ಜೋಡಿಯಾಗಿಯೇ ಮಸಣ ಸೇರಿದ ಆದರ್ಶ ದಂಪತಿ ...!!!

ಗಂಡು ಹೆಣ್ಣು ಸಪ್ತಪದಿ ತುಳಿಯುವಾಗ ಇಬ್ಬರು ಒಬ್ಬರಿಗೊಬ್ಬರು ತಾನು ಸಾಯುವತನಕ ಜೊತೆಯಾಗಿರುತ್ತೇವೆ, ಒಬ್ಬರಿಗೊಬ್ಬರು ಆಸರೆಯಾಗಿರುತ್ತೇವೆ ಎಂಬ ಮಾತಿನ ಮೇಲೆ ನಿಂತು ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿಯುತ್ತಾರೆ. ಅದರಂತೇ ಸಾವಲ್ಲೂ ಒಂದಾದ ಅಪರೂಪದ ಜೋಡಿ ಇಲ್ಲಿದೆ. ಇಲ್ಲೊಂದು ದಂಪತಿ ಏಕಕಾಲದಲ್ಲಿಯೇ ಇಹಲೋಕ ತ್ಯಜಿಸಿರುವ ಕಣ್ಣೀರ ಕಥೆ ದಾವಣಗೆರೆಯಲ್ಲಿ ನಡೆದಿದೆ.
ಈ ದಂಪತಿಗಳು ಸಾವಿನಲ್ಲಿ ಒಂದಾಗಿ ಆದರ್ಶ ಮೆರೆದಿದ್ದಾರೆ. ದಾವಣಗೆರೆಯ ವಿನೋಭಾ ನಗರದ ನಿವಾಸಿಗಳಾದ ಗಾಯಕವಾಡ ಕೃಷ್ಣ ಮೂರ್ತಿ(78) ಹಾಗೂ ಅನುರಾಧ (62) ಸಾವನಪ್ಪಿದ ಆದರ್ಶ ದಂಪತಿಗಳಾಗಿದ್ದಾರೆ. ಕೃಷ್ಣಮೂರ್ತಿ ಅವರು ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಗುರುವಾರ ಸಂಜೆ ಕುಟುಂಬಸ್ಥರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿ ಮನೆಗೆ ಕರೆತಂದಿದ್ದರು. ಪತಿ ಸಾವಿನ ಸುದ್ದಿಯನ್ನು ಪತ್ನಿ ಅನುರಾಧಗೆ ಹೇಳಲು ಹೋದ ಕುಟುಂಬಸ್ಥರಿಗೆ ಮನೆಯಲ್ಲಿ ಶಾಕ್ ಕಾದಿತ್ತು. ಮನೆಯ ಕೊಠಡಿಯಲ್ಲಿ ಅನುರಾಧ ಕೂಡ ಹೃದಯಘಾತದಿಂದ ಸಾವನ್ಪಪಿದ್ದನ್ನು ಕಂಡು ಸಂಬಂಧಿಕರು ಶಾಕ್ ಆಗಿದ್ದಾರೆ. ಸಾವಿನಲ್ಲೂ ಒಂದಾಗಿರುವ ಅನ್ಯೋನ್ಯ ಜೋಡಿ ಎಂದು ಕರೆಸಿಕೊಂಡಿದ್ದಾರೆ. ಕುಟುಂಬಸ್ಥರು ಏಕಕಾಲಕ್ಕೆ ದಂಪತಿಯ ವಿಧಿ ವಿಧಾನ ನಡೆಸಲಿದ್ದಾರೆ. ಈ ದಂಪತಿಗೆ ಮೂವರು ಮಕ್ಕಳಿದ್ದು, ಅವರಿಗೂ ಮದುವೆಯಾಗಿದೆ.
Comments