ವಾಹನ ಸವಾರರಿಗೆ ಮತ್ತೊಂದು ಬಿಗ್ ಶಾಕ್..!! ಸ್ವಲ್ಪ ಯಾಮಾರಿದ್ರೂ ಕಂಬಿ ಎಣಿಸಬೇಕಾಗುತ್ತದೆ..!!!
ಯುವಕರಿಗೆ ಬೈಕ್ ಅಂದರೆ ಒಂಥರಾ ಕ್ರೇಜ್ .. ಶೋ ರೂಂನಿಂದ ತಂದಾಗ ಬೈಕ್ ಒಂದು ರೀತಿ ಇರುತ್ತೆ.. ಹುಡುಗರ ಕೈಗೆ ಬಂದ ಮೇಲೆ ಮುಗಿತು.. ಹಾರ್ನ್ ಚೇಂಜ್ ಮಾಡೋದಂತೆ ಅದಂತೆ ಇದಂತೆ ಅಂತ ಫುಲ್ ಆಲ್ಟ್ರೇಷನ್ ಮಾಡಿ ಓಡಾಡಿಸುತ್ತಾರೆ. ಇದೀಗ ಅವಕ್ಕೆಲ್ಲಾ ಬ್ರೇಕ್ ಬಿದ್ದಿದೆ. ವಾಹನ ಸವಾರರು ನ್ಯಾಯಾಲಯ ಕೊಡುವ ತೀರ್ಪಿಗೆ ಕಿರಿಕಿರಿ ಮಾಡಿಕೊಂಡಿದ್ದಾರೆ ಅನಿಸುತ್ತದೆ.. ಇದೀಗ ಉತ್ಪಾದಕರು ತಯಾರಿಸಿದ ರೂಪದಲ್ಲಿಯೇ ಮೋಟಾರು ವಾಹನಗಳು ಇರಬೇಕು. ವಾಹನಗಳ ಮೂಲಸ್ವರೂಪವನ್ನು ಯಾವುದೇ ಕಾರಣಕ್ಕೂ ಬದಲಿಸುವಂತಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಬುಧವಾರ ಆದೇಶವನ್ನು ಹೊರಡಿಸಿದೆ.. ನೋಂದಣಿಯಾದ ಸಂದರ್ಭದಲ್ಲಿಯೇ ಉತ್ಪಾದಕರು ವಾಹನಗಳ ಮೂಲಸ್ವರೂಪದ ಬಗ್ಗೆ ಮಾಹಿತಿ ನೀಡಿರುತ್ತಾರೆ.
ಅದೇ ಮೂಲಸ್ವರೂಪದಲ್ಲೇ ವಾಹನಗಳು ಮುಂದೆಯೂ ಕೂಡ ಇರಬೇಕು. ವಾಹನದ ವಿನ್ಯಾಸವಾಗಲೀ ಅಥವಾ, ಸ್ವರೂಪ ಬದಲಾವಣೆಗಾಗಲೀ ಯಾವುದೇ ರೀತಿಯ ಅವಕಾಶವಿಲ್ಲ' ಎಂದು ನ್ಯಾ| ಅರುಣ್ ಮಿಶ್ರಾ ಹಾಗೂ ನ್ಯಾ| ವಿನೀತ್ ಸರಣ್ ಅವರ ಪೀಠ ತಿಳಿಸಿದೆ.. ಈ ಹಿಂದೆ ಕೇರಳದಲ್ಲಿ ಇದ್ದಂತಹ ಮೋಟಾರು ವಾಹನ ಕಾಯ್ದೆಯ ಅಡಿಯಲ್ಲಿ ವಾಹನದ ಮೂಲಸ್ವರೂಪ ಬದಲಾಯಿಸಲು ಅವಕಾಶವಿದೆ ಎಂದು ಕೇರಳ ಹೈಕೋರ್ಟ್ ತೀರ್ಪು ನೀಡಿತ್ತು. ಈ ತೀರ್ಪನ್ನು ಸುಪ್ರೀಂ ಕೋರ್ಟು ಬುಧವಾರ ರದ್ದುಗೊಳಿಸಿ, ಈ ಮಹತ್ವದ ಆದೇಶವನ್ನು ಪ್ರಕಟಿಸಿತು ಎಂದು ಹೇಳಲಾಗುತ್ತಿದೆ. ಕೇಂದ್ರ ಸರ್ಕಾರ ಜಾರಿಗೆ ತಂದ ಮೋಟಾರು ವಾಹನ ಕಾಯ್ದೆಯಲ್ಲಿ ಮಾಡಲಾದ ತಿದ್ದುಪಡಿಯನ್ನು ಉಲ್ಲೇಖಿಸಿದ ನ್ಯಾಯಪೀಠ, 'ವಾಹನದ ಮೂಲಸ್ವರೂಪವನ್ನು ಬದಲಿಸಲು ತಿದ್ದಿಪಡಿ ಕಾಯ್ದೆಯಡಿ ನಿರ್ಬಂಧವಿದೆ. ರಸ್ತೆ ಸುರಕ್ಷತೆ, ಪರಿಸರ.. ಮುಂತಾದ ವಿಷಯಗಳನ್ನು ಗಮನದಲ್ಲಿ ಇರಿಸಿಕೊಂಡು ನಿಯಮ ಜಾರಿಗೆ ತರಲಾಗಿದೆ' ಎಂದು ತಿಳಿಸಿದರು..
Comments