ನೀವ್ ಅನ್ಕೊಂಡಿದ್ದು ಈಡೇರ್'ಬೇಕಂದ್ರೆ ಈ ದೇವರಿಗೆ ಮಣ್ಣಿನ ಬೊಂಬೆ ಕೊಟ್ರೆ ಸಾಕಂತೆ...!!!
ಕಷ್ಟ ಬಂದಾಗ ದೇವರನ್ನು ಬೇಡುವುದು, ಅವನಿಗೆ ಮೊರೆ ಹೋಗುವುದು ಸಾಮಾನ್ಯ. ಎಷ್ಟೋ ಬಾರಿ ನಾವು ಮಾಡಿದ ಕರ್ಮ ಕಾರ್ಪಣ್ಯಗಳನ್ನು ತೊಡೆಯಲು ದೇವರನ್ನು ನೆನೆಯುತ್ತೇವೆ. ಧಾರ್ಮಿಕ ಪೂಜಾ ವಿಧಾನಗಳ ಮೂಲಕ ದೇವರನ್ನು ಸ್ಮರಿಸುತ್ತೇವೆ. ಕಷ್ಟಗಳು ಇಲ್ಲದೆ ಇರುವ ಮನುಷ್ಯನಿಲ್ಲ, ಪ್ರತಿಯೊಬ್ಬರಿಗೂ ಅವರದೇ ಆದಂತಹ ಸಮಸ್ಯೆಗಳು ಇರುತ್ತವೆ, ಅದರಂತೆಯೇ ತನ್ನ ಮುಂದಿನ ಜೀವನದ ಬಗ್ಗೆ ಒಂದಷ್ಟು ಆಸೆಗಳು ಸಹ ಇರುತ್ತದೆ, ಕೆಲವರಿಗೆ ಆರೋಗ್ಯದ ಚಿಂತೆ ಆದರೆ ಇನ್ನು ಕೆಲವರಿಗೆ ತಾವು ಸ್ವಂತ ಮನೆ ಕಟ್ಟುವ ಚಿಂತೆ, ಇನ್ನು ಕೆಲವರಿಗೆ ದುಡ್ಡು ಮಾಡುವ ಚಿಂತೆ, ಮಕ್ಕಳ ಚಿಂತೆ, ಹೀಗೆ ಎಷ್ಟೋ ಚಿಂತೆಗಳ ಮೂಲಕ ಅನೇಕಾನೇಕರು ಈ ದೇವಸ್ಥಾನಕ್ಕೆ ಬರುತ್ತಾರೆ.
ಇಲ್ಲಿನ ದೇವರಿಗೆ ಹರಕೆ ಹೊತ್ತು ಹೋಗುತ್ತಾರೆ. ಇಲ್ಲಿನ ವಿಶೇಷೇನಪ್ಪಾ ಅಂದ್ರೆ ಈ ದೇವಾಲಯಕ್ಕೆ ಬರುವ ಪ್ರತೀಯೊಬ್ಬರು ಒಂದಿಲ್ಲೊಂದು ಕಷ್ಟಗಳ ಜೊತೆ ಸಾಗಿಕೊಂಡೇ ಬಂದವರಾಗಿರುತ್ತಾರೆ. ಇಲ್ಲಿಗೆ ಬಂದು ಹೋದ ನಂತರ ಅವರ ಬದುಕಲ್ಲಿ ಇನ್ನೆಂದೂ ನೋಡಿರದ ವಿಸ್ಮಯ ನಡೆಯುತ್ತಂತೆ. ನಾವೇನು ಅಂದುಕೊಂಡಿರುತ್ತೇವೆಯೋ ಹಾಗೇ ನಡೆಯುವಂತೆ ಇಲ್ಲಿನ ಸೂರ್ಯದೇವ ಮಾಡುತ್ತಾನೆ ಎಂಬ ನಂಬಿಕೆ ಇದೆ. ಅದರಂತೇ ನಡೆದರೆ ನೀವು ಹರಕೆಯನ್ನು ಸಲ್ಲಿಸಬೇಕಾಗುತ್ತದೆ. ಅದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಈ ದೇವಾಲಯಕ್ಕೆ ಸುಮಾರು ಏಳು ಶತಮಾನಗಳ ಇತಿಹಾಸ ಇದೆಯಂತೆ, 13 ನೇ ಶತಮಾನದಲ್ಲಿ ಆಡಳಿತದಲ್ಲಿದ್ದ ಗಂಗ ಅರಸರು ದೇವಾಲಯದ ಅಭಿವೃದ್ಧಿಗೆ ಕಾರಣ ಎಂದು ಹೇಳಲಾಗುತ್ತದೆ, ದಕ್ಷಿಣ ಭಾರತದ ಪ್ರಸಿದ್ದ ದೇವಾಲಯವಾದ ಶ್ರೀ ಕ್ಷೇತ್ರ ಧರ್ಮಸ್ಥಳ ದೇವಾಲಯದಿಂದ ಉಜಿರೆ ಮಾರ್ಗವಾಗಿ 13 ಕಿಲೋಮೀಟರ್ ಪ್ರಯಾಣಿಸಿದರೆ ಮಣ್ಣಿನ ಹರಕೆಯ ದೇವಸ್ಥಾನ ಎಂದು ಪ್ರಸಿದ್ಧಿ ಹೊಂದಿರುವ ಈ ದೇವಾಲಯವು ಸಿಗುತ್ತದೆ.
ಇನ್ನು ಈ ದೇವಾಲಯಕ್ಕೆ ನೀವು ಭೇಟಿ ನೀಡಿದರೆ ಎಲ್ಲಿ ನೋಡಿದರೂ ಅಲ್ಲೆಲ್ಲ ಚಿಕ್ಕ ಚಿಕ್ಕ ಮಣ್ಣಿನ ಮೂರ್ತಿಗಳು ನಿಮಗೆ ಕಾಣಲು ಸಿಗುತ್ತದೆ, ದನ ಕರು ಮೂರ್ತಿಗಳು, ತಾಯಿ ಮಗ, ಮೊಬೈಲ್, ಕಂಪ್ಯೂಟರ್, ಮೇಜು, ವಿಮಾ,ನ ಕಟ್ಟಡ, ನಾಯಿ, ಬೆಕ್ಕು ಹೃದಯ ಮೂತ್ರಪಿಂಡ ಹೀಗೆ ಎಲ್ಲಾ ರೀತಿಯ ಮಣ್ಣಿನ ಗೊಂಬೆಗಳನ್ನು ಸಹ ನೀವು ಇಲ್ಲಿ ನೋಡಬಹುದು, ಹಾಗೆಯೇ ಇದಿಷ್ಟು ಹರಕೆಯ ಗೊಂಬೆಗಳು. ಇದೆಲ್ಲಾ ತಮ್ಮ ಜೀವನದಲ್ಲಿ ಕಷ್ಟ ಅನುಭವಿಸಿದವರಿಂದಲೇ ದೊರಕಿರುವಂತಹ ಮಣ್ಣಿನ ಬೊಂಬೆಗಳು.
Comments