ಅನಾಥ ಮೃತದೇಹವನ್ನು ತ್ಯಾಜ್ಯದೊಂದಿಗೆ ಸುಟ್ಟು ಮಾನವೀಯತೆ ಮರೆತ ಪೊಲೀಸರು..!!
ಸಾವು ಅನ್ನೋದು ಯಾವ ಟೈಮಿನಲ್ಲಿ ಹೇಗೆ ಬರುತ್ತದೆ ಅನ್ನೋದು ಗೊತ್ತಾಗಲ್ಲ. ಕೆಲವೊಮ್ಮೆ ಅನಾಥಶವ ಆಗಿ ಸಾಯುವವರು ಅದೆಷ್ಟು ಜನನೋ… ಆ ರೀತಿ ಅನಾಥ ಶವಗಳಿಗೆ ಇಲಾಖೆಯಿಂದಲೇ ಹಣ ಕೊಟ್ಟು ಅಂತ್ಯ ಕ್ರಿಯೆಗೆ ಸಹಾಯ ಮಾಡುತ್ತಾರೆ.. ಆದರೆ ಇಲ್ಲೊಂದು ಘಟನೆ ನಡೆದಿದೆ ನೋಡಿ.. ವಾರಸುದಾರರಿಲ್ಲದ ಮೃತದೇಹದ ಅಂತ್ಯಕ್ರಿಯೆಗೆ ಇಲಾಖೆಯಿಂದ ಹಣದ ದೊರೆತ ಹೊರತಾಗಿಯೂ ಆ ಹಣವನ್ನು ತಾವೇ ಇಟ್ಟುಕೊಂಡು ಪೊಲೀಸರು ಮೃತದೇಹವನ್ನು ತ್ಯಾಜ್ಯದ ರಾಶಿಯೊಂದಿಗೆ ಸುಟ್ಟ ಅಮಾನವೀಯ ಘಟನೆ ಉತ್ತರ ಪ್ರದೇಶದ ಬಾಘ್‌ಪತ್ ಎಂಬ ಸ್ಥಳದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ವಾರಸುದಾರರಿಲ್ಲದ ಮೃತದೇಹಕ್ಕೆ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲು ಇಲಾಖೆ ಪೊಲೀಸ್ ಸಿಬ್ಬಂದಿಗೆ ರೂ.2,700 ಮಂಜೂರು ಮಾಡಿತ್ತು ಎಂದು ಹೇಳಲಾಗುತ್ತಿದೆ. . ಆದರೆ ಆ ಹಣವನ್ನು ಪೊಲೀಸರೇ ಇಟ್ಟುಕೋಮಡು ತದ ನಂತರ ಮೃತದೇಹವನ್ನು ಪ್ಲಾಸ್ಟಿಕ್ ಮತ್ತು ಟಯರ್ ತ್ಯಾಜ್ಯಗಳೊಂದಿಗೆ ಸೀಮೆ ಎಣ್ಣೆ ಹಾಕಿ ಸುಟ್ಟಿದ್ದಾರೆ. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಹಿರಿಯಾಧಿಕಾರಿಗಳು ತನಿಖೆಗೆ ಆದೇಶಿಸಿದ್ಧಾರೆ. ಯಾವುದೇ ವಾರಸುದಾರರಿಲ್ಲದ ಹೆಣವನ್ನು ಸೂಕ್ತ ರೀತಿಯಲ್ಲಿ ಅಂತ್ಯಕ್ರಿಯೆ ಮಾಡಬೇಕಿದೆ. ಆದರೆ ಇಲ್ಲಿ ಸಿಬ್ಬಂದಿ ನಡೆಸಿದ್ದು ಭ್ರಷ್ಟಾಚಾರ ಮಾತ್ರವಲ್ಲ ಅಮಾನವೀಯ ಕೂಡ ಎಂದು ಮಾಜಿ ಡಿಜಿಪಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾನವೀಯತೆಯನ್ನು ಪೊಲೀಸರೇ ಮರೆತರೆ ಹೇಗೆ ಹೇಳಿ.. ಜವಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕಾದವರೇ ಬೇಜವಾಬ್ಧಾರಿಯಿಂದ ನಡೆದುಕೊಳ್ಳುತ್ತಾರೆ..
Comments