ಇದೆಂಥಾ ನ್ಯಾಯ..... ಪ್ರಾಣ ಉಳಿಸಿದ್ದಕ್ಕೆ ಕೆಲಸವೇ ಕಳೆದುಕೊಂಡ ಅಮಾಯಕ ಸೆಕ್ಯುರಿಟಿ...!!!
ಚಾಮರಾಜ ನಗರದ ಜಿಲ್ಲಾಸ್ಪತ್ರೆಯಲ್ಲಿ ಭದ್ರತಾ ಸಿಬ್ಬಂಧಿಯಾಗಿ ಕೆಲಸ ಮಾಡುತ್ತಿದ್ದ ಸತೀಶ್ ಸದ್ಯ ಕೆಲಸ ಕಳೆದುಕೊಂಡು ಪರದಾಡುವಂತಾಗಿದೆ. ಜನವರಿ 8 ರಂದು ಆಸ್ಪತ್ರೆಯ ಸಿಬ್ಬಂದಿ ಇಲ್ಲದ ವೇಳೆ, ರೋಗಿಯೊಬ್ಬರಿಗೆ ,ಹಾಕಿದ್ದ ಗ್ಲೂಕೋಸ್ ಬಾಟಲ್ ಆಫ್ ಮಾಡಲಾಗಿತ್ತು. ಒಂದು ವೇಳೆ ಸಿಬ್ಬಂದಿ ಆ ಬಾಟಲಿಯನ್ನು ಆಫ್ ಮಾಡದೇ ಇದ್ದಿದ್ದರೆ ರೋಗಿಯ ರಕ್ತ ಮತ್ತೆ ಬಾಟಲಿಯೊಳಗೆ ವಾಪಸ್ ಆಗುತ್ತಿತ್ತು. ರಕ್ತ ಮತ್ತೆ ಬರುವ ಸಾಧ್ಯತೆ ಇದ್ದುದ್ದರಿಂದ ಇದನ್ನು ಗಮನಿಸಿದ ಅಲ್ಲಿಯ ಭದ್ರತಾ ಸಿಬ್ಬಂದಿ ಬಾಟಲಿಯನ್ನು ಆಫ್ ಮಾಡಿದ್ದರು ಎನ್ನಲಾಗಿದೆ. ಆದರೆ ಅದೇ ತಪ್ಪಾಗಿ ಹೋಯ್ತು ನೋಡಿ.
ಅಂದಹಾಗೇ ನರ್ಸ್ ಇಲ್ಲದೇ ಅದೇಗೆ ನೀನು, ರೋಗಿಯ ಗ್ಲೂಕೋಸ್ ಬಾಟಲಿಯನ್ನು ಆಫ್ ಮಾಡಿದ್ದೆ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ಸತೀಶ್ ಅವರನ್ನು ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ಆದರೆ ಸತೀಶ್ ಮಾಡಿದ್ದ ಮಾನವೀಯತೆಯಿಂದ ಆ ರೋಗಿಯ ಪ್ರಾಣ ಉಳಿದಿದೆ. ಆದರೆ ರೋಗಿಯನ್ನು ಸರಿಯಾಗಿ ಗಮನಿಸದ ನರ್ಸ್, ಗ್ಲೋಕೋಸ್ ಬಾಟಲಿಯನ್ನು ಆಫ್ ಮಾಡಿದ್ದರಿಂದ, ಎಲ್ಲಿ ತಮ್ಮ ತಪ್ಪು ಸತೀಶ್ ಮೂಲಕ ಹೊರ ಬರುತ್ತದೆ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ಅವರನ್ನು ಕೆಲಸದಿಂದ ತೆಗೆದುಹಾಕಿದೆ.ಏಜೆನ್ಸಿ ಮೇಲೆ ಒತ್ತಡ ಹೇರಿ ಸತೀಶ್ ಅವರನ್ನು ಕೆಲಸದಿಂದ ತೆಗೆದು ಹಾಕಲಾಗಿದ್ದು, ಮಾನವೀಯತೆ ತೋರಿದ್ದಕ್ಕೆ ಕೆಲಸ ಕಳೆದುಕೊಂಡ ಅವರು ಪರದಾಡುವಂತಾಗಿದೆ.
Comments