ಶ್ರೀಗಳ ಜೊತೆ ಓಡಾಡುತ್ತಿದ್ದ ನಾಯಿ ಕಾಣೆಯಾಗಿದೆ..! ಎಲ್ಲಿಗೆ ಹೋಯ್ತು ಬೈರಾ...!!!
ಮನುಷ್ಯನಿಗಿಂತ ನಾಯಿಗೆ ಹೆಚ್ಚು ನಿಯತ್ತು ಅಂತಾರೆ…ಒಂದು ದಿನ ಬೀದಿ ನಾಯಿಗೆ ಊಟ ಹಾಕುದ್ರೆ ಸಾಕು ಅದು ಇನ್ನು ಮುಂದೆ ನಮ್ ಮನೆಯನ್ನ ನಿಯತ್ತಾಗಿ ಕಾಯುತ್ತಲೇ ಇರುತ್ತದೆ…ಅದಕ್ಕೆ ನಾಯಿಯನ್ನು ನಿಯತ್ತಿಗೆ ಹೋಲಿಸೋದು… ಅದಕ್ಕೆ ತಕ್ಕ ನಿದರ್ಶನ ಇಲ್ಲಿದೆ ನೋಡಿ.. ಮೂರು ದಿನಗಳ ಹಿಂದಷ್ಟೆ ತುಮಕೂರು ಶ್ರೀ ಸಿದ್ದಗಂಗಾ ಮಠದ ಶ್ರೀಗಳ ಯುಗಾಂತ್ಯವಾಗಿದೆ..ಆದರೆ ಭೈರ ಹೆಸರಿನ ಶ್ವಾನ ಮಠದಲ್ಲಿ ಸದಾ ಶ್ರೀಗಳೊಂದಿಗೆ ಓಡಾಡುತ್ತಿತ್ತು… ಸಿದ್ದಗಂಗಾ ಸ್ವಾಮೀಜಿಗಳು ಲಿಂಗೈಕ್ಯರಾದ ಬಳಿಕ ಭೈರ ಎನ್ನುವ ಶ್ವಾನ ಕಾಣೆಯಾಗಿದ್ದಾನೆ..
ಶ್ರೀಗಳು ಲಿಂಗೈಕ್ಯ ಆಗುವ ಮೂರು ದಿನ ಹಿಂದೆಯೇ ಭೈರ ನೀರು ಆಹಾರವನ್ನು ಬಿಟ್ಟಿತ್ತು ಎನ್ನಲಾಗಿದೆ. ಶ್ರೀಗಳು ಲಿಂಗೈಕ್ಯರಾದ ದಿನದಿಂದ ಭೈರ ನಾಪತ್ತೆ ಆಗಿದ್ದಾನೆ. ಬಹುಶಃ ಈ ನಾಯಿ ಕೂಡ ಸಾವನ್ನಪ್ಪಿರುತ್ತದೆ. ಶ್ರೀಗಳು ಹೊರಗೆ ಹೋಗಿದ್ದಾಗ, ಭಕ್ತಾದಿಗಳಿಗೆ ದರ್ಶನ ನೀಡದಾಗ ಭೈರ ಶ್ರೀಗಳ ಜಾಗದಲ್ಲಿ ಹೋಗಿ ಅಲ್ಲಿ ಕುಳಿತು ಅಳುತ್ತಿತ್ತು ಎಂದು ಮಠದ ಸಿಬ್ಬಂದಿ ಹೇಳಿದ್ದಾರೆ. ರಾ ಸೋಮನಾಥ್ ಅವರ ಪ್ರಕಾರ ಭೈರ ಮಠಕ್ಕೆ ಬಂದ ಬಗೆಯನ್ನು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಅವರು ಹೇಳಿರುವ ವಿವರ ಇಲ್ಲಿದೆ. ತಾಯಿಯ ಋಣ ಬಿಟ್ಟರೆ ನಾಯಿಯ ಋಣ ಅಂತಾರಲ್ಲ ಹಾಗೆ ನನ್ನನ್ನು ಪೂಜ್ಯರ ಜೊತೆ ಬೆಸೆದದ್ದು ನಾಯಿಯ ಋಣವೆ ಎಂಬುದನ್ನು ತಿಳಿಸಿದ್ದಾರೆ. ಬೈರ ಕಾಣೆಯಾಗಿರುವ ವಿಷಯವಾಗಿ ಮಠದಲ್ಲಿರುವ ಎಲ್ಲರೂ ಬೇಸರ ವ್ಯಕ್ತ ಪಡಿಸಿದ್ದಾರೆ.
Comments