ಮೆಟ್ರೋದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಯುವಕನಿಗೆ ಸಿಎಂ ಕಿವಿಮಾತು!

ಮೆಟ್ರೋ ನಿಲ್ದಾಣದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ಸಿಎಂ ಕುಮಾರಸ್ವಾಮಿ ಇಂದು ಭೇಟಿ ಮಾಡಿಆರೋಗ್ಯ ವಿಚಾರಿಸಿದ್ದಾರೆ. ನಿಮ್ಹಾನ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವಕನಿಗೆ ಬುದ್ಧಿಮಾತು ಹೇಳಿದ ಕುಮಾರಸ್ವಾಮಿ , ತಂದೆ ತಾಯಿ ಮಾತು ಕೇಳ್ರಪ್ಪಾ ಎಂದರು. ಯುವಕ ವೇಣುಗೋಪಾಲನನ್ನು ಭೇಟಿ ಮಾಡಿದ ಬಳಿಕ ಕುಮಾರಸ್ವಾಮಿ ಅವರು, ಮಕ್ಕಳು ಹೆತ್ತ ವರ ಪ್ರೀತಿ ಕಾಳಜಿ ಅರಿಯಬೇಕು . ಚಿಕ್ಕವಯಸ್ಸಿನಲ್ಲಿ ಹೀಗೆಲ್ಲಾ ಮಾಡಬಾರದು, ತಂದೆ ತಾಯಿರನ್ನು ನೋಯಿಸಬಾರದು ಎಂದರು.
ವೇಣುಗೋಪಾಲ್ ಅವರ ತಾಯಿ ಟೇಲರಿಂಗ್ ವೃತ್ತಿ ಮಾಡುತ್ತಿದ್ದು, ಎಸ್‍ಎಸ್‍ಎಲ್‍ಸಿಯಲ್ಲಿ ಒಂದು ವಿಷಯದಲ್ಲಿ ಅನುತ್ತೀರ್ಣನಾಗಿದ್ದ ಹೀಗಾಗಿ ಪರೀಕ್ಷೆ ಬರೆದು ತೇರ್ಗಡೆಯಾಗುವಂತೆ ಬುದ್ಧಿ ಹೇಳಿದ್ದರು. ಇದರಿಂದ ಮನನೊಂದು ಆತ ಆತ್ಮಹತ್ಯೆಗೆ ಯತ್ನಿಸಿದ್ದ ಎಂದು ಹೇಳಲಾಗಿತ್ತು. ಹೆತ್ತವರು ಹೇಳುವುದು ನಿಮ್ಮ ಒಳ್ಳೆದಕ್ಕೆ ವಿನಹ ನಿಮ್ಮನ್ನು ಹಾಳು ಬಾವಿಗೆ ತಳ್ಳುವುದಕ್ಕೆ ಅಲ್ಲ. ಅವರ ಮಾತನ್ನು ತಲೆಯಲ್ಲಿಟ್ಟುಕೊಂಡು, ಮನಸಿಟ್ಟು ಓದುವುದೋ ಅಥವಾ ಕೆಲಸದಲ್ಲಿ ತೊಡಗಿಕೊಳ್ಳ ಬೇಕು. ಇಂತಹ ಕೃತ್ಯಗಳನ್ನು ಮಾಡಿಕೊಂಡು ಜೀವಕ್ಕೆ ಹಾನಿ ತಂದುಕೊಳ್ಳುವುದಲ್ಲವೆಂದರು. ಇನ್ನು ವೇಣು ಗೋಪಾಲ್ ಗೆ ಕುಮಾರಸ್ವಾಮಿ ಸಾಂತ್ವಾನ ಮುಖೇನ ಆರೋಗ್ಯ ವಿಚಾರಿಸಿ ಇನ್ನೊಮ್ಮೆ ಹೀಗೆಲ್ಲಾ ಮಾಡಿಕೊಳ್ಳದಂತೆ ಬುದ್ಧಿಮಾತು ಹೇಳಿದ್ರು. ಇನ್ನು ವೇಣು ಗೋಪಾಲ್ ಸಿಎಂ ಕುಮಾರಸ್ವಾಮಿ ಜೊತೆ ಮಾತನಾಡುತ್ತಾ ನಾನು ಆತ್ಮಹತ್ಯೆ ಮಾಡಿಕೊಂಡಿಲ್ಲ ಆ ಕ್ಷಣದಲ್ಲಿ ಏನಾಯ್ತೋ ಗೊತ್ತಿಲ್ಲವೆಂದಿದ್ದಾನೆ. ಸದ್ಯ ವೇಣುಗೋಪಾಲ್ ನಿಮ್ಹಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
Comments