ಹತ್ತು ಸಾವಿರವಷ್ಟೇ ಪಾವತಿ ಮಾಡಿ,17 ಲಕ್ಷ ಮರಳಿ ಪಡೆಯಿರಿ : ಸಿಂಪಲ್ ಪ್ಲ್ಯಾನ್......!!!

ನಾವು ಗಳಿಸಿದ ಹಣ ದುಪ್ಪಟ್ಟಾಗಬೇಕು ಅಲ್ಲವೇ. ನಾವು ಬ್ಯಾಂಕಿಗೆ ಪಾವತಿಸಿದ ಹಣ ಮರಳಿ ಪಡೆಯುವಾಗ ಅತೀ ಹೆಚ್ಚು ಮೊತ್ತವಾಗಿ ಪಡೆಯಬೇಕಾದರೇ ಒಂದಷ್ಟು ಜ್ಞಾನವಿರ ಬೇಕು. ಕೆಲ ಬುದ್ಧಿವಂತರು ಬ್ಯಾಂಕಿನಲ್ಲಿ ಪಾವತಿ ಮಾಡುವ ಹಣ ಇಷ್ಟೇ ಇರಬೇಕೆಂದು ಯೋಚಿಸುತ್ತಾರೆ. ಅದರಂತೇ ಹೆಚ್ಚು ಹಣವನ್ನು ಕೂಡ ಪಡೆಯುತ್ತಾರೆ. ಆದರೆ ಮತ್ತಷ್ಟು ಜನಕ್ಕೆ ಬ್ಯಾಂಕಿನಿಂದ ಸಿಗುವ ಸೌಲಭ್ಯದ ಬಗ್ಗೆ ಅಷ್ಟೇನು ತಿಳುವಳಿಕೆ ಇರುವುದಿಲ್ಲ. ಈ ಕೆಳಗೆ ಕೊಟ್ಟಿರುವ ಒಂದಷ್ಟು ಮಾಹಿತಿ ಮೇಲೆ ಕಣ್ಣಾಡಿಸಿ. ಎಸ್ ಬಿಐ ನಲ್ಲಿ ಹತ್ತು ಸಾವಿರ ಹಣ ಪಾವಿತಿಸಿದರೇ, ನೀವು ಮತ್ತೆ ಹಣ ರಿಟರ್ನ್ ತೆಗೆದುಕೊಳ್ಳುವಾಗ ನಿಮ್ಮ ಮೊತ್ತ ಎಷ್ಟಾಗುತ್ತೆ ಗೊತ್ತಾ…? ಹಾಗಿದ್ರೆ ಅದರ ಕಂಪ್ಲೀಟ್ ಡೀಟೈಲ್ ಇಲ್ಲಿದೆ ನೋಡಿ….
ಎಸ್ಬಿಐ ನಲ್ಲಿ ಆರ್ ಡಿ ಇಡಬೇಕಾದರೇ ಯಾವುದೇ ವಯಸ್ಸಿನ ಲಿಮಿಟ್ ಇಲ್ಲ. ಕನಿಷ್ಟ ಮೊತ್ತ 100 ರೂ ನಿಂದಲೂ ನೀವು ಆರ್ಡಿ ಇಡಬಹುದು. ಕನಿಷ್ಟ ಕಾಲವಧಿ ಒಂದು ವರ್ಷದ ಅವಧಿ ಪಡೆಯಬಹುದು. ಗರಿಷ್ಟ 10 ವರ್ಷದ ತನಕವೂ ಆರ್’ಡಿ ಮಾಸಿಕ ಕಂತನನ್ನು ಪಾವತಿಸಬಹುದು. ನೀವು ಎಸ್ಬಿಐ ಆರ್’ಡಿ ಅಕೌಂಟ್ ಮಾಡಿಸಿದ್ರೆ ಅವಧಿಗೂ ಮುನ್ನವೇ ಸಾಲ ಪಡೆಯಬಹುದು. ಅವಧಿಗೆ ಸರಿಯಾಗಿ ಹಣ ಪಾವಿಸದೇ ಇದ್ದರೇ ಅವಧಿಗೆ ಅನುಗುಣವಾಗಿ ದಂಡ ಕಟ್ಟಬೇಕಾಗುತ್ತದೆ. ಎಸ್ಬಿಐ ಆರ್’ಡಿ ಇಂಟರೆಸ್ಟ್ ಬಗ್ಗ ತಿಳಿಯಬೇಕಾ…
ಒಂದು ವರ್ಷದಿಂದ 2 ಅವಧಿಗೆ ಆರ್’ಡಿ ಮಾಡಿಸಿದ್ರೆ 6.80 ರೇಟ್ ಸಾಮಾನ್ಯ ಜನರಿಗೆ, 7.20 ಹಿರಿಯ ನಾಗರೀಕರಿಗೆ ಬಡ್ಡಿದರ ನೀಡಲಾಗುತ್ತದೆ. ಅಂದಹಾಗೇ ಇಲ್ಲಿ ಅವಧಿಗೆ ಅನುಗುಣವಾಗಿ ಆರ್’ಡಿ ಇಂಟರೆಸ್ಟ್ ನ್ನು ಎಸ್ಬಿಐ ಬ್ಯಾಂಕ್ ಪಾವತಿ ಮಾಡಲಾಗುತ್ತದೆ. ಅಲ್ಲದೇ ಐದು ವರ್ಷದಿಂದ ಹತ್ತು ವರ್ಷದ ಆರ್ ಡಿ ಮಾಡಿಸಿದ್ರೆ 6.85 ಸಾಮಾನ್ಯ ಜನರಿಗೆ, ಅದೇ ರೀತಿ 7.35 ರೇಟ್ ಹಿರಿಯ ನಾಗರೀಕರಿಗೆ ನಿಗಧಿ ಮಾಡಲಾಗಿದೆ.
ಆರ್’ಡಿಯನ್ನು ನಾವು ವಾಪಸ್ ಪಡೆಯುವಾಗ ನಾವು ಪಾವತಿಸಿದ ಹಣಕ್ಕೆ ನಾವು ಮರಳಿ ಪಡೆಯುವ ಮೊತ್ತವೆಷ್ಟು ಗೊತ್ತಾ..?
ಎಸ್ಬಿಐ ನಲ್ಲಿ 1000ರೂ ಆರ್’ಡಿ ಯನ್ನು ಒಂದು ವರ್ಷದ ಕಾಲವಧಿಗೆ ಮಾಡಿಸಿದ್ರೆ ರೇಟ್ ಆಪ್ ಇಂಟರೆಸ್ಟ್ 6.80 % ಆದರೆ ನಾವು ಅದನ್ನು ಮರಳಿ ಪಡೆಯುವಾಗ 12.449 ರೂ. ಮೊತ್ತವಾಗಿ ಪಡೆಯುತ್ತೇವೆ.
2000 ಆರ್ಡಿ ಮಾಡಿಸಿದ್ರೆ ಮೂರು ವರ್ಷಕ್ಕೆ 6.80% ರಂತೇ 80.025 ನ್ನು ಮರಳಿ ಪಡೆಯುತ್ತೇವೆ.ಅದೇ ರೀತಿ 5000 ಆರ್ ಡಿ ಪಾವತಿ ಮಾಡಿದ್ರೆ ಐದು ವರ್ಷಕ್ಕೆ 6.80% ರಂತೇ 3.57779 ನ್ನು ಮರಳಿ ಪಡೆಯುತ್ತೇವೆ.
ಇನ್ನು 10.000 ಆರ್ ಡಿ 10 ವರ್ಷಕ್ಕೆ ಮಾಡಿಸಿದ್ರೆ , 7.35% ರೇಟ್ ಅಂತೇ ನಮಗೆ 17,71,008 ರೂ ನಮ್ಮ ಕೈ ಸೇರುತ್ತದೆ. ಇಲ್ಲಿ ಒಂದು ಗಮದಲ್ಲಿಡಬೇಕಾದ ಅಂಶವೇನು ಗೊತ್ತಾ... ಹತ್ತು ಸಾವಿರಕ್ಕಿಂತ ಹೆಚ್ಚು ಬಡ್ಡಿಯನ್ನು ನೀವುಗಳಿಸುವುದಾದ್ರೆ ಸರ್ಕಾರಕ್ಕೆ ನೀವು ತೆರಿಗೆ ಕಟ್ಟಬೇಕಾಗುತ್ತದೆ.
Comments