2 ಕ್ಕಿಂತ ಹೆಚ್ಚು ಮಕ್ಕಳಿದ್ದರೆ ಸಿಗೋದಿಲ್ಲ ಮತದಾನದ ಹಕ್ಕು..!!!

ದೇಶದಲ್ಲಿ ಜನಸಂಖ್ಯೆ ಹೆಚ್ಚಾಗಿಯೇ ಇದೆ.. ಒಂದು ಸಂಸಾರಕ್ಕೆ ಒಂದು ಮಗು ಸಾಕು ಎನ್ನುವ ಮಾತು ಈಗೀನ ಜನರೇಷನ್’ಗೆ ಹೇಳಿ ಮಾಡಿಸಿದ ಹಾಗೆ ಇದೆ.. ದೇಶದಲ್ಲಿ 2ಕ್ಕಿಂತಲೂ ಹೆಚ್ಚು ಮಕ್ಕಳಿರುವವರಿಗೆ ಮತದಾನದ ಹಕ್ಕು ನೀಡಬಾರದು ಎಂದು ಯೋಗಗುರು ಬಾಬಾ ರಾಮದೇವ್ ಹೇಳಿದ್ದಾರೆ. ಅಲ್ಲದೇ ಚುನಾವಣೆ ನಿಲ್ಲುವ ಅವಕಾಶವನ್ನೂ ಕೂಡ ನೀಡಬಾರದು ಎಂದು ತಿಳಿಸಿದ್ದಾರೆ.. 2ಕ್ಕಿಂತ ಹೆಚ್ಚು ಮಕ್ಕಳನ್ನು ಮಾಡಿಕೊಂಡವರಿಗೆ ಮತದಾನದ ಹಕ್ಕು, ಸರ್ಕಾರಿ ಉದ್ಯೋಗ, ಸರ್ಕಾರಿ ಆಸ್ಪತ್ರೆ ಸೌಲಭ್ಯ, ಸರ್ಕಾರಿ ಶಾಲೆ ಬಳಕೆಗೂ ಕೂಡ ಅವಕಾಶ ನೀಡಬಾರದು ಎಂಬ ಮಾತನ್ನು ಹೇಳಿದ್ದಾರೆ.
ಜನಸಂಖ್ಯೆ ನಿಯಂತ್ರಣ ತುಂಬಾ ಮುಖ್ಯ ..ಹೀಗೆ ಮಾಡುವುದರಿಂದ ಜನಸಂಖ್ಯೆ ನಿಯಂತ್ರಣ ಸಾಧ್ಯ ಎಂದು ಪತಂಜಲಿ ಮುಖ್ಯಸ್ಥ ರಾಮದೇವ್ ಹೇಳಿದ್ದಾರೆ. ಅಲಿಘರ್ ನಲ್ಲಿ ನಡೆದ ಪತಂಜಲಿ ಪರಿಧಾನ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಾ ಈ ಹೇಳಿಕೆ ನೀಡಿದ್ದಾರೆ. ಭಾರತದಲ್ಲಿ ಜನಸಂಖ್ಯೆ ಹೆಚ್ಚಾಗುತ್ತಲೇ ಇದೆ. ಆದ್ದರಿಂದ ಜನಸಂಖ್ಯೆ ನಿಯಂತ್ರಣ ಮಾಡುವ ಅಗತ್ಯವಿದೆ. ಹಿಂದೂ ಹಾಗೂ ಮುಸ್ಲಿಂ ಯಾರೇ ಆಗಲಿ 2ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದರೆ ಇಂತಹ ಸೌಲಭ್ಯ ನೀಡಬಾರದು ಎಂದು ತಿಳಿಸಿದ್ದಾರೆ.
Comments