ನಮ್ಮ ನಾಯಕಿಯನ್ನ ಹೆಣ್ಣೂ ಅಲ್ಲ ಗಂಡೂ ಅಲ್ಲಾ ಎಂದವರ ತಲೆ ಕಡಿಸ್ತೀನಿ : ಬಿಎಸ್'ಪಿ ಶಾಸಕ

ಬಿಎಸ್ಪಿ ನಾಯಕಿ ಮಾಯವತಿ ವಿರುದ್ಧ ಬಿಜೆಪಿ ಶಾಸಕಿಯ ಹೇಳಿಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು ಇದೀಗ ಕ್ಷಮೆ ಕೇಳದಿದ್ದರೇ ತಲೆ ಕಡಿಸುವುದಾಗಿ ಬಿಎಸ್ಪಿ ಮಾಜಿ ಶಾಸಕ ವಾರ್ನ್ ಮಾಡಿದ್ದಾರೆ. ಅಂದಹಾಗೇ ಚುನಾವಣೆ ರ್ಯಾಲಿ ವೇಳೆ ಬಿಜೆಪಿ ಎಂಎಲ್ಎ ಸಾಧನಾ ಸಿಂಗ್ ಅವರು ಮಾಯಾವತಿಯನ್ನು ಅವರು ಹೆಣ್ಣೂ ಅಲ್ಲ, ಗಂಡೂ ಅಲ್ಲ ಎಂದು ಹೇಳಿಕೆ ನೀಡಿದ್ದರು,ಬಳಿಕ ಅವರ ವಿರುದ್ಧ ದೇಶಾದ್ಯಂತ ವ್ಯಾಪಕ ಆಕ್ರೋಶವೂ ವ್ಯಕ್ತವಾಗಿತ್ತು.
ಬಿಎಸ್ಪಿ ಪಕ್ಷ ಅವರ ವಿರುದ್ಧ ಕೇಸ್ ಕೂಡ ದಾಖಲಿಸಿತು. ಈ ಹೇಳಿಕೆ ನೀಡಿದ್ದ ಸಾಧನಾ ಸಿಂಗ್ ಗೆ, ಬಿಎಸ್ ಪಿ ಪಕ್ಷದ ಮಾಜಿ ಶಾಸಕ ವಿಜಯ್ ಯಾದವ್, ಸಾಧನಾ ಸಿಂಗ್ ಮಾಯಾವತಿರವರ ಬಳಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ. ಒಂದು ವೇಳೆ ಅವರು ಕ್ಷಮೆ ಕೇಳದಿದ್ದರೆ ಪಕ್ಷದ ಕಾರ್ಯಕರ್ತರ ಬಳಿ 50 ಲಕ್ಷ ಸಂಗ್ರಹಿಸುತ್ತೇನೆ. ಸಾಧನಾ ಸಿಂಗ್ ಕಲೆ ಕಡಿದು ತಂದವರಿಗೆ ಆ ಹಣವನ್ನು ಬಹುಮಾನವಾಗಿ ನೀಡುತ್ತೇನೆ ಎಂದು ಘೋಷಣೆ ಮಾಡಲಾಗುತ್ತದೆ ಎಂದು ನಾಲಿಗೆ ಹರಿ ಬಿಟ್ಟಿದ್ದಾರೆ. ಚುನಾವಣೆ ಹತ್ತಿರ ಬರುತ್ತಿದ್ದಂತೇ ಮಾತಿನ ಭರದಲ್ಲಿ ಒಬ್ಬರ ಮೇಲೆ ಒಬ್ಬರು ಮಾತಿನ ಕೆಸರೆರಚಾಟ ಚೆಲ್ಲಿಕೊಳ್ಳುವುದು ಕಡಿಮೆಇಲ್ಲ. ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಾ ಸಾರ್ವಜನಿಕವಾಗಿ ನಿಂಧನೆಗೊಳಗಾಗುತ್ತಾರೆ. ಇದು ಕೇವಲ ಕೇಂದ್ರದಲ್ಲಷ್ಟೇ ಅಲ್ಲಾ. ನಮ್ಮ ರಾಜ್ಯ ರಾಜಕೀಯದಲ್ಲಿ ಈ ಪರಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ ಅಗ್ರಗಣ್ಯ ರಾಜಕೀಯ ಲೀಡರ್ ಗಳು.
Comments