ಮದುವೆಯಾಗಲು ಬಯಸುವವರಿಗೆ 'ಗುಡ್ ನ್ಯೂಸ್': ಧರ್ಮಸ್ಥಳದಲ್ಲಿ ನಡೆಯಲಿದೆ ಸಾಮೂಹಿಕ ವಿವಾಹ..!
ಮದುವೆ ಅನ್ನೋದು ಕೆಲವರಿಗೆ ತೋರಿಕೆಯ ಪ್ರದರ್ಶನವಾಗಿರುತ್ತದೆ.. ಆದರೆ ಮತ್ತೆ ಕೆಲವರಿಗೆ ಜೀವಮಾನದ ಪ್ರಶ್ನೆ ಆಗಿರುತ್ತದೆ.. ಮಕ್ಕಳ ಮದುವೆ ಚೆನ್ನಾಗಿ ಮಾಡಬೇಕು ಅಂತ ತಂದೆ ತಾಯಿ ಹಗಲು ಇರುಳು ಎನ್ನದೆ ದುಡಿದು ದುಡ್ಡನ್ನೆಲ್ಲಾ ಕೂಡಿ ಇರುತ್ತಾರೆ.. ಒಂದು ದಿನಕ್ಕೆ ಅಷ್ಟೊಂದು ಖರ್ಚು ಮಾಡುವ ಅವಶ್ಯಕತೆ ಇದೆಯಾ ಎಂದು ಮತ್ತೆ ಕೆಲವರು ಚಿಂತೆ ಮಾಡ್ತಾರೆ.. ಮದುವೆ ಹೇಗೆ ಆದ್ರೆ ಏನು.. ಜೀವನ ಪೂರ್ತಿ ಹೇಗಿರುತ್ತೇವೆ ಅನ್ನೋದೆ ಮುಖ್ಯ ಅಂತಾ ಕೆಲವರು ಹೇಳ್ತಾರೆ.. ಇನ್ನೂ ಕೆಲವರು ಸಾಮೂಹಿಕ ವಿವಾಹಗಳಲ್ಲಿ ನಾವು ಒಬ್ಬರಗಾಗಿ ಮದುವೆಯಾಗೋಣ ಅಂತಾ ಯೋಚನೆ ಮಾಡ್ತಾರೆ..
ಇದೀಗ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮೇ 1 ರಂದು ಉಚಿತವಾಗಿ ಸಾಮೂಹಿಕ ವಿವಾಹ ಏರ್ಪಡಿಸಲಾಗಿದೆ. ಅಂದು ಸಂಜೆ 6:48 ಗೋಧೂಳಿ ಲಗ್ನದಲ್ಲಿ 48 ನೇ ವರ್ಷದ ಸಾಮೂಹಿಕ ವಿವಾಹ ನಡೆಯಲಿದೆ. ಸಾಮೂಹಿ ವಿವಾಹ ಮಹೋತ್ಸವದಲ್ಲಿ ಮದುವೆಯಾಗಲಿರುವ ವರನಿಗೆ ದೋತಿ, ಶಾಲು ಮತ್ತು ವಧುವಿಗೆ ಸೀರೆ, ರವಿಕೆ, ಮಂಗಲಸೂತ್ರ ನೀಡಲಾಗುವುದು. ಮದುವೆಯಾಗಲು ಇಚ್ಚಿಸುವ ಆಸಕ್ತರು ಏಪ್ರಿಲ್ 25 ರೊಳಗೆ ಹೆಸರು ನೋಂದಾಯಿಸಬಹುದಾಗಿದೆ. ಮಾಹಿತಿಗಾಗಿ 08256 -277144 ಸಂಪರ್ಕಿಸಿ. ಈ ಮಾಹಿತಿಯನ್ನು ನೀವು ತಿಳಿದುಕೊಂಡು ಇತರರಿಗೂ ಷೇರ್ ಮಾಡಿ..
Comments