ರಾಜ್ಯ ನಿವೃತ್ತ ನೌಕರರಿಗೆ ಸಿಕ್ತು ಬಂಪರ್ ಕೊಡುಗೆ : ಪಿಂಚಣಿಯಲ್ಲಿ ಏರಿಕೆ...

ರಾಜ್ಯ ಸರ್ಕಾರ ಈ ಬಾರಿ ಹಿರಿಯಪಿಂಚಣಿದಾರರಿಗೆ ಹೊಸ ವರ್ಷದ ಪ್ರಯುಕ್ತ ಬಂಪರ್ ಉಡುಗೊರೆಯೊಂದನ್ನು ನೀಡಿದ್ದಾರೆ. ದೋಸ್ತಿ ಸರ್ಕಾರ ಮುನ್ನಡೆಸುತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೇ ಅನೇಕ ರೀತಿಯ ಕಸರತ್ತು ನಡೆಸಿದ್ದಾರೆ. ಈಗಾಗಲೇ ಅತಿಥಿ ಉಪನ್ಯಾಸಕರನ್ನು ಮುಂದುವರೆಸುವಂತೆ ಜಾರಿ ನೀಡಲಾಗಿದ್ದು , ಪೆಂಡಿಂಗ್ ಇರುವ ಸಂಬಳವನ್ನು ಮಾಸಿಕ ವೇತನದಂತೇ ತಿಂಗಳಿಗೊಮ್ಮೆ ಕೊಡುವ ಪ್ರಕ್ರಿಯೆ ಕೂಡ ಜಾರಿ ಮಾಡಲಾಗಿದೆ. ಅಲ್ಲದೇ ರಾಜ್ಯ ಸರ್ಕಾರದಲ್ಲಿ ಖಾಲಿ ಇರುವ ಕೆಲ ಹುದ್ದೆಗಳನ್ನು ಭರ್ತಿ ಮಾಡುವ ಯೋಜನೆಯಲ್ಲಿದ್ದಾರೆ.
ರಾಜ್ಯ ಸರ್ಕಾರದ ನಿವೃತ್ತ ನೌಕರರ ಪೈಕಿ 90 ವರ್ಷ ಮೇಲ್ಪಟ್ಟವರಿಗೆ ನೀಡಲಾಗುತ್ತಿರುವ ಪಿಂಚಣಿ ಪ್ರಮಾಣವನ್ನು ಸರ್ಕಾರ ಪರಿಷ್ಕರಿಸುವಂತೆ ಆದೇಶ ಹೊರಡಿಸಿದೆ. 6ನೇ ವೇತನ ಆಯೋಗದ ಶಿಫಾರಸಿನನ್ವಯ ಪಿಂಚಣಿ ಪ್ರಮಾಣ ಪರಿಷ್ಕರಿಸಿರುವ ರಾಜ್ಯ ಸರ್ಕಾರ, 90 ವರ್ಷದಿಂದ 95 ವರ್ಷದವರೆಗಿನ ನಿವೃತ್ತ ನೌಕರರಿಗೆ/ ನೌಕರರ ಕುಟುಂಬಕ್ಕೆ ಈ ವರೆಗೆ ನೀಡಲಾಗುತ್ತಿದ್ದ ಮೂಲ ಪಿಂಚಣಿ ಮೊತ್ತದ ಶೇ.40ರಷ್ಟುಹೆಚ್ಚಳ ಮಾಡಿದೆ. 95 ವರ್ಷದಿಂದ 100 ವರ್ಷದವರೆಗಿನವರಿಗೆ ನೀಡುತ್ತಿದ್ದ ಮೂಲ ಪಿಂಚಣಿ ಮೊತ್ತದಲ್ಲಿ ಶೇ.50ರಷ್ಟುಮತ್ತು 100 ವರ್ಷ ಮೇಲ್ಪಟ್ಟ ನಿವೃತ್ತಿ ನೌಕರರಿಗೆ ಮೂಲ ಪಿಂಚಿಣಿಯ ಶೇ.100ರಷ್ಟುಹೆಚ್ಚಳ ಮಾಡಿ ಹಣಕಾಸು ಇಲಾಖೆ (ಪಿಂಚಿಣಿ) ಜಂಟಿ ಕಾರ್ಯದರ್ಶಿ ವೈ.ಕೆ.ಪ್ರಕಾಶ್ ಇತ್ತೀಚೆಗೆ ಆದೇಶ ಮಾಡಿದ್ದಾರೆ. ಹಿರಿಯ ಪಿಂಚಣಿದಾರರಿಗೆ ಈ ವರ್ಷದ ಶುಭ ಸುದ್ದಿ ಎಂದೇಳಬಹುದು.
Comments