ಇದೆಂಥಾ ಶಿಕ್ಷೆ…!! ಹೆಣ್ಣು ಮಕ್ಕಳ ಸ್ತನಗಳು ಬೆಳೆಯದಂತೆ ತಡೆಯಲು ಹೀಗೂ ಮಾಡ್ತಾರಾ…!!! ಕಾರಣ ಏನ್ ಗೊತ್ತಾ..?

ಜಗತ್ತು, ನಾವು, ನೀವೆಲ್ಲಾ ಎಷ್ಟೆ ಮುಂದುವರೆದ್ರೂ ಕೂಡ ಕೆಲವೊಂದು ಇನ್ನೂ ಅನಾಗರೀಕತೆ ನೆಲೆಸಿದೆ ಅನ್ನೋದಕ್ಕೆ ಇಲ್ಲಿ ಒಂದು ನಿದರ್ಶನವಿದೆ ಓದಿ… ಕೆಲವೊಮ್ಮೆ ಕೆಲವೊಂದು ನೀಚ ಮತ್ತು ಪೈಶಾಚಿಕವಾಗಿರುವಂತಹ ಸಂಪ್ರದಾಯಗಳು, ಆಚರಣೆಗಳು ಈಗಲೂ ಆಚರಣೆಯಲ್ಲಿ ಇದೆ ಎಂದರೆ ಅದನ್ನು ನಾವೆಲ್ಲ ನಂಬಲೇ ಬೇಕು. ಅದರಲ್ಲೂ ಆಫ್ರಿಕಾದ ಕೆಲವೊಂದು ರಾಷ್ಟ್ರಗಳಲ್ಲಿ ಕೆಲವೊಂದು ಆಚರಣೆಗಳ ಬಗ್ಗೆ ಕೇಳಿದರೆ ಅದು ತುಂಬಾ ಭಯಾನಕವಾಗಿರುತ್ತವೆ.. ಇಂತಹ ಆಚರಣೆಗಳಿಗೆ ಹೆಚ್ಚಾಗಿ ಮಹಿಳೆಯರನ್ನೇ ಬಳಸಿಕೊಳ್ಳಲಾಗುತ್ತದೆ. ಇದರಿಂದಾಗಿ ಅಲ್ಲಿನ ಮಹಿಳೆಯರು ಪಡಬಾರದ ಕಷ್ಟಕ್ಕೆ ಒಳಗಾಗುತ್ತಿದ್ದಾರೆ... ಅಲ್ಲಿನ ಜನರು ಶಿಕ್ಷಣದಲ್ಲಿ ಹಿಂದುಳಿದಿರುವುದು ಕೂಡ ಇದಕ್ಕೆ ಕಾರಣವಾಗಿದೆ ಎನ್ನಬಹುದು..
ಇಲ್ಲಿ ನಾವು ಹೇಳುತ್ತಿರುವುದು ಶೈಕ್ಷಣಿಕವಾಗಿಯು ತುಂಬಾ ಮುಂದುವರಿದ ಮತ್ತು ಆರ್ಥಿಕವಾಗಿಯು ಸಬಲವಾಗಿರುವಂತಹ ರಾಷ್ಟ್ರ ಬ್ರಿಟನ್ ಬಗ್ಗೆ. ಇಂತಹ ಒಂದು ಅನಾಗರಿಕ ಆಚರಣೆ ಜಾರಿಯಲ್ಲಿದೆ ಎನ್ನಬಹುದು.... ಅಲ್ಲಿನ ಜನರು ಕೂಡ ಈ ಅಂಧಾಚರಣೆಯನ್ನು ಪಾಲಿಸುತ್ತಿದ್ದಾರೆ ಎನ್ನುವುದಕ್ಕೆ ಇದೇ ಉತ್ತಮ ಉದಾಹರಣೆ…. ಇಂತಹ ಆಚರಣೆ ಯಾವುದು ಎಂದು ನೀವು ಯೋಚನೆ ಮಾಡುತ್ತಿರಬಹುದು... ಬ್ರಿಟನ್ ನಲ್ಲಿ ಸಣ್ಣ ಹುಡುಗಿಯರ ಸ್ತನಗಳಿಗೆ ಬಿಸಿಯನ್ನು ಇಟ್ಟು ಅವುಗಳು ಬೆಳೆಯದಂತೆ ಮಾಡಲಾಗುತ್ತದೆಯಂತೆ.. ಹುಡುಗಿಯರಲ್ಲಿ ಸ್ತನಗಳು ಬೆಳೆಯದಂತೆ ತಡೆಯಲು ದೈಹಿಕ ಹಾಗೂ ಮಾನಸಿಕವಾಗಿ ಹಿಂಸೆ ನೀಡಲಾಗುತ್ತದೆ. ಈ ಆಚರಣೆಯನ್ನು ಬಹಿರಂಗಪಡಿಸುವಂತಹ ಯಾವುದೇ ರೀತಿಯ ಅಧಿಕೃತ ದಾಖಲೆಗಳು ಇದುವರೆಗೆ ಸಿಕ್ಕಿಲ್ಲ. ಬ್ರಿಟನ್ ನ ಉತ್ತರ ಭಾಗದಲ್ಲಿ ಸಾವಿರಕ್ಕೂ ಹೆಚ್ಚಿನ ಹುಡುಗಿಯರು ಇಂತಹ ಆಚರಣೆಗೆ ಒಳಪಟ್ಟಿದ್ದಾರೆ ಎಂದು ವರದಿಗಳು ಹೇಳಿವೆ. ಇಂತಹ ಆಚರಣೆಗೆ ಗುರಿಯಾಗಿರುವಂತಹ 10 ರ ಹರೆಯದ ಹುಡುಗಿಗೆ ತಾನು ಚಿಕಿತ್ಸೆ ನೀಡಿರುವುದಾಗಿ ನರ್ಸ್ ಒಬ್ಬರು ಹೇಳಿಕೊಂಡಿದ್ದಾರೆ. ಈ ರೀತಿಯ ಅಮಾನವೀಯವಾಗಿರುವಂತಹ ಆಚರಣೆಯನ್ನು ಹುಡುಗಿಯ ತಾಯಿ ಅಥವಾ ಚಿಕ್ಕಮ್ಮ ಅಥವಾ ದೊಡ್ಡಮ್ಮ ಮಾಡುವರು. ಸ್ತನಗಳು ಬೆಳೆಯದಂತೆ ಮಾಡಲು ಈ ಮಹಿಳೆಯರು ಹುಡುಗಿಯರ ಎದೆಯ ಮೇಲೆ ಬಿಸಿ ಮಾಡಿದಂತಹ ಕಲ್ಲನ್ನು ಇಡುವರು. ಇಂತಹ ಆಚರಣೆಗೆ ಗುರಿಯಾಗುವಂತಹ ಹುಡುಗಿಯರ ವಯಸ್ಸು 9ರಿಂದ 15 ವರ್ಷ ಆಗಿರುವುದು. ಪುರುಷರ ಕಣ್ಣು ಬೀಳದಂತೆ ತಡೆಯಲು ಈ ಆಚರಣೆ ಮಾಡಲಾಗುತ್ತದೆ ಎಂದು ನಂಬಲಾಗಿದೆ. ಈ ಕಾಲದಲ್ಲೂ ಕೂಡ ಈ ರೀತಿಯ ಮೂಡನಂಬಿಕೆಗಳು ಇನ್ನು ಪ್ರಚಲಿತದಲ್ಲಿವೆ ಎಂದರೆ ಊಹೆ ಮಾಡಲು ಕೂಡ ಅಸಾಧ್ಯ.
Comments