ನಡೆದಾಡುವ ದೇವರಿಗೆ 'ಭಾರತ ರತ್ನ'..!! ಸಿ.ಎಂ ಕುಮಾರಸ್ವಾಮಿ ಹೇಳಿದ್ದೇನು ಗೊತ್ತಾ….?
ತುಮಕೂರು ಶ್ರೀ ಸಿದ್ಧಗಂಗಾ ಮಠದ ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳ ಪಾರ್ಥಿವ ಶರೀರದ ಕ್ರಿಯಾ ಸಮಾಧಿ ವಿಧಿ ವಿಧಾನದ ಪ್ರಕಾರ ನೆನ್ನೆಯಷ್ಟೆ ನಡೆಯಿತು.. ಶತಾಯುಷಿಯ ಯುಗಾಂತ್ಯವಾಗಿದೆ…ಈ ಹಿನ್ನಲೆಯಲ್ಲಿಯೇ ಇಡೀ ರಾಜ್ಯದಲ್ಲಿಯೇ ನೀರವ ಮೌನ ಆವರಿಸಿತ್ತು… ಇನ್ನೂ ಶ್ರೀಗಳ ಲಿಂಗೈಕ್ಯದಿಂದ ಹಿಡಿದು ಕ್ರಿಯಾ ವಿಧಾನದವರೆಗೂ ಅಚ್ಚುಕಟ್ಟಾಗಿ ಪೊಲೀಸ್ ಬಂದೋಬಸ್ತ್ ಒದಗಿಸಿದ ಪೊಲೀಸ್ ಇಲಾಖೆಗೆ ರಾಜ್ಯದ ಸಿಎಂ ಕುಮಾರಸ್ವಾಮಿಯವರು ಧನ್ಯವಾದವನ್ನು ತಿಳಿಸಿದ್ದಾರೆ.
ಇಡೀ ರಾತ್ರಿಯೆಲ್ಲಾ ಮಠದಲ್ಲಿ ಓದುತ್ತಿದ್ದ ಎನ್ ಸಿಸಿ ವಿದ್ಯಾರ್ಥಿಗಳು ಸೇರಿದಂತೆ ಎಲ್ಲರೂ ಕೂಡ ಇಡೀ ರಾತ್ರಿ ನಿಂತು ಶ್ರಮ ವಹಿಸಿದ್ದಾರೆ..ರಾಜ್ಯ ಸರ್ಕಾರ ಪೊಲೀಸ್ ಅಭಿವೃದ್ದಿಗಾಗಿ ಶ್ರಮಿಸುತ್ತದೆ ಎಂದು ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರು... ಈ ಸಂದರ್ಭದಲ್ಲಿಯೇ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿಯನ್ನು ನೀಡುವ ಕುರಿತು ರಾಷ್ಟ್ರಪತಿ ಹಾಗೂ ಪ್ರಧಾನಿಯನ್ನು ಭೇಟಿಯಾಗಿ ಶಿಫಾರಸ್ಸು ಮಾಡುತ್ತೇನೆ ಎಂದು ಸಿಎಂ ಕುಮಾರಸ್ವಾಮಿ ತಿಳಿಸಿದರು .ಶ್ರೀಗಳಿಗೆ ಭಾರತ ರತ್ನ ಕೊಡಬೇಕೆಂದು ಭಕ್ತಾಧಿಗಳು ಹೆಚ್ಚು ಒತ್ತಾಯಿಸುತ್ತಿದ್ದಾರೆ.. ಈ ಹಿನ್ನಲೆಯಲ್ಲಿ ಕುಮಾರಸ್ವಾಮಿಯವರು ಪ್ರಧಾನಿಯವರಿಗೆ ಶಿಫಾರಸ್ಸು ಮಾಡುತ್ತೇನೆ ಎಂದಿದ್ದಾರೆ..
Comments