ಶ್ರೀ ಶಿವಕುಮಾರ ಸ್ವಾಮೀಜಿಯವರ ಪಾತ್ರದಲ್ಲಿ ಮಿಂಚಲಿದ್ದಾರೆ ಈ ಸ್ಯಾಂಡಲ್’ವುಡ್ ಸ್ಟಾರ್…?!!!

ನಡೆದಾಡುವ ದೇವರು, ಕಾಯಕ ಯೋಗಿ ಡಾ.ಶಿವಕುಮಾರ ಸ್ವಾಮಿಜೀಯವರ ಬದುಕೇ ಒಂದು ಪವಾಡ. 111ವರ್ಷಗಳ ಕಾಲ ಬದುಕಿ ಮಾದರಿ ಜೀವನ ನಡೆಸುತ್ತಿದ್ದ ಶಿವಕುಮಾರ ಸ್ವಾಮೀಜಿಗಳನ್ನು ಬೆಳ್ಳಿ ಪರದೆ ಮೇಲೆ ತರಲು ಈಗಾಗಲೇ ಯೋಜಿಸಲಾಗುತ್ತಿದೆ. ತುಮಕೂರನ್ನೇ ಕಲ್ಪತರು ನಾಡನ್ನಾಗಿ ಮಾಡಿದ್ದ ಪರಮ ಪೂಜ್ಯ ಶಿವಕುಮಾರ ಸ್ವಾಮೀಜಿಯವರ ಜೀವನದ ಬಗ್ಗೆ ಸಿನಿಮಾ ಮಾಡಲು ಸ್ಯಾಂಡಲ್ವುಡ್ನಲ್ಲಿ ಭಾರಿ ಸಿದ್ಧತೆ ನಡೆಯುತ್ತಿದೆ.
ಶತಾಯುಷಿಗಳ ರೂಪವನ್ನು ಸಂಪೂರ್ಣವಾಗಿ ಎಳೆ ಎಳೆಯಾಗಿ ಯಾರು ಕೂಡ ತೆರೆಯ ಮೇಲೆ ಕಟ್ಟಿರಲಿಲ್ಲ. ಶಿವಕುಮಾರ ಸ್ವಾಮೀಜಿ ಅವರ ಪಾತ್ರದಲ್ಲಿ ಖ್ಯಾತ ನಟರ ಹೆಸರು ಕೇಳಿ ಬರುತ್ತಿದೆ. ಅಂದಹಾಗೇ ತೆರೆಮೇಲೆ ಶಿವಕುಮಾರ ಸ್ವಾಮೀಜಿಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತಿರುವ ಆ ಸ್ಟಾರ್ ನಟ ಯಾರು ಗೊತ್ತಾ…?ವಿಶ್ವ ಕಂಡ ಸರ್ವ ಶ್ರೇಷ್ಟ ಸನ್ಯಾಸಿ, ನಾಡಿನ ಕಳಶ ಡಾ. ಶಿವಕುಮಾರ ಸ್ವಾಮೀಜಿಯವರ ಬಯೋಪಿಕ್ ಮಾಡುವ ಯೋಜನೆಗೆ ಚಾಲನೆ ಸಿಕ್ಕಿದೆ. ಸ್ವಾಮಿಜಿಯವರ ಪಾತ್ರಕ್ಕೆ ಒಬ್ಬ ಸೂಕ್ತ ನಟನ ಹೆಸರೇ ಕೇಳಿ ಬರುತ್ತಿದೆ. ಕಿಚ್ಚ ಸುದೀಪ್ ಸ್ವಾಮಿಜೀಯವರ ಪಾತ್ರವನ್ನು ಆ ನಟರಿಂದ ಮಾಡಿಸಲು ಯೋಚಿಸಿದ್ದಾರೆ ಒಬ್ಬ ಖ್ಯಾತ ನಿರ್ದೇಶಕರು. 13ಕ್ಕೂ ಹೆಚ್ಚು ಭಕ್ತಿ ಪ್ರಧಾನ, ಸಾಮಾಜಿಕ ಕಳಕಳಿಯ ಸಿನಿಮಾಗಳನ್ನು ಮಾಡಿರುವ ಡೈರೆಕ್ಟರ್. ಅವರೇ ನಿರ್ದೇಶಕ ಪುರುಷೋತ್ತಮ್..
ಈ ಮೊದಲು ಪುರುಷೋತ್ತಮ್ ಸಿದ್ಧಗಂಗಾ ಮಠದ ಬಗ್ಗೆ ಒಂದು ಸಿನಿಮಾವನ್ನು ಮಾಡಿದ್ದಾರೆ. ಆ ಚಿತ್ರವೇ ಜ್ಞಾನ ಜೋತಿ ಸಿದ್ಧಗಂಗಾ ಸಿನಿಮಾ. ಈ ಚಿತ್ರದಲ್ಲಿ ಶ್ರೀ ಮಠದ ಸಂಪೂರ್ಣ ಪರಂಪರೆ ಹಾಗೂ ಇತಿಹಾಸ ಸಾರುವ ಕಥೆ ಇದೆ. ಜ್ಞಾನ ಜೋತಿ ಸಿದ್ಧಗಂಗಾ ಸಿನಿಮಾದ ಮತ್ತೊಂದು ವಿಶೇಷ ಕಾಯಕ ಯೋಗಿ ಶ್ರೀ ಡಾ.ಶಿವಕುಮಾರ ಸ್ವಾಮೀಜಿಯವರೇ ಈ ಚಿತ್ರದಲ್ಲಿ ನಟಿಸಿದರು. ಜೊತೆಗೆ ಸಾಹಸ ಸಿಂಹ, ಅಭಿನವ ಭಾರ್ಗವ ಡಾ.ವಿಷ್ಣುವರ್ಧನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.ಭಕ್ತಿ ಪ್ರಧಾನ ಚಿತ್ರಗಳಿಗೆ ಹೆಸರುವಾಸಿಯಾಗಿರುವ ನಿರ್ದೇಶಕ ಪುರುಷೋತ್ತಮ್ ಈಗ ಶ್ರೀಗಳ ಬಗ್ಗೆ ಸಂಪೂರ್ಣ ಚರಿತ್ರೆ. ಬಯೋಪಿಕ್ ಮಾದರಿಯ ಸಿನಿಮಾ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಸಿನಿಮಾಗೆ ಬೇಕಾಗಿರುವ ತಯಾರಿಯನ್ನು ಕೂಡ ಮಾಡಿಕೊಂಡಿದ್ದಾರೆ.ಸುದೀಪ್ರಂತಹ ದೊಡ್ಡ ಸ್ಟಾರ್ ನಟ ಶ್ರೀಗಳ ಪಾತ್ರವನ್ನು ನಿರ್ವಹಿಸಿದ್ರೆ ದೇಶಿಯ ಮಟ್ಟದಲ್ಲಿ ಕನ್ನಡ ಸಿನಿಮಾ ತಲುಪುತ್ತದೆ ಅನ್ನೋದು ಅವರ ನಿರೀಕ್ಷೆ. ಡಾ.ಶಿವಕುಮಾರ ಸ್ವಾಮೀಜಿಯವರ ಪಾತ್ರವನ್ನು ಸುದೀಪ್ ಅವರ ಕೈಯಲ್ಲಿ ಮಾಡಿಸ ಬೇಕು ಅನ್ನೋ ಇರಾದೆ ಪುರೋಷತ್ತಮ್ ಅವರದ್ದಾಗಿದ್ರೆ. ಇನ್ನೊಂದು ಮಹಾದಾಸೆ. ಶ್ರೀ ಡಾ.ಶಿವಕುಮಾರ ಸ್ವಾಮೀಜಿಯವರ ಗುರು ಉದ್ಧಾನ ಶಿವಯೋಗಿಗಳ ಪಾತ್ರಕ್ಕೆ ಉಪೇಂದ್ರ ಸೂಕ್ತ ಎಂದು ಕಲ್ಪಿಸಿಕೊಂಡಿದ್ದಾರೆ ನಿರ್ದೇಶಕರು. ಹಾಗೇನಾದ್ರು ಒಂದು ವೇಳೆ ಸುದೀಪ್ ಶ್ರೀಗಳ ಪಾತ್ರಕ್ಕೆ, ಒಪ್ಪಿಕೊಂಡು ಉಪೇಂದ್ರರವರು ಉದ್ಧಾನ ಶಿವಯೋಗಿಗಳ ಪಾತ್ರಕ್ಕೆ ಸಿದ್ಧವಾದ್ರೆ ಮತ್ತೊಮ್ಮೆ ಮುಕುಂದ ಮುರಾರಿ ಯನ್ನು ನೋಡಬಹುದು.
Comments