ಬರಿಗಣ್ಣಿನಲ್ಲಿ ಸೂರ್ಯನನ್ನು ದಿಟ್ಟಿಸಿ ನೋಡಿ ಗಿನ್ನಿಸ್ ರೆಕಾರ್ಡ್ ಸೇರಿದ ವ್ಯಕ್ತಿ ..!

ಮನುಷ್ಯ ಗಿನ್ನಿಸ್ ರೆಕಾರ್ಡ್ ಸೇರಬೇಕು ಅಂದರೆ ಏನ್ ಬೇಕಾದ್ರೂ ಮಾಡ್ತಾನೆ.. ಕಲ್ಲನ್ನ ಕೈಯಿಂದ ಪುಡಿ ಪುಡಿ ಮಾಡ್ತಾನೆ, ಗಾಜನ್ನು ಹಲ್ಲಿನಿಂದ ಕಡಿಯುತ್ತಾನೆ.. ಈ ರೀತಿಯ ವಿಭಿನ್ನ ಶೈಲಿಯ ಪ್ರದರ್ಶನಗಳನ್ನು ಮಾಡುತ್ತಲೆ ಇರುತ್ತಾನೆ.. ಈ ರೀತಿ ಮಾಡಿ ಅದೆಷ್ಟೋ ಜನ ಗಿನ್ನಿಸ್ ರೆಕಾರ್ಡ್ ಸೇರಿಕೊಂಡಿದ್ದಾರೆ…ರೆಕಾರ್ಡ್ ಮಾಡಬೇಕೆಂದೆ ಸಾಕಷ್ಟು ಜನ ಏನೋ ಏನೋ ಮಾಡುತ್ತಿರುತ್ತಾರೆ.. ಅದೇ ನಿಟ್ಟಿನಲ್ಲಿ ಇಲ್ಲೊಬ್ಬರು ಸೂರ್ಯನನ್ನೆ ದಿಟ್ಟಿಸಿ ನೋಡಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಸೇರಿಕೊಂಡಿದ್ದಾರೆ…
ಬರೀ ಗಣ್ಣಿನಿಂದ ಸೂರ್ಯನನ್ನು ಹತ್ತು ಸೆಕೆಂಡು ಎಡೆಬಿಡದೆ ನೋಡುವುದೇ ಕಷ್ಟ ಅಂತಹುದರಲ್ಲಿ ಸತತ 10 ನಿಮಿಷಗಳ ಕಾಲ ಬರಿಗಣ್ಣಿನಿಂದ ಸೂರ್ಯನನ್ನು ದಿಟ್ಟಿಸಿ ನೋಡಿ ಪ್ರದೀಪ ಸಾಸನೆ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಮಾಡಿದ್ದಾರೆ. ಎಸ್.. ಬೆಳಗಾವಿಯ ಭಾಗ್ಯ ನಗರದ ಪ್ರದೀಪ ಸಾಸನೆ ಈ ಸಾಧನೆ ಮಾಡಿದ್ದಾರೆ... ನಗರದ ಲೇಲೆ ಮೈದಾನದಲ್ಲಿ ಭಾನುವಾರ ಬೆಳಗ್ಗೆ 11.30 ಗಂಟೆಯಿಂದ ಸತತ 10 ನಿಮಿಷಗಳವರೆಗೆ ದಿಟ್ಟಿಸಿ ಸೂರ್ಯನನ್ನು ನೋಡಿದ್ದಾರೆ. ಯಾವುದೇ ವ್ಯಕ್ತಿ ಸಾಮಾನ್ಯವಾಗಿ 30 ಸೆಕೆಂಡ್‌ಗಿಂತಲೂ ಹೆಚ್ಚು ಸಮಯ ಸೂರ್ಯನನ್ನು ನೋಡಿದರೆ ಕಣ್ಣಿಗೆ ಹಾನಿಯಾಗುವುದು ಖಚಿತ ಎಂದು ವೈದ್ಯಕೀಯ ಲೋಕ ಹೇಳುತ್ತದೆ. ಆದರೆ ಪ್ರದೀಪ್ ಅವರು ಸೂರ್ಯನನ್ನು ನೋಡುವ ಹವ್ಯಾಸವನ್ನು 2015 ರಿಂದ ಪ್ರಾರಂಭಿಸಿದರು ಮೊದಲು ಒಂದೆರಡು ನಿಮಿಷಗಳವರೆಗೆ ಮಾತ್ರ ಸೂರ್ಯನನ್ನು ನೋಡಲು ಸಾಧ್ಯವಾಗುತ್ತಿತ್ತು. ನಂತರ ದಿನಗಳಲ್ಲಿ ಸೂರ್ಯನನ್ನು ನೋಡುವುದೇ ಹವ್ಯಾಸ ಮಾಡಿಕೊಂಡ ಪ್ರದೀಪ್, ಈಗ 10 ನಿಮಿಷಗಳವರೆಗೆ ಸತತ ಸೂರ್ಯನನ್ನು ನೋಡುವ ರೂಢಿ ಮಾಡಿಕೊಂಡಿದ್ದಾರೆ. ಇದರಿಂದಲೇ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಸೇರುವಂತಾಯಿತು ಎಂದು ಖುಷಿ ಪಟ್ಟಿದ್ದಾರೆ.
Comments