ಶಾಕಿಂಗ್...! ಲೋಕಸಭೆ ಚುನಾವಣೆಗೆ ಮಂಡ್ಯದಿಂದ ನಿಖಿಲ್ ಬದಲು ಅಭಿಷೇಕ್ ಗೆ ಸಿಗುತ್ತಾ ಟಿಕೆಟ್......?

ರಾಜ್ಯದಲ್ಲಿ ದೋಸ್ತಿ ಸರ್ಕಾರದ್ದೇ ಮಾತು. ಲೋಕಸಭೆ ಚುನಾವಣೆ ಕಾವು ಹೆಚ್ಚಾಗುತ್ತಿದ್ದಂತೆ ಯಾರನ್ನು ನಿಲ್ಲಿಸಬೇಕು ಎಂಬ ಚರ್ಚೆಯು ಕೂಡ ಭಾರಿಯೇ ಸದ್ದು ಮಾಡುತ್ತಿದೆ. ಸದ್ಯ ಮಂಡ್ಯ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿನಾ ಅಥವಾ ಅಭಿಷೇಕ್ ಅಂಬರೀಶ್ ಇಳಿಯುತ್ತಾರಾ ಎಂಬುದೇ ಇನ್ನು ಖಾತರಿಯಾಗಿಲ್ಲ. ಈಗಾಗಲೇ ರೆಬೆಲ್ ತವರೂರು, ಕುಮಾರಸ್ವಾಮಿ ಅಕ್ಕರೆಯ ನೆಲ ಮಂಡ್ಯ ಈ ಬಾರಿ ಯಾರನ್ನು ರಾಜನನ್ನಾಗಿ ನೇಮಿಸಿಕೊಳ್ಳುತ್ತದೋ ...? ಆದರೆ ನಿಖಿಲ್ ಕುಮಾರಸ್ವಾಮಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರೋ ಇಲ್ಲವೋ ಅನ್ನೋದು ಇನ್ನೂ ಖಾತರಿ ಆಗಿಲ್ಲ. ‘ಅವರ ಅಭಿಮಾನಿಗಳು ನಿಖಿಲ್ ಕುಮಾರಸ್ವಾಮಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು ಅಂತಾ ಒತ್ತಾಯ ಮಾಡ್ತಿದ್ದಾರೆ’ ಎಂದು ನಿನ್ನೆಯಷ್ಟೇ ಸಿಎಂ ಕುಮಾರಸ್ವಾಮಿ ಹೇಳಿದ್ದರು. ಆದರೆ ಮಂಡ್ಯ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡೋದಕ್ಕೆ ಕಾಂಗ್ರೆಸ್ನಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಈ ಸಂಬಂಧ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಮಂಡ್ಯ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಅರವಿಂದ್ ಕುಮಾರ್, ನಾಲ್ಕು ತಿಂಗಳ ಹಿಂದೆ ಸಂಸದರಾಗಿದ್ದ ಎಲ್.ಆರ್.ಶಿವರಾಮೇಗೌಡ ಕೈಬಿಟ್ಟು ನಿಖಿಲ್ಗೆ ಮಣೆ ಹಾಕಲು ಜೆಡಿಎಸ್ ಹೊರಟಿದೆ. ಮಂಡ್ಯಕ್ಕೆ ನಿಖಿಲ್ ಕುಮಾರಸ್ವಾಮಿ ಬರುವ ಅವಶ್ಯಕತೆ ಇಲ್ಲ ಎಂದು ಹೇಳಿದ್ರು. ಕಾಂಗ್ರೆಸ್, ದಿ.ಅಂಬರೀಶ್ ಪುತ್ರ ಅಭಿಷೇಕ್ ಅವರನ್ನ ಮಂಡ್ಯ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಮಾಡಲಿ. ಒಂದು ವೇಳೆ ಮೈತ್ರಿಯಾದರೂ ಜೆಡಿಎಸ್ ಪಕ್ಷ ಅಭಿಷೇಕ್ಗೆ ಟಿಕೆಟ್ ಕೊಡಬೇಕು. ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಗೆ ನಮ್ಮ ಸಂಪೂರ್ಣ ವಿರೋಧ ಇದೆ ಅಂತಾ ಹೇಳಿದ್ರು. ಈಗಾಗಲೇ ರೆಬೆಲ್ ಅಭಿಮಾನಿಗಳು ಕಾಂಗ್ರೆಸ್ ನಿಂದ ಸ್ಪರ್ಧೆ ಗೆ ಇಳಿಯುವುದಾದರೆ ಆ ಟಿಕೆಟ್ ರೆಬೆಲ್ ಮಗ ಅಭಿಷೇಕ್ ಗೆ ಸಿಗಬೇಕು ಎಬುದು ಅಭಿಮಾನಿಗಳ ಒತ್ತಾಯ ಕೂಡ ಹೌದು.
Comments