‘ಎಷ್ಟೇ ಕೆಲಸದ ಒತ್ತಡವಿದ್ರೂ ಆ ಸ್ಥಳಕ್ಕೆನಾನು ಹೋಗ್ತಾಯಿದ್ದೆ’’ : ಮೋದಿ ಬಿಚ್ಚಿಟ್ಟ ರಹಸ್ಯ..!!!

ನನಗೆ ಆಗ 17 ವರ್ಷ. ಆ ವಯಸ್ಸಿನಲ್ಲಿಯೇ ಹಿಮಾಲಯಕ್ಕೆ ಹೋಗಿ ಬಂದಿದ್ದೆ. 'ಹಿಮಾಲಯದಿಂದ ಬಂದ ನಂತರ ನನ್ನ ಜೀವನಶೈಲಿ ಬದಲಾಯಿತು. ನನ್ನ ಗ್ರಾಮದಿಂದ ಅಹಮದಾಬಾದ್‌ಗೆ ಹೋದೆ. ನಗರದ ಜೀವನಶೈಲಿಗೆ ಒಗ್ಗಿಕೊಂಡೆ. ನನ್ನ ಚಿಕ್ಕಪ್ಪ ಕ್ಯಾಂಟೀನ್ ನಡೆಸುತ್ತಿದ್ದರು. ಅಲ್ಲಿ ಅವರಿಗೆ ಸಹಾಯ ಮಾಡುತ್ತಿದ್ದೆ. ಇದೇ ವೇಳೆ ಆರೆಸ್ಸೆಸ್‌ನ ಪೂರ್ಣಾವಧಿ ಕಾರ್ಯಕರ್ತನಾಗಿ ನಿಯೋಜಿತನಾದೆ' ಎಂದು ಮೋದಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ನಾನು ಹಿಂದೆ, ವರ್ಷದಲ್ಲಿ ಐದು ದಿನ ಕಾಡಿನಲ್ಲಿ ಇರುತ್ತಿದ್ದೆ ಎಂಬ ಹೇಳಿಕೆ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಭಾರೀ ಸಂಚಲನ ಮೂಡಿಸಿದ್ದಾರೆ. 'ದ ಹ್ಯೂಮನ್ಸ್ ಆಫ್ ಬಾಂಬೇ' ಎಂಬ ಜನಪ್ರಿಯ ಫೇಸ್‌ಬುಕ್ ಪುಟಕ್ಕೆ ಸಂದರ್ಶನ ನೀಡುವ ವೇಳೆ ತಮ್ಮ ಜೀವನದ ಹಲವು ಇಂಟ್ರೆಸ್ಟಿಂಗ್ ಸಂಗತಿಗಳನ್ನು ಹೇಳಿದ್ದಾರೆ. ಈ ಹಿಂದೆ ನಾನು ರೈಲು ನಿಲ್ದಾಣದಲ್ಲಿ ಚಹಾ ಮಾರುತ್ತಿದ್ದೆ ಎಂಬ ಹೇಳಿಕೆ ದೇಶದಾದ್ಯಂತ ಭಾರೀ ಸುದ್ದಿ ಮಾಡಿತ್ತು. ಮೋದಿ ಅಲೆ ಯಾವಾಗ ಹೆಚ್ಚಾಯ್ತು, ಮೋದಿ ಸ್ಟಾರ್ ವ್ಯಾಲ್ಯು ಕೂಡ ಜಾಸ್ತಿಯಾಯ್ತು. ಮೋದಿ ಮಾತು, ಭಾಷಣವೆಂದರೆ ಜನ ಕಿಕ್ಕಿರಿದು ಸೇರುತ್ತಾರೆ. ಸಾಮಾಜಿಕ ಜಾಲತಾಣಗಳ ಹೀರೋ ಕೂಡ ಆದರು. ಈಗ ಇಂಟರ್ವ್ಯೂವ್ ವೊಂದರಲ್ಲಿ ಮಾತನಾಡುತ್ತಾ 'ಈ ಹಿಂದೆ ಪ್ರತಿ ವರ್ಷ ದೀಪಾವಳಿ ಸಂದರ್ಭದಲ್ಲಿ ನಾನು 5 ದಿನ, ಯಾವುದೇ ನಾಗರಿಕ ಸಂಪರ್ಕವಿಲ್ಲದ, ಶುದ್ಧ ಕುಡಿಯುವ ನೀರು ದೊರಕುತ್ತಿದ್ದ ನಿರ್ಜನ ಅರಣ್ಯಕ್ಕೆ ಹೋಗುತ್ತಿದ್ದೆ. ಅಲ್ಲಿ ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದೆ' ಎಂದರು. ನೀವು ನನ್ನ ಹಾಗೇ ಇಂದಿನ ಯವಕರು ತಮ್ಮನ್ನು ತಾವು ಮೊದಲು ಅರಿಯ ಬೇಕು. ಆತ್ಮವಲೋಕನ ಮಾಡಿಕೊಂಡಾಗ ಮಾತ್ರ ತಮ್ಮ ಬಗ್ಗೆ ತಮಗೆ ಗೊತ್ತಾಗುವುದು ಎಂದು ಸಂದರ್ಶನ ವೇಳೆ ಯುವಜನರಿಗೆ ಸಲಹೆ ನೀಡಿದ್ದಾರೆ. ನಾನು ಚಹಾ ಮಾಡುತ್ತಿದ್ದೆ, ಕಸ ಹೊಡೆಯುತ್ತಿದ್ದೆ. ಆರ್ ಎಸ್ಎಸ್ ನನಗೆಲ್ಲವನ್ನು ಕಲಿಸಿದೆ. ಪಾತ್ರೆ ತೊಳೆಯುತ್ತಿದ್ದೆ ನಮಗದು ಆಗ ದೊಡ್ಡ ಕೆಲಸವೇನು ಅಂತಾ ಅನಿಸ್ತಾ ಇರಲಿಲ್ಲ. 'ಇಷ್ಟೆಲ್ಲ ಕೆಲಸದ ಒತ್ತಡ ಇದ್ದರೂ ಹಿಮಾಲಯದಲ್ಲಿ ನಾನು ಪಡೆದ ಮನಶಾಂತಿಯು ನನಗೆ ಸ್ಫೂರ್ತಿಯಾಗಿತ್ತು. ಬಳಿಕ ನಾನು ದೀಪಾವಳಿ ವೇಳೆ 5 ದಿವಸ ಕಾಲ ಪ್ರತಿವರ್ಷ ಎಡೆಬಿಡದ ಕೆಲಸದಲ್ಲೂ ರಜೆ ಪಡೆದು ನಿರ್ಜನ ಕಾಡಿಗೆ ತೆರಳುತ್ತಿದ್ದೆ. 5 ದಿವಸಕ್ಕೆ ಆಗುವಷ್ಟುತಿಂಡಿ-ತಿನಿಸು ಒಯ್ಯುತ್ತಿದ್ದೆ. ಅಲ್ಲಿ ಶುದ್ಧ ನೀರು ಇರುತ್ತಿತ್ತು. ಮನಶಾಂತಿ ಇರುತ್ತಿತ್ತು. ನಾನು ಹೀಗೆ ಮಾಡ್ತಾ ಇದ್ದುದ್ದು ಯಾರಿಗೂ ಗೊತ್ತೇ ಇಲ್ಲ. ರಹಸ್ಯವಾಗಿಯೇ ಇಟ್ಟಿದ್ದೆ, ಇಂದು ಹೇಳುತ್ತಿದ್ದೇನೆ ಎಂದಿದ್ದಾರೆ.
Comments