ನ್ಯಾಯ ಎಲ್ಲಿದೆ ….!! ಆರಕ್ಷಕರೇ ರಾಕ್ಷಸರಾದ ಕಥೆ…!!! ವಿಡಿಯೋ ನೋಡಿ
ಆರಕ್ಷಕರೇ ರಾಕ್ಷಸರಾದ ಕಥೆ ಇದು. ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ದೂರು ನೀಡಲು ಬಂದ ಮಹಿಳೆಯರ ಮೇಲೆ ಪೊಲೀಸರು ದರ್ಪ ತೋರಿಸಿ ಅಮಾನವೀಯತೆ ಮೆರೆದಿದ್ದಾರೆ. ಪೊಲೀಸರು ಸಾರ್ವಜನಿಕರ ಹಿತವನ್ನು ಕಾಯಬೇಕು. ಆದರೆ ಇಲ್ಲಿ ಪೊಲೀಸರಾದವರು, ನೊಂದವರ ಬಾಳಿಗೆ ದಾರಿ ತೋರದೇ ಠಾ ಣೆಗೆ ಬಂದ ಅಸಾಹಕ ಮಹಿಳೆಯರ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ. ಅಂದಹಾಗೇ ಕುಮಾರಸ್ವಾಮಿ ಲೇ ಔಟ್ ಠಾಣೆಗೆ ಬಂದ ಮಹಿಳೆಯರ ಮೇಲೆ ಎಎಸ್ಐ ದರ್ಪ ಮೆರೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಕೌಟುಂಬಿಕ ಸಮಸ್ಯೆ ಹಿನ್ನಲೆಯಲ್ಲಿ ದೂರು ನೀಡಲು ಬಂದ ಮಹಿಳೆಯರ ಮೇಲೆ ಎಎಸ್ಐ ರೇಣುಕಯ್ಯ ಹಲ್ಲೆ ನಡೆಸಿದ್ದಾರೆ. ಸಹಾಯ ಮಾಡಿ ಎಂದು ಬಂದ ಮಹಿಳೆ ಹಾಗೂ ಯುವತಿಯ ಕುತ್ತಿಗೆ ಹಿಡಿದು ಠಾಣೆಯಿಂದ ಹೊರ ದಬ್ಬಿ ಇಬ್ಬರ ಮೇಲೂ ಹಲ್ಲೆ ಮಾಡಿದ್ದಾರೆ. ಯೂನಿಫಾರ್ಮ್ನಲ್ಲಿ ಇಲ್ಲದಿದ್ರೂ ನ್ಯಾಯಕೇಳಲು ಬಂದ ಮಹಿಳೆಯರ ಮೇಲೆ ಹಲ್ಲೆ ಮಾಡಿದ್ದಾರೆ. ಎಎಸ್ಐ ಹಲ್ಲೆ ಮಾಡಿದ್ದಾರೆ ಎನ್ನಲಾಗಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಡಿಸಿಪಿ ಅಣ್ಣಾಮಲೈ ಸುಪರ್ದಿಯ ಠಾಣೆಯಲ್ಲಿ ಈ ಕೃತ್ಯ ನಡೆದಿದೆ. ಅಂದಹಾಗೇ ಹಲ್ಲೆ ಮಾಡಿರುವ ವಿಡಿಯೋವನ್ನು ಅಲ್ಲಿನ ಪೊಲೀಸರೇ ಸೆರೆ ಹಿಡಿದಿದ್ದು ಇದೀಗ ವಿಡಿಯೋ ವೈರಲ್ ಆಗಿದೆ.
Comments