ಮಕರ ಸಂಕ್ರಾಂತಿಯಂದು ಎಳ್ಳು-ಬೆಲ್ಲ ಯಾಕ್ ತಿನ್ನುತ್ತಾರೆ ಗೊತ್ತಾ..?

ಸಂಕ್ರಾಂತಿ ಹಬ್ಬದ ದಿನದಂದು ಎಲ್ಲರು ಹೊಸ ವರ್ಷದ ಮೊದಲ ಹಬ್ಬ ಎಂದು ಸಂತಸದಿಂದ ಬರಮಾಡಿಕೊಳ್ಳುತ್ತಾರೆ.. ವರ್ಷದ ಮೊದಲ ದಿನ ಸಂಕ್ರಾಂತಿ ಹಬ್ಬ ಹೆಂಗಳೆಯರಿಗೆ ಸಂಭ್ರಮದ ಹಬ್ಬವೇ ಸರಿ.. ಸಂಪ್ರದಾಯವಾಗಿ ಹಬ್ಬವನ್ನು ಆಚರಣೆ ಮಾಡುತ್ತಾರೆ.. ಬೆಳ್ಳಿಗೆ ಎದ್ದು ಮನೆಯ ಮುಂದೆ ಬಣ್ಣ ಬಣ್ಣದ ರಂಗೋಲಿಯನ್ನು ಹಾಕಿ ಹೊಸ ಬಟ್ಟೆ ತೊಟ್ಟು, ವಿಧವಿಧವಾದ ಖ್ಯಾದಗಳನ್ನು ಮಾಡಿ ಸಂತಸದಿಂದ ಇರುತ್ತಾರೆ. ಅಷ್ಟೆ ಅಲ್ಲದೆ ಆ ಹಬ್ಬದ ದಿನದಂದು ಎಳ್ಳು ಬೆಲ್ಲ ಮನೆ ಮನೆಗೂ ಹಂಚಿ ಸಾಕಷ್ಟು ಸಂಭ್ರಮಿಸುತ್ತಾರೆ.
ಇನ್ನೂ ಶಾಸ್ತ್ರಗಳ ಪ್ರಕಾರ ಮಕರ ಸಂಕ್ರಾಂತಿ ದಿನ ಸೂರ್ಯ ದೇವ ಧನು ರಾಶಿಯಿಂದ ಮಕರ ರಾಶಿ ಪ್ರವೇಶ ಮಾಡುತ್ತಾನೆ. ಶನಿಯು ಮಕರ ರಾಶಿಯ ದೇವನಾಗಿರುತ್ತಾನೆ. ಶನಿ ಸೂರ್ಯನ ಮಗ ಆದರೂ ಕೂಡ ತಂದೆಯೊಂದಿಗೆ ದ್ವೇಷ ಹೊಂದಿರುತ್ತಾನೆ.. ಹೊಂದಿರುತ್ತಾನೆ. ಆದುದರಿಂದ ಶನಿ ಸೂರ್ಯನಿಗೆ ಯಾವುದೇ ರೀತಿ ಕಷ್ಟ ಕೊಡಬಾರದು ಎಂದು ಈ ದಿನ ಎಳ್ಳು ದಾನ ಮಾಡಲಾಗುತ್ತದೆ. ಇನ್ನೂ ಶಾಸ್ತ್ರಗಳಲ್ಲಿ ಅಷ್ಟೆ ಅಲ್ಲದೆ ವೈಜ್ಞಾನಿಕವಾಗಿ ನೋಡಿದರೆ ಎಳ್ಳು ಸೇವನೆ ಮಾಡಿದರೆ ಶರೀರ ಬಿಸಿಯಾಗಿರುತ್ತದೆ. ಜೊತೆಗೆ ಇದರ ಎಣ್ಣೆಯಿಂದ ದೇಹಕ್ಕೆ ತೇವಾಂಶ ಕೂಡ ಸಿಗುತ್ತದೆ. ಚಳಿಗಾಲದಲ್ಲಿ ದೇಹದ ತಾಪಮಾನ ಇಳಿಯುತ್ತದೆ. ಈ ಸಮಯದಲ್ಲಿ ವಾತಾವರಣದೊಂದಿಗೆ ದೇಹದ ಸಮತೋಲನ ಕಾಯ್ದುಕೊಳ್ಳಲು ಎಳ್ಳು ತಿನ್ನುವುದು ಒಳ್ಳೆಯದು. ಎಳ್ಳಿನಲ್ಲಿ ಸತು, ಮೆಗ್ನಿಷಿಯಂ, ಕಬ್ಬಿಣಾಂಶ, ಮ್ಯಾಂಗನೀಸ್, ಕ್ಯಾಲ್ಸಿಯಂ, ಫಾಸ್ಪರಸ್, ವಿಟಮಿನ್ ಬಿ1 ಮೊದಲಾದ ಪೌಷ್ಟಿಕಾಂಶಗಳಿವೆ. ಆದುದರಿಂದ ಇದನ್ನು ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ವೈಜ್ಞಾನಿಕವಾಗಿ ಹೇಳಲಾಗುತ್ತದೆ. ಹಾಗಾಗಿ ನೀವು ಕೂಡ ಎಳ್ಳು ಬೆಲ್ಲ ತಿಂದು ಸಂತಸದಿಂದ ಇರಿ..
Comments