲಕ್ಷ ರೂ. ಆದಾಯ ಹೊಂದಿದವರು ಸೌಲಭ್ಯ ಪಡೆಯಬಹುದಾಗಿದೆ. 20 ವರ್ಷಗಳ ಅವಧಿಯ 6 ಲಕ್ಷ ರೂ. ವರೆಗೂ ಸಬ್ಸಿಡಿ ಸಿಗಲಿದೆ ತಕ್ಷಣದ ರಿಯಾಯಿತಿಯಾಗಿ 2.5 -2.7 ಲಕ್ಷ ರೂ. ವರೆಗೆ ಬಡ್ಡಿ ಸಬ್ಸಿಡಿ ಪಡೆಯಬಹುದು ಎಂದು ಹೇಳಲಾಗಿದೆ. ಆದಾಯ ತೆರಿಗೆ ಇಲಾಖೆಯಿಂದ ಫಲಾನುಭವಿಗಳನ್ನು ಗುರುತಿಸಿದ ನಂತರ ಪ್ರಮಾಣ ಪತ್ರ ಪಡೆದು ಸಬ್ಸಿಡಿ ಸಹಿತ ಸಾಲ ಪಡೆಯಲು ಅದನ್ನ ಬಳಸಿಕೊಳ್ಳಬಹುದು. 

Edited By

Kavya shree

Reported By

Kavya shree

Comments