ಯಾರು ಲೈಕ್ ಮಾಡಿಲ್ಲ ಅಂತಾ ಹೀಗ್ ಮಾಡ್ಕೊಳದಾ...!?
ಜೀವನದಲ್ಲಿ ಏನನ್ನೂ ಸಾಧಿಸಲಾಗಲಿಲ್ಲ. ಯಾರು ತನ್ನನ್ನು ಇಷ್ಟಪಡುತ್ತಿಲ್ಲ ಎಂದು ಜಿಗುಪ್ಸೆಗೊಂಡ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಮೊಬೈಲ್’ನಲ್ಲಿ ಲೈವ್ ಸೂಸೈಡ್ ಮಾಡಿಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.ಮೈಸೂರಿನ ಬನ್ನಿಮಂಟಪದ ಕಾವೇರಿನಗರದ ನಿವಾಸಿ ಯಾಸ್ಮಿನ್ ತಾಜ್(18) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.ಈಕೆ ಜೆಎಸ್‍ಎಸ್ ಕಾಮರ್ಸ್ ಕಾಲೇಜಿನಲ್ಲಿ ಓದುತ್ತಿದ್ದು, ತಾನು ಯಾರಿಗೆ ಬೇಡವಾದವಳು, ತನ್ನಿಂದ ಏನನ್ನೂ ಸಾಧಿಸಲಾಗದು ಎಂದು ಮನನೊಂದು ಈ ರೀತಿ ಮಾಡಿಕೊಂಡಿದ್ದಾಳೆ.
ನನಗೆ ಓದು ತಲೆ ಹತ್ತಲಿಲ್ಲ. ಸಿಂಗರ್ ಅಥವಾ ಲಾಯರ್ ಆಗಬೇಕೆಂಬ ಆಸೆಯಿತ್ತು. ಅದು ಈಡೇರಲಿಲ್ಲ. ಸಾಲದಕ್ಕೆ ನನಗೆ ಆರೋಗ್ಯ ಸಮಸ್ಯೆ ಇದೆ. ಬದುಕಿದ್ದಾಗ ನನ್ನನ್ನು ಯಾರೂ ಇಷ್ಟಪಡಲಿಲ್ಲ. ಸತ್ತ ಮೇಲಾದರೂ ನನ್ನ ಈ ವಿಡಿಯೋವನ್ನು ಲೈಕ್ ಮಾಡಿ ಶೇರ್ ಮಾಡಿ ಎಂದು ಮಾತ್ರೆ ಸೇವಿಸಿ ಸಾವನ್ನಪ್ಪಿದ್ದಾಳೆ. ಸದ್ಯ ಲೈವ್ ಸೂಸೈಡ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈಗಷ್ಟೇ ಡಿಲೀಟ್ ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments