ರಾಜ್ಯದ ರೈತರಿಗೆ ಸಿಹಿಸುದ್ದಿ ನೀಡಿದ ಮುಖ್ಯಮಂತ್ರಿ : ಗಣರಾಜ್ಯೋತ್ಸವಕ್ಕೆ ಬಂಪರ್ ಕೊಡುಗೆ….
ಈ ಬಾರಿಯ ಗಣರಾಜ್ಯೋತ್ಸವಕ್ಕೆ ರಾಜ್ಯ ಸರ್ಕಾರ ರೈತರಿಗೆ ಭರ್ಜರಿ ಆಫರ್ ಕೊಟ್ಟಿದೆ. ದೊಸ್ತಿ ಸರ್ಕಾರದ ನಾಯಕ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರಾಜ್ಯದ ಜನತೆಗೆ ಗಣರಾಜ್ಯೋತ್ವಕ್ಕೆ ಬಂಪರ್ ಕೊಡುಗೆ ನೀಡಿದ್ದಾರೆ. ಇನ್ನೂ ಕೂಡ ರೈತರ ಆತ್ಮಹತ್ಯೆ ನಿಂತಿಲ್ಲ. ತಾನು ಬೆಳೆದ ಬೆಳೆಗೆ ಸರಿಯಾದ ಬೆಂಬಲ ಬೆಲೆ ಸಿಗದೇ ಅದೆಷ್ಟೋ ಬಾರಿ, ಬೆಳೆಗಳನ್ನು ರಸ್ತೆಗೆ ಚೆಲ್ಲಿ ತಲೆ ಮೇಲೆ ಕೈ ಹೊತ್ತಿ ಕೂತುಕೊಳ್ಳುವ ಅನಿವಾರ್ಯ ಪರಿಸ್ಥಿತಿಯನ್ನು ಎದುರಿಸಿದ್ದಾರೆ ರಾಜ್ಯದ ರೈತರು. ಆದರೆ ಈ ಬಾರಿ ರೈತರ ಸಮಸ್ಯೆಗೆ ಒಂದು ಬ್ರೇಕ್ ಹಾಕಲು ಸರ್ಕಾರ ಅಣಿಯಾಗಿದೆ. ಆದರೆ ಈ ಬಾರಿ ರೈತರಿಗೆ ಘೋಷಣೆ ಮಾಡುತ್ತಿರುವ ಆಫರ್ ಗಣರಾಜ್ಯೋತ್ವಕ್ಕೆ ಸಿಕ್ಕ ಬಂಪರ್ ಕೊಡುಗೆ ಎನ್ನಲಾಗುತ್ತಿದೆ.
ರೈತರು ಬೆಳೆದ ಬೆಳೆಗಳಿಗೆ ರಾಜ್ಯ ಸರ್ಕಾರ, ಬೆಲೆ ನೀಡಲು ಮುಂದಾಗುತ್ತಿದೆ. ಈಗಾಗಲೇ ಬ್ಯಾಂಕುಗಳಲ್ಲಿ ರೈತರು ಅಪಾರ ಪ್ರಮಾಣದ ಸಾಲ ಮಾಡಿ ಬಡ್ಡಿ ಕಟ್ಟಲಾಗದೇ ಹೈರಾಣಾಗಿದ್ದಾರೆ. ಸ್ವಲ್ಪ ಮಟ್ಟಿಗೆ ಸರ್ಕಾರ ರೈತರ ಸಾಲ ತೀರಿಸಿದ್ದರೂ, ಇನ್ನೂ ಅವರ ಸಂಕಷ್ಟಕ್ಕೆ ಪರಿಹಾರ ಸಿಕ್ಕಿಲ್ಲ. ಆದರೆ ಈ ಬಾರಿ ರಾಜ್ಯ ಸರ್ಕಾರ ರೈತರಿಗೆ ಹೊಸ ಯೋಜನೆಯೊಂದನ್ನು ತಂದಿದೆ. ಅದರ ಪ್ರಕಾರ ರೈತರು ಯಾವುದೇ ಬ್ಯಾಂಕುಗಳಲ್ಲಿ ಸಾಲ ಪಡೆಯದೇ ಸ್ವಾವಲಂಬಿಗಳಾಗಲು ರಾಜ್ಯ ಸರ್ಕಾರ ಬೆಳೆಗಳ ಮಾರುಕಟ್ಟೆ ಖಾತರಿ ಯೋಜನೆಯನ್ನು ಜಾರಿಗೆ ತಂದಿದೆ. ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳಿಂದ ರೈತರಿಗೆ ಆಗುತ್ತಿದ್ದ ವಂಚನೆಯನ್ನು ತಡೆಯಲು ರಾಜ್ಯ ಸರ್ಕಾರ ಮುಂದಾಗಿದೆ. ಇನ್ನು ಮುಂದೆ ರೈತರ ಬೆಳೆಗಳಿಗೆ ಈಗ ಇರುವ ಕನಿಷ್ಟ ಬೆಂಬಲ ಬೆಲೆಯನ್ನು ಹೆಚ್ಚು ಮಾಡುವುದಲ್ಲದೇ, ವಾಣಿಜ್ಯ ಹಾಗೂ ಸಿರಿಧಾನ್ಯಗಳಿಗೂ ಸರ್ಕಾರ ಬೆಂಬಲ ಬೆಲೆ ನೀಡಲಾಗುತ್ತದೆಯಂತೆ.
ಅಂದಹಾಗೇ ಈಗ ಬೆಳೆಗಳಿಗಿರುವ ಮಾರುಕಟ್ಟೆ ಬೆಲೆಗಿಂತ ದುಪ್ಪಟ್ಟು ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದೆ. ಫೆ.8 ರಂದು ಕುಮಾರಸ್ವಾಮಿ ಅವರು ಬಜೆಟ್ನಲ್ಲಿ ಇದನ್ನು ಮಂಡಿಸಲಾಗುತ್ತದೆ, ಇದರ ಜೊತೆಗೆ ರೈತರಿಗೆ ಸಹಾಯವಾಗುವಂತೆ ಉಡುಗೊರೆಗಳು ಕೂಡ ನೀಡಲಾಗುತ್ತದೆ ಎಂದಿದ್ದಾರೆ. ಫೆ. 8 ನಂತರ ಮಾರುಕಟ್ಟೆ ಖಾತರಿ ಯೋಜನೆ ಜಾರಿಗೆ ಬರಲಾಗುತ್ತದೆ. ಪ್ರಮುಖ ವಾಣಿಜ್ಯ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ಕೊಡಲಾಗುತ್ತದೆ. ಈ ಯೋಜನೆಯಿಂದ ಮಧ್ಯವರ್ತಿಗಳಿಂದ ಆಥವಾ ದಲ್ಲಾಳಿಗಳಿಂದ ರೈತರನ್ನು ರಕ್ಷಿಸಬಹುದು. ಬೆಲೆ ನಿಗಧಿ ಮಾಡುವುದು, ಮತ್ತು ರೈತರು ಬೆಳೆದ ಬೆಳೆಗಳಿಗೆ ಹೆಚ್ಚಿನ ಮೌಲ್ಯವನ್ನು ಕೊಡಲಾಗುತ್ತದೆ, ಅಲ್ಲದೇ ಸರ್ಕಾರವೇ ಅದಕ್ಕೆ ದುಪ್ಪಟ್ಟು ಕೊಟ್ಟು ಕೊಂಡುಕೊಳ್ಳಲಾಗುತ್ತದೆ. ಇದರಿಂದ ರೈರಿಗೆ ಹೆಚ್ಚು ಲಾಭ ಸಿಗಲಿದೆ. ಒಟ್ಟಾರೆ ಈ ಬಾರಿ ಬಜೆಟ್ ನಲ್ಲಿ ರಾಜ್ಯ ಸರ್ಕಾರದಿಂದ ರೈತರ ಸಂಕಷ್ಟ ಸ್ವಲ್ಪಮಟ್ಟಿಗೆ ಕಡಿಮೆಯಾಗಲಿದೆ ಎಂಬುದು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿರುವ ಅಭಿಪ್ರಾಯಗಳು.
Comments