ಹೆಣ್ಣು ಮಕ್ಕಳ ಭವಿಷ್ಯಕ್ಕಿದೆ ಈ ಯೋಜನೆ..!! ಯಾವುದು ಗೊತ್ತಾ..?

ಈಗಾಗಲೇ ಕೆಂದ್ರ ಹಾಗೂ ರಾಜ್ಯ ಸರ್ಕಾರವು ಹೆಣ್ಣು ಮಕ್ಕಳಿಗೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ… ಅದೇ ಸಾಲಿಗೆ ಸುಕನ್ಯ ಸಮೃದ್ದಿ ಯೋಜನೆ ಕೂಡ ಸೇರಿಕೊಳ್ಳುತ್ತದೆ… ಒಂದು ವೇಳೆ ಮಾರ್ಚ್ 31 ರೊಳಗೆ ಹೂಡಿಕೆ ಯೋಜನೆಯನ್ನು ಶುರು ಮಾಡದೆ ಹೋದರೆ ತೆರಿಗೆ ಉಳಿಸೋದು ಕಷ್ಟ. ತೆರಿಗೆ ಉಳಿತಾಯ ಯೋಜನೆಯು ಒಂದಿದೆ ಅದರ ಬಗ್ಗೆ ನಾವು ತಿಳಿಸಿಕೊಡ್ತಿವಿ. ಈ ಯೋಜನೆಯಲ್ಲಿ ತೆರಿಗೆ ಉಳಿಸುವ ಜೊತೆ ಜೊತೆಯಲ್ಲಿಯೇ ಹೆಣ್ಣು ಮಗುವಿನ ಭವಿಷ್ಯವನ್ನು ಕೂಡ ಉಜ್ವಲಗೊಳಿಸಬಹುದು.
ಮೋದಿ ಸರ್ಕಾರವು ಹೆಣ್ಣು ಮಕ್ಕಳಿಗಾಗಿಯೇ, ಸುಕನ್ಯಾ ಸಮೃದ್ಧಿ ಯೋಜನೆಯನ್ನು ಶುರು ಮಾಡಿದೆ. ಜನವರಿ 1,2019 ರ ನಂತರ ಈ ಯೋಜನೆಯಲ್ಲಿ ಶೇಕಡಾ 8.5 ರಷ್ಟು ಬಡ್ಡಿ ಸಿಗುತ್ತಿದೆ. ಇದೀಗ ಇದರ ಜೊತೆಗೆ ತೆರಿಗೆ ಕಾಯಿದೆಯ ಪರಿಚ್ಛೇದ 80 ಸಿ ಅಡಿ ನಿಮಗೆ 1.5 ಲಕ್ಷದಷ್ಟು ತೆರಿಗೆ ಕಡಿತ ಸಿಗಲಿದೆ. ನರೇಂದ್ರ ಮೋದಿ ಸರ್ಕಾರ 'ಭೇಟಿ ಬಚಾವೋ ಭೇಟಿ ಪಡಾವೋ' ಯೋಜನೆಯಡಿ ಸುಕನ್ಯಾ ಸಮೃದ್ಧಿ ಯೋಜನೆ ಜಾರಿಗೆ ತಂದಿದೆ. ಡಿಸೆಂಬರ್ 4,2014 ರಲ್ಲಿಯೇ ಈ ಯೋಜನೆ ಶುರುವಾಗಿದೆ. ಮೊದಲ ವರ್ಷ 10 ಸಾವಿರ ರೂಪಾಯಿ ಖಾತೆಗೆ ಜಮಾ ಆಗಬೇಕೆಂಬ ನಿಯಮವಿತ್ತು. ಆದ್ರೀಗ ಮಿತಿಯನ್ನು 250 ರೂಪಾಯಿಗೆ ಇಳಿಕೆ ಮಾಡಲಾಗಿದೆ. ಹೊಸ ನಿಮಯ ಜುಲೈ6,2018 ರಿಂದ ಜಾರಿಗೆ ಬಂದಿದೆ. ಎಲ್ಲ ಅಂಚೆ ಕಚೇರಿಯಲ್ಲಿ ಈ ಖಾತೆ ತೆರೆಯಬಹುದು. ಅಂಚೆ ಕಚೇರಿಯಲ್ಲಿ ಇದ್ರ ಬಗ್ಗೆ ಸಂಪೂರ್ಣ ವಿವರ ನಿಮಗೆ ಸಿಗಲಿದೆ. ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಸಾಕಷ್ಟು ಯೋಜನೆಗಳು ಚಾಲ್ತಿಯಲ್ಲಿವೆ,.. ಅವುಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವುದು ನಮ್ಮ, ನಿಮ್ಮೆಲ್ಲರ ಕರ್ತವ್ಯವಾಗಿದೆ.
Comments