ಅಪ್ಪಿ-ತಪ್ಪಿಯೂ ಕುಂಕುಮವನ್ನು ಈ ಬೆರಳಿನಿಂದ ಹಚ್ಚಿಕೊಳ್ಳಬೇಡಿ : ತಪ್ಪಿದ್ರೆ ಅಪಾಯ ಕಟ್ಟಿಟ್ಟಬುತ್ತಿ.....
ಹೆಣ್ಣುಮಕ್ಕಳ ಹಣೆಗೆ ಸಿಂಧೂರ ಬಹಳ ಮುಖ್ಯ. ಅದರಲ್ಲೂ ಕುಂಕುಮ ಹಚ್ಚಿಕೊಳ್ಳುವುದರಿಂದ ವೈಜ್ಞಾನಿಕವಾಗಿಯೂ ಲಾಭವುಂಟು. ಹಣೆಗೆ ಕುಂಕುಮ ಹಚ್ಚಿಕೊಳ್ಳುವಾಗ ಬಹಳ ಜಾಗರೂಕತೆಯಿಂದ ಹಚ್ಚಬೇಕು. ಹೇಗೇ ಬೇಕೋ ಹಾಗೇ ಕುಂಕುಮವನ್ನು ಹಚ್ಚಿಕೊಳ್ಳುವಂತಿಲ್ಲ. ಕುಂಕುಮವನ್ನು ಹಚ್ಚಿಕೊಳ್ಳುವಾಗ ಭ್ರೂ ಮಧ್ಯ ಮತ್ತು ಆಜ್ಞಾಚಕ್ರದ ಮೇಲೆ ಒತ್ತಡವನ್ನು ಹಾಕಲಾಗುತ್ತದೆ. ಇದರಿಂದ ಅಲ್ಲಿನ ಬಿಂದುಗಳ ಮೇಲೆ ಒತ್ತಡವು ಬಂದು (ಬಿಂದು ಒತ್ತಡ ಪದ್ಧತಿಯಿಂದ) ಮುಖದ ಮೇಲಿನ ಸ್ನಾಯುಗಳಿಗೆ ರಕ್ತದ ಪೂರೈಕೆಯು ಒಳ್ಳೆಯ ರೀತಿಯಿಂದ ಆಗುತ್ತದೆ. ಸ್ತ್ರೀಯರು ತಮಗೆ ಅನಾಮಿಕಾದಿಂದ (ಕಿರುಬೆರಳಿನ ಪಕ್ಕದ ಬೆರಳು) ಮತ್ತು ಇತರ ಸ್ತ್ರೀಯರ ಭೂ ಮಧ್ಯದಲ್ಲಿ ಮಧ್ಯದ ಬೆರಳಿನಿಂದ ಗೋಲಾಕಾರದ ಕುಂಕುಮವನ್ನು ಹಚ್ಚಬೇಕು.
ಹಣೆಗೆ ಕುಂಕುಮ ಹಚ್ಚುವುದರಿಂದ ಹಣೆಯ ಮೇಲಿನ ಸ್ನಾಯುಗಳ ಒತ್ತಡವು ಕಡಿಮೆಯಾಗಿ ಮುಖವು ಪ್ರಕಾಶಮಾನವಾಗಿ ಕಾಣಿಸುತ್ತದೆ. ಕೆಟ್ಟ ಶಕ್ತಿಗಳಿಗೆ ಆಜ್ಞಾಚಕ್ರದಿಂದ ಶರೀರದಲ್ಲಿ ಸೇರಿಕೊಳ್ಳಲು ಕುಂಕುಮದಿಂದ ಅಡಚಣೆಯುಂಟಾಗುತ್ತದೆ. ಕುಂಕುಮವನ್ನು ಹಚ್ಚಿಕೊಳ್ಳುವುದರಿಂದ ಸ್ತ್ರೀಯರ ಆತ್ಮಶಕ್ತಿಯು ಜಾಗೃತವಾಗಿ ಅವರಲ್ಲಿ ಶಕ್ತಿತತ್ತ್ವವನ್ನು ಆಕರ್ಷಿಸುವ ಪ್ರಚಂಡ ಕ್ಷಮತೆಯು ನಿರ್ಮಾಣವಾಗುತ್ತದದೆ. ಪುರುಷರು ತಮ್ಮ ಮತ್ತು ಇತರರ ಭ್ರೂಮಧ್ಯದಲ್ಲಿ ಮಧ್ಯದ ಬೆರಳಿನಿಂದ ಕುಂಕುಮದ ಉದ್ದ ತಿಲಕವನ್ನು ಹಚ್ಚಬೇಕು. ಕುಂಕುಮದಲ್ಲಿ ತಾರಕ ಮತ್ತು ಮಾರಕ ಶಕ್ತಿಯನ್ನು ಆಕರ್ಷಿಸುವ ಪ್ರಚಂಡ ಕ್ಷಮತೆಯಿದೆ. ದೇವಿಯ ಕೃಪಾಶೀರ್ವಾದವು ಸಿಗಬೇಕೆಂದು ಸ್ತ್ರೀಯರು ಭ್ರೂ ಮಧ್ಯೆದಲ್ಲಿ ಹಚ್ಚಿಕೊಳ್ತಾರೆ.ಕುಂಕುಮವನ್ನು ಹಚ್ಚಿಕೊಳ್ಳುವುದರಿಂದ ಬ್ರಹ್ಮಾಂಡದಲ್ಲಿನ ಚೈತನ್ಯವು ಆಕರ್ಷಿತವಾಗುತ್ತದೆ ಮತ್ತು ಕಡಿಮೆ ಸಮಯದಲ್ಲಿ ವ್ಯಕ್ತಿಯ ಭಾವಜಾಗೃತಿಯಾಗುತ್ತದೆ. ಕುಂಕುಮದಿಂದ ಕೆಟ್ಟ ಶಕ್ತಿಗಳಿಂದ ರಕ್ಷಣೆಯಾಗುತ್ತದೆ. ಆದುದರಿಂದ ಸ್ತ್ರೀಯರು ಬಿಂದಿಗಿಂತ ಕುಂಕುಮವನ್ನು ಹಚ್ಚಿಕೊಳ್ಳಬೇಕು. ಬೇರೆ ಬೆರಳುಗಳಿಂದ ಕುಂಕುಮ ಹಚ್ಚಿಕೊಂಡರೆ ಅಪಾಯವಾಗುತ್ತದೆ. ಧರ್ಮ-ಶಾಸ್ತ್ರದ ಪ್ರಕಾರ ಕುಂಕುಮವನ್ನು ಇದೇ ಬೆರಳಿನಿಂದ ಹಚ್ಚಿಕೊಳ್ಳಬೇಕು. ಅದೂ ಬಿಟ್ಟು ಯಾವ ಬೆರಳನ್ನು ಕೂಡ ಬಳಸಬಾರದು ಎಂದಿದ್ದಾರೆ.
Comments