ಕೇಬಲ್ ಗ್ರಾಹಕರಿಗೆ ಇದು ಖಡಕ್ ವಾರ್ನಿಂಗ್ : ಫೆ.1 ರಿಂದ ಟಿವಿ ಚಾನಲ್ ಬಂದ್…!!!
ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಕೇಬಲ್ ಟಿವಿ ದರ ಕುರಿತಂತೆ ಹೊಸ ವ್ಯವಸ್ಥೆಯನ್ನು ಜಾರಿ ಮಾಡಿದೆ. 2018 ರ ಡಿಸೆಂಬರ್ 31 ಕ್ಕೆ ಅತಿಮ ದಿನಾಂಕವೆಂದು ಘೋಷಿಸಲಾಗಿತ್ತಾದರೂ ಬಳಿಕ 2019 ಜ. 31 ಕ್ಕೆ ಮುಂದೂಡಲಾಗಿದೆ. ಈಗಾಗಲೇ ಕೇಬಲ್ ಮತ್ತು ಡಿಟಿಹೆಚ್ ಗ್ರಾಹಕರಿಗೆ ಈ ಬಗ್ಗೆ ಮಾಹಿತಿಗಳು ಸಿಕ್ಕಿವೆ. ಆದರೆ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ ಫೆಬ್ರವರಿಗೆ ಗಡುವು ನೀಡಿದೆ.
ಅಷ್ಟೊರೊಳಗೆ ಕೇಬಲ್ ಹಾಗೂ ಡಿಟಿಎಚ್ ಗ್ರಾಹಕರು ನೂತನ ದರ ವ್ಯವಸ್ಥೆಗೆ ಬದಲಾಗಬೇಕಾಗಿದೆ. ಈ ಕುರಿತು ಮಾತನಾಡಿರುವ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರದ ಆರ್ ಎಸ್ಎಸ್ ಶರರ್ಮಾ ಫೆ. 1 ರಿಂದ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ.ಒಂದು ವೇಳೆ ಗ್ರಾಹಕರು ಅಷ್ಟರೊಳಗಾಗಿ ನೂತನ ವ್ಯವಸ್ಥೆಗೆ ಬದಲಾಗದಿದ್ದರೆ ಫೆಬ್ರವರಿ 1 ರಿಂದ ಉಚಿತ ಚಾನೆಲ್ ಗಳನ್ನು ಹೊರತುಪಡಿಸಿ ಇತರೆ ಚಾನೆಲ್ ಗಳು ಪ್ರಸಾರವಾಗುವುದಿಲ್ಲ. ಆದರೆ ಚಾನೆಲ್ ಗಳ ಆಯ್ಕೆ ಕುರಿತಂತೆ ಗ್ರಾಹಕರಲ್ಲಿ ಇನ್ನೂ ಗೊಂದಲಗಳಿದ್ದು, ದೇಶದಾದ್ಯಂತ ಈವರೆಗೆ ಶೇಕಡ 70ರಷ್ಟು ಡಿಟಿಎಚ್ ಗ್ರಾಹಕರು ಹೊಸ ವ್ಯವಸ್ಥೆಗೆ ಬದಲಾಯಿಸಿಕೊಂಡಿದ್ದಾರೆಂದು ಹೇಳಲಾಗಿದೆ.
Comments