25 ವರ್ಷ ತಮ್ಮ ಹುಟ್ಟೂರಿಗೆ ಕಾಲಿಟ್ಟಿರಲಿಲ್ಲವಂತೆ ಸ್ವಾಮೀಜಿ…! ಕಾರಣ ಏನು ಗೊತ್ತಾ..?

ನಡೆದಾಡುವ ದೇವರೆಂದೆ ಪ್ರಸಿದ್ದಿ ಆಗಿದ್ದ ಶ್ರೀ ಶಿವಕುಮಾರ ಸ್ವಾಮೀಜಿಗಳು ನೆನ್ನೆಯಷ್ಟೆ ಬಾರದ ಲೋಕಕ್ಕೆಕೋಟ್ಯಾಂತರ ಭಕ್ತರನ್ನು ಅಗಲಿ ಹೋಗಿದ್ದಾರೆ….ನಡೆದಾಡುವ ದೇವರು ತ್ರಿವಿಧ ದಾಸೋಹಿ, ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳು ತಮ್ಮ ಹುಟ್ಟೂರಿಗೆ 25 ವರ್ಷಗಳ ಕಾಲ ಹೋಗಿರಲಿಲ್ಲವಂತೆ… . ಕಾರಣ ಶ್ರೀಗಳ ತಂದೆ ಹೊನ್ನಪ್ಪ ಅವರಿಗೆ ತಮ್ಮ ಮಗ ಉನ್ನತ ಅಧಿಕಾರಿ ಆಗಬೇಕು ಎನ್ನುವ ಮಹದಾಸೆ ಇತ್ತಂತೆ.. ಆದರೆ ಅದರ ಬದಲು ಶಿವಕುಮಾರ ಸ್ವಾಮೀಜಿಗಳು ಸನ್ಯಾಸತ್ವ ಸ್ವೀಕರಿಸಿದ್ದರು. ಇದೇ ವೇಳೆ ಹೊನ್ನಪ್ಪ ಹಾಗೂ ಗಂಗಮ್ಮ ದಂಪತಿಗೆ ಸಾಂತ್ವನ ಹೇಳಲು ಶಿವಯೋಗಿಗಳು ಖುದ್ದಾಗಿ ವೀರಾಪುರಕ್ಕೆ ಹೋಗಿದ್ದರಂತೆ ಈ ವೇಳೇ ಹೊನ್ನಪ್ಪ ಅವರು ಶ್ರೀಗಳಿಗೆ ಸಿಗಲಿಲ್ಲವಂತೆ. ಇದೇ ವೇಳೆ ಶಿವಕುಮಾರ ಶ್ರೀಗಳಿಗೆ ತಂದೆ ನಡೆದುಕೊಂಡಿದ್ದು ಸರಿಯಲ್ಲ ಅನಿಸಿತ್ತು.
ಈ ವಿಷಯವಾಗಿಯೇ ಶ್ರೀಗಳು ಹುಟ್ಟೂರು ವೀರಾಪುರ ಗ್ರಾಮಕ್ಕೆ ಹೋಗುವುದನ್ನೇ ನಿಲ್ಲಿಸಿಬಿಟ್ಟಿದ್ದರು. ಇದೇ ಸಮಯದಲ್ಲಿ ತಮ್ಮ ಗ್ರಾಮಕ್ಕೆ ಬರುವಂತೆ ವೀರಾಪುರ ಜನರು 1930ರಿಂದ 1955ರ ವರೆಗೂ ಮನವಿ ಮಾಡಿಕೊಳ್ಳುತ್ತಿದ್ದರು. ಆದರೆ ಶ್ರೀಗಳು ಮಾತ್ರ ಭಕ್ತರಿಗೆ ನಗುಮುಖದಿಂದಲೇ ಬರಲು ಆಗುವುದಿಲ್ಲ ಅಂತ ಹೇಳುತ್ತಿದ್ದರಂತೆ.. .ಇನ್ನು ಶಿವಕುಮಾರ ಶ್ರೀಗಳ ಪೂರ್ವಾಶ್ರಮದ ಅಣ್ಣನ ಮಗ ಸಿದ್ದಗಂಗಾ ಮಠಕ್ಕೆ ಬಂದು, ಮನೆಯ ಗೃಹ ಪ್ರವೇಶಕ್ಕೆ ನೀವು ಬರಬೇಕು ಅಂತ ಮನವಿ ಮಾಡಿಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಶ್ರೀಗಳು, ಶಿವಯೋಗಿಗಳ ಕೃಪೆಯಿಂದ ದೂರವಾಗಿರುವ ಆ ಮನೆಗೆ ನಾನು ಬರುವುದಿಲ್ಲ ಅಂತ ತಿಳಿಸಿದ್ದರಂತೆ... ಇದೇ ವೇಳೆ ನಿಮ್ಮ ಅಪ್ಪಣೆಯಂತೆ ಆಗಲಿ. ನೀವು ಬಂದು ಗೃಹ ಪ್ರವೇಶ ಮಾಡಬೇಕು ಎನ್ನುವುದು ನಮ್ಮ ಸಂಕಲ್ಪ. ಒಂದು ವೇಳೆ ನೀವು ಬರದೇ ಹೋದರೆ ಮನೆ ಹಾಳುಬಿದ್ದರೂ ನಾವು ಗೃಹಪ್ರವೇಶ ಮಾಡುವುದಿಲ್ಲ ಎಂದು ಶ್ರೀಗಳಿಗೆ ಹೇಳಿದ್ದಾರೆ.ಇನ್ನು ಕೊನೆಗೂ ಭಕ್ತನ ಮನವಿಗೆ ಕರಿಗಿದ ಶ್ರೀಗಳು 25 ವರ್ಷದ ಬಳಿಕ 1955ರಲ್ಲಿ ಶ್ರೀಗಳು ಹುಟ್ಟೂರಿಗೆ ಕಾಲಿಟ್ಟಿದ್ದರು.. ಇದರಿಂದ ತಿಳಿಯುತ್ತದೆ ಶ್ರೀಗಳು ಎಷ್ಟು ಉದಾರ ಮನಸಿನವರು ಅಂತ.. ನಮ್ಮ ಮನೆಯವರನ್ನು ತ್ಯಜಿಸಿ ಇಂದು ವಿಶ್ವವೇ ಕೊಂಡಾಡುವಷ್ಟರ ಮಟ್ಟಿಗೆ ಬೆಳೆದಿದ್ದಾರೆ.. ಅವರ ಸಾವಿಗೆ ಎಲ್ಲರೂ ಕೂಡ ಕಂಬನಿ ಮಿಡಿದಿದ್ದಾರೆ.
Comments