ಸ್ವಾಮೀಜಿಗಳ ಪಾದುಕೆಗಳನ್ನು ಪಡೆದ ನಾನೇ ಧನ್ಯನೆಂದ ಸ್ಟಾರ್ ನಟ...?
ಶಿವಕುಮಾರ ಸ್ವಾಮೀಜಿಗಳು ಅಜಾತ ಶತ್ರು. ದೇಶಾದಾದ್ಯಂತ ಅಪಾರ ಭಕ್ತವೃಂದವನ್ನು ಹೊಂದಿರುವ ಸ್ವಾಮೀಜಿ ನಿನ್ನೆ ಇಹಲೋಕ ತ್ಯಜಿಸಿದ್ದಾರೆ. ಈ ಸುದ್ದಿ ಹೊರ ಬೀಳುತ್ತಿದ್ದಂತೇ ಜಾತಿ-ಭೇದ ಭಾವವಿಲ್ಲದೇ ಅಪಾರ ಸಂಖ್ಯೆಯಲ್ಲಿ ಭಕ್ತ ಸಾಗರ ಮಮ್ಮುಲ ಮರಗಿತು. ಅಂದಹಾಗೇ ಇಡಿ ಕನ್ನಡ ಚಿತ್ರರಂಗವೇ ಕಂಬನಿ ಮಿಡಿದಿದೆ. ಅನೇಕ ಸ್ಟಾರ್ ನಟರು ಸಿದ್ಧಗಂಗಾ ಸ್ವಾಮೀಜಿಗಳ ಭಕ್ತರು. ಅದರಲ್ಲೂ ಕನ್ನಡ ಚಿತ್ರರಂಗದ ಒಬ್ಬ ಸ್ಟಾರ್ ನಟನಿಗೆ ಶಿವಕುಮಾರ ಸ್ವಾಮೀಜಿಗಳು ತಾವು ಬಳಸುತ್ತಿದ್ದ ಪಾದುಕೆಗಳನ್ನು ಕೊಟ್ಟಿದ್ದಾರೆ.
ಸ್ವಾಮೀಜಿಯು ಲಿಂಗೈಕ್ಯರಾಗಿದ್ದ ವಿಚಾರ ತಿಳಿಯುತ್ತಿದ್ದಂತೇ ನಟ ಜಗ್ಗೇಶ್ ಕಂಬನಿ ಮಿಡಿದಿದ್ದಾರೆ. ನನ್ನ ಪರಮ ಪೂಜ್ಯ ದೇವರು ನಮ್ಮನ್ನೆಲ್ಲಾ ಬಿಟ್ಟು ಹೋಗಿದ್ದಾರೆ,ಅವರು ಅಮರ ಎಂದು ಟ್ವೀಟ್ ಮಾಡಿದ್ದಾರೆ. ಪರಮ ಭಕ್ತನಾಗಿದ್ದ ನಟ ಜಗ್ಗೇಶ್ ಅವರಿಂದ ಪಾದುಕೆಗಳನ್ನು ಪಡೆದು ನಾನು ಧನ್ಯನಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಆ ಪಾದುಕೆಗಳನ್ನು ನಾನು ದೇವರ ಕೋಣೆಯಲ್ಲಿಟ್ಟು ಪೂಜಿಸುತ್ತಿದ್ದೇನೆ ಎಂದು ಟ್ವೀಟ್ ನಲ್ಲಿ ಹೇಳಿಕೊಂಡಿದ್ದಾರೆ.ಕನ್ನಡ ಚಿತ್ರರಂಗದ ಅನೇಕ ಕಲಾವಿದರು ನಡೆದಾಡುವ ದೇವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡಿದ್ದಾರೆ. ತಾವು ಅವರಿದ್ದ ಕಾಲದಲ್ಲಿ ಜನಿಸಿದ್ದೇವೆಂದು ಟ್ವೀಟ್ ಮಾಡಿದ್ದಾರೆ. ಪ್ರಾರ್ಥನೆ ಮಾಡಿಕೊಳ್ಳುವುದರ ಮೂಲಕ ಮತ್ತೊಮ್ಮೆ ಸ್ವಾಮೀಜಿಗಳು ಹುಟ್ಟಿ ಬರಲಿ ಎಂದು ಕೇಳಿಕೊಂಡಿದ್ದಾರೆ. ಒಟ್ಟಾರೆ ಕೋಟ್ಯಾಂತರ ಭಕ್ತಾದಿಗಳಲ್ಲಿ ಮನೆ ಮಾಡಿರುವ ನಡೆದಾಡುವ ದೇವರು ಶೋಕಸಾಗರದಲ್ಲಿ ಮುಳುಗುವಂತೆ ಮಾಡಿದ್ದಾರೆ.
Comments