ನೀವು ಸರ್ಕಾರಿ ನೌಕರಿಯಲ್ಲಿದ್ದೀರಾ....! ಹಾಗಿದ್ರೆ ಸಿಕ್ತು ಅನ್ಕೊಳ್ಳಿ ಬಂಪರ್ ಆಫರ್….
ಸರ್ಕಾರಿ ಉದ್ಯೋಗಿಗಳಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಬಂಪರ್ ಆಫರ್ ಸಿಗುತ್ತಿದೆ. ಎಸ್’ಬಿಐ ಸರ್ಕಾರಿ ನೌಕರರಿಗಾಗಿಯೇ ಹೊಸ ಯೋಜನವೊಂದನ್ನು ಪರಿಚಯಿಸುತ್ತಿದೆ. ಅಂದಹಾಗೇ ಈ ಯೋಜನೆಯನ್ನು ಪಡೆದುಕೊಂಡ ರಾಜ್ಯ ಮತ್ತು ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ವಿಶೇಷ ಕೊಡುಗೆಗಳನ್ನು ಕೂಡ ಕೊಡಲಾಗುತ್ತಿದೆ ಎಂದು ಎಸ್ಬಿಐ ತನ್ನ ಅಧಿಕೃತ ಅಕೌಂಟ್ ನಲ್ಲಿ ಟ್ವೀಟ್ ಮಾಡಿದ್ದಾರೆ.
ಅಂದಹಾಗೇ ಎಸ್ಬಿಐ ಹೊಸ ''ಹೋಂ ಲೋನ್'' ನ್ನು ಪರಿಚಯಿಸುತ್ತಿದೆ. ಇದರ ಮೂಲಕ ತಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಳ್ಳಲು ಯಾವುದೇ ಅಡ್ಡಿ ಇರುವುದಿಲ್ಲ. ಅಷ್ಟೇ ಅಲ್ಲ, ಇದರ ಜೊತೆಗೆ ನೌಕಕರರಿಗೆ ಯಾವುದೇ ತೊಂದರೆಯಾಗದಂತೇ ಮನೆ ನಿರ್ಮಾಣ ಮಾಡಲು ಎಸ್ಬಿಐ ಬ್ಯಾಂಕ್ ಕಡಿಮೆ ಬಡ್ಡಿ ದರ, ಸಂಪೂರ್ಣ ಉಚಿತ ನಿರ್ವಹಣಾ ಶುಲ್ಕ, ೩೦ ವರ್ಷಗಳವರೆಗೆ ಮರು ಪಾವತಿ ಸೌಲಭ್ಯ ಹಾಗು ಮಹಿಳೆಯರಿಗೆ ಕಡಿಮೆ ಬಡ್ಡಿ ದರ ಸೇರಿದಂತೆ ಹಲವಾರು ಕೊಡುಗೆಗಳನ್ನು ನೀಡಲಿದೆ. ಅಂದಹಾಗೇ ಇಲ್ಲಿ ನೌಕರರ ವಯಸ್ಸು, ಸಂಬಳ, ಆಸ್ತಿ ಎಲ್ಲವನ್ನು ಪರಿಶೀಲನೆ ಮಾಡಲಾಗುತ್ತದೆ. ಅದಕ್ಕೆ ಅನುಗುಣವಾಗಿ ಲೋನ್ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಎಸ್’ಬಿಐ ಶಾಖೆಗೆ ಭೇಟಿ ನೀಡಿ.
Comments