ಒಂದೇ ದಿನದಲ್ಲಿ 25 ಬಾರಿ ಹೃದಯಾಘಾತವಾದ್ರೂ ಬದುಕುಳಿದ ಮಿರಾಕಲ್ ಬೇಬಿ..!

ಮನುಷ್ಯನಿಗೆ ಒಮ್ಮೆ ಆರೋಗ್ಯ ಕೆಟ್ಟರೆ ಅದನ್ನು ಸರಿ ಪಡಿಸಿಕೊಳ್ಳೋದಕ್ಕೆ ಕೆಲವೊಮ್ಮೆ ಹರಸಾಹಸನೇ ಪಡಬೇಕಾಗುತ್ತದೆ.. ಮತ್ತೆ ಕೆಲವೊಮ್ಮೆ ಜೀವನೇ ಕಳೆದುಕೊಳ್ಳಬೇಕಾಗುತ್ತದೆ. ಹೃದಯಾಘಾತ ಆದರೆ ಮುಗಿದೆ ಹೋಯಿತು.. ಬದುಕುಳಿಯುವುದೆ ಕಷ್ಟ.. ಒಂದು ವೇಳೆ ಬದುಕಿದರೂ ಕೂಡ ಅವರ ಜೀವನ ನೀರ ಮೇಲಿನ ಗುಳ್ಳೆಯಂತೆ.. ಆದರೆ ಇಲ್ಲೊಂದು ಮಗು ಇದೆ.. ಈ ಮಗು ಒಂದೆ ದಿನಕ್ಕೆ 25 ಬಾರಿ ಹೃದಯಾಘಾತವಾಗಿದೆ.. ಆದರೂ ಕೂಡ ಪವಾಡಸದೃಶವೆಂಬಂತೆ ಬದುಕುಳಿದಿದ್ದಾನೆ. ಈ ಮಗು ಗೆ ಕೇವಲ 19 ತಿಂಗಳು ಅಷ್ಟೆ.. ಈ ಮಗುವಿನ ಹೆಸರು ಥಿಯೋ ಪೈ.. ಆ ಮಗುವನ್ನು ಎಲ್ಲರೂ ಮಿರಾಕಲ್ ಬೇಬಿ ಎನ್ನುತ್ತಾರೆ.. 24 ಗಂಟೆಗಳಲ್ಲಿ ಇಲ್ಲಿಯ ತನಕ ಇಷ್ಟೊಂದು ಸಂಖ್ಯೆಯ ಹೃದಯಾಘಾತ ಸಂಭವಿಸಿ ಬದುಕಿದವರು ಯಾರೂ ಇಲ್ಲ ಎಂದು ವೈದ್ಯರು ಅಚ್ಚರಿ ಪಡುತ್ತಾರೆ..
ಈ ಪುಟ್ಟ ಮಗುವಿಗೆ ಒಂದು ವರ್ಷವಾಗುವಷ್ಟರಲ್ಲಿಯೇ 17 ಶಸ್ತ್ರಚಿಕಿತ್ಸೆಗಳು ನಡೆದಿವೆ ಹಾಗೂ ಡಜನ್’ಗಟ್ಟಲೆ ಹೃದಯಾಘಾತವಾಗಿದೆ. ಆದರೂ ಮಗು ಚೇತರಿಸಿಕೊಂಡು ಉಲ್ಲಾಸಭರಿತವಾಗಿರುವುದು ವೈದ್ಯಲೋಕಕ್ಕೂ ಅಚ್ಚರಿಯುಂಟು ಮಾಡಿದೆ. ಥಿಯೋ ಬದುಕುಳಿಯುವುದಿಲ್ಲವೆಂದು ಎಲ್ಲರೂ ಅಂದುಕೊಂಡಿದ್ದರೂ ಆತ ಎಲ್ಲರ ಪ್ರೀತಿ ಹಾಗೂ ಹಾರೈಕೆಗಳೊಂದಿಗೆ ಗುಣಮುಖನಾಗುತ್ತಿದ್ದಾನೆಂದು ಆತನ ತಾಯಿ ಫಾವೆ ಸೈಯರ್ಸ್ ಹೇಳುತ್ತಾರೆ. ಥಿಯೋ ಫ್ರೈ ಹುಟ್ಟಿ ಕೇವಲ ಎಂಟು ದಿನಗಳಾಗುವಷ್ಟರಲ್ಲಿಯೇ ಸಮಸ್ಯೆಗಳು ಆರಂಭಗೊಂಡಿದ್ದವೆಂದು ಆತನ ತಂದೆ ಸ್ಟೀವನ್ ಫ್ರೈ ಮತ್ತು ತಾಯಿ ಹೇಳುತ್ತಾರೆ. ಮಗು ಒಮ್ಮೆಗೇ ಅತಿಯಾಗಿ ನಿದ್ದೆ ಮಾಡುತ್ತಿದ್ದ, ನಂತರ ಆತನ ದೇಹದ ಬಣ್ಣ ನೀಲಿ ಮತ್ತು ಬೂದಿ ಬಣ್ಣಕ್ಕೆ ತಿರುಗಿತ್ತು. ನಂತರ ಆತನನ್ನು ಸಾಲ್ಫೋರ್ಡ್ ರಾಯಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಗುವನ್ನು ನೋಡಿ ವೈದ್ಯರೇ ಆಘಾತಗೊಂಡಿದ್ದರು, ಏನಾಗಿತ್ತೆಂದು ಅವರಿಗೂ ತಿಳಿದಿರಲಿಲ್ಲ. ಆದರೆ ಆತನ ಸ್ಥಿತಿ ಗಂಭೀರವಾಗಿದೆ ಎಂದಷ್ಟೇ ಅವರು ತಿಳಿಸಿದ್ದರು. ನಂತರ ತಪಾಸಣೆಯ ಬಳಿಕ ಮಗುವಿಗೆ ಹೃದಯ ವೈಫಲ್ಯವಾಗಿದೆ. ಶಸ್ತ್ರಚಿಕಿತ್ಸೆ ನಡೆಸದೇ ಇದ್ದರೆ ಮಗು ಬದುಕುಳಿಯುವುದಿಲ್ಲ ಎಂದೂ ಹೇಳಿದ್ದರು.ಮಗುವನ್ನು ನಂತರ ಲಿವರ್ ಪೂಲ್ ನಲ್ಲಿರುವ ಮಕ್ಕಳ ಆಸ್ಪತ್ರೆಗೆ ಸೇರಿಸಲಾಗಿತ್ತು ಆಗ ಥಿಯೋ ಹೃದಯ ಬಡಿತ ಮಿತಿಮೀರಿತ್ತಲ್ಲದೆ ರಕ್ತದೊತ್ತಡದಲ್ಲೂ ಭಾರೀ ಏರಿಳಿತವಾಗಿತ್ತು. ವೈದ್ಯರ ಸತತ ಪ್ರಯತ್ನದ ಬಳಿಕ ಮಗು ಸುಧಾರಿಸಿಕೊಂಡ ನಂತರ ನಾಲ್ಕು ದಿನಗಳ ತರುವಾಯ ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಶಸ್ತ್ರಚಿಕಿತ್ಸೆ ನಡೆಯುತ್ತಿರುವಾಗಲೇ ಮಗುವಿಗೆ ಇನ್ನೆರಡು ಬಾರಿ ಹೃದಯಾಘಾತವಾಗಿತ್ತು. ನಂತರ ಆತನಿಗೆ ಸೆಪ್ಸಿಸ್ ಸೋಂಕು ತಗಲಿ ಮತ್ತಷ್ಟು ಸಮಸ್ಯೆಯಾಗಿತ್ತು. ಆರು ತಿಂಗಳು ಮಗು ಆಸ್ಪತ್ರೆಯಲ್ಲಿರಬೇಕಾಯಿತು. ಡಿಸೆಂಬರ್ 21,ರಂದು ಥಿಯೋಗೆ ಮತ್ತೊಮ್ಮೆ ಹೃದಯಾಘಾತವಾಗಿತ್ತಲ್ಲದೆ ಆತನ ಹೃದಯ ಬಡಿತ 12 ನಿಮಿಷಗಳ ಕಾಲ ನಿಂತು ಹೋಗಿತ್ತು. ಮುಂದೆ ಜನವರಿ 31ರಂದು ಆತನಿಗೆ 25 ಬಾರಿ ಹೃದಯಾಘಾತವಾಗಿತ್ತು.ಮತ್ತೆ ಶಸ್ತ್ರಚಿಕಿತ್ಸೆ ಅನಿವಾರ್ಯವಾಗಿತ್ತು. ಥಿಯೋಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯ ಡಾ ರಮಣ ಧನ್ನಪುನೇನಿ ಆತನ ಎಡ ಕುಹರದಲ್ಲಿ (ಲೆಫ್ಟ್ ವೆಂಟ್ರಿಕಲ್) ಸ್ಕಾರ್ ಟಿಶ್ಯೂ ಇರುವುದನ್ನು ಪತ್ತೆ ಹಚ್ಚಿದ್ದು ಇದರಿಂದಾಗಿಯೇ ಸಮಸ್ಯೆಯಿದೆ ಎಂದು ತಿಳಿದು ಸೂಕ್ತ ಚಿಕಿತ್ಸೆ ನೀಡಿದ ಬಳಿಕ ಈಗ ಥಿಯೋ ಸಂಪೂರ್ಣ ಗುಣಮುಖನಾಗುತ್ತಿದ್ದಾನೆ. ಒಟ್ಟಾರೆಯಾಗಿ ವೈದ್ಯಲೋಕಕ್ಕರ ಸವಾಲಾಗಿದ್ದ ಈ ಮಗು ಪವಾಡ ಸದೃಶ್ಯವಾಗಿ ಬದುಕುಳಿದಿದೆ ಎನ್ನಬಹುದು..
Comments