ಸ್ವಾಮೀಜಿ ಸಾವಿನಲ್ಲೂ ರಾಜಕೀಯ ಮಾಡ್ತೀರಲ್ಲಾ..? ಮತ್ತೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾದ ಪದ್ಮಾವತಿ..!!

ಮಂಡ್ಯದ ಹುಡುಗಿ ರಮ್ಯಾ ಮೇಲೆ ಮತ್ತೆ ಕನ್ನಡಿಗರ ಕೆಂಗಣ್ಣಿಗೆ ಮತ್ತೆ ಮತ್ತೆ ಗುರಿಯಾಗುತ್ತಿದ್ದಾರೆ. ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆಯಾಗಿರುವ ಇವರು ತಮಿಳು ನಟ ಧನುಷ್ ಅವರ ಹಾಡಿಗೆ ಅಭಿಮಾನ ಮೆರೆದು ಕನ್ನಡದ ಸ್ಟಾರ್’ಗಳನ್ನು ಅವಮಾನ ಮಾಡಿದ್ದಾರೆಂದು ಕನ್ನಡಿಗರು ರೊಚ್ಚಿಗೆದ್ದಿದ್ದರು..ಮೊನ್ನೆಯಷ್ಟೇ ತಮಿಳು ನಟ ಧನುಷ್ ಹೊಗಳಿ ಟ್ರೋಲ್ ಗೊಳಗಾಗಿದ್ದ ನಟಿ, ಮಾಜಿ ಸಂಸದೆ ರಮ್ಯಾ ಇದೀಗ ಶ್ರೀ ಶಿವಕುಮಾರ ಸ್ವಾಮೀಜಿಗಳ ನಿಧನದ ಬಗ್ಗೆ ಮಾಡಿರುವ ರಿಟ್ವೀಟ್ ಮೂಲಕ ಮತ್ತೆ ಟ್ರೋಲ್’ಗೊಳಗಾಗಿದ್ದಾರೆ.
ತಾವಾಗಿಯೇ ಒಂದೇ ಒಂದು ಶಬ್ಧವನ್ನೂ ಸ್ವಾಮೀಜಿ ಅಗಲಿಕೆಯ ಬಗ್ಗೆ ಬರೆಯದೇ ರಮ್ಯ ಕಾಂಗ್ರೆಸ್ ಪಕ್ಷ ಮಾಡಿದ ಟ್ವೀಟ್ ನ್ನೇ ರಿಟ್ವೀಟ್ ಮಾಡಿದ್ದಕ್ಕೆ ರಮ್ಯಾ ಪುನಃ ಬೈಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಆ ಟ್ವೀಟ್ ಕೂಡಾ ಕಾಂಗ್ರೆಸ್ ನ ರಾಜಕಾರಣಿಗಳು ಶಿವಕುಮಾರಸ್ವಾಮೀಜಿಗಳನ್ನು ಭೇಟಿಯಾದ ಕ್ಷಣಗಳ ಫೋಟೋ ಹೊಂದಿತ್ತು. ಹೀಗಾಗಿ ಸಾವಿನಲ್ಲೂ ಕೂಡ ರಾಜಕೀಯ ಬುದ್ಧಿ ಬಿಡಲ್ವಲ್ಲಾ ನೀವು? ನಿಮಗೆ ಸ್ವಂತವಾಗಿ ಸ್ವಾಮೀಜಿ ಬಗ್ಗೆ ಒಂದೆರಡು ವಾಕ್ಯ ಬರೆಯಲಿಕ್ಕಾಗಲ್ವಾ? ಎಂದು ಟ್ವಿಟರಿಗರು ರಮ್ಯಾರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.ಯಾಕೋ ರಮ್ಯಾ ಟೈಮ್ ಸರಿಯಿಲ್ಲ ಅನಿಸುತ್ತಿದೆ..ಏನೇ ಮಾಡಿದರೂ ಅವರಿಗೆ ಹಿಂದಿರುಗುತ್ತಿದೆ.. ಅಂಬರೀಶ್ ಸಾವಿಗೂ ಬರದೆ ಮಧ್ಯರಾತ್ರಿಯೇ ಮಂಡ್ಯ ಬಿಡುವಂತೆ ಆಗಿದ್ದು ಮಾತ್ರ ವಿಪರ್ಯಾಸ.
Comments