ದೇವರಿಗೆ ತೆಂಗಿನಕಾಯಿ ಹೊಡೆಯುವ ಅಭ್ಯಾಸವಿದ್ಯಾ …? ಅದಕ್ಕೂ ಮುನ್ನ ಈ ವಿಷಯ ತಿಳಿದುಕೊಳ್ಳಿ

ಅಂದಹಾಗೇ ಇಂದಿನಕಾಲದವರಿಗೆ, ಅಷ್ಟೇ ಯಾಕೆ ಇನ್ನೂ ಹಲವರಿಗೆ ದೇವರಿಗೆ ಪೂಜೆ ಸಲ್ಲಿಸುವಾಗ ತೆಂಗಿನಕಾಯಿಯನ್ನೇ ಹೊಡೆಯಬೇಕು ಯಾಕೆ…? ಅಂತಾ ಗೊತ್ತರಲಿಕ್ಕೆ ಸಾಧ್ಯವಿಲ್ಲ. ದೇವರಿಗೆ ತೆಂಗಿನಕಾಯಿ ಇಲ್ಲದೇ ಹೋದರೆ ಆ ಪೂಜಾ ಅಪೂರ್ಣ ಕೂಡ ಹೌದು. ತೆಂಗಿನಕಾಯಿಯ ರಹಸ್ಯ ಗೊತ್ತಾ…? ನೀವು ಈ ಸುದ್ದಿಯನ್ನು ಓದಿದರೆ…ಶ್ರೀಫಲ ತೆಂಗಿನಕಾಯಿಯ ಮಹತ್ವ ತಿಳಿಯುತ್ತೀರಿ. ಭಾರತೀಯ ಸಂಪ್ರದಾಯದಲ್ಲಿ ಪೂಜಾ ವಿಧಾನಗಳು ಅದರದ್ದೇ ಆದ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿವೆ. ದೇವರಿಗೆ ತೆಂಗಿನ ಕಾಯಿ ಹೊಡೆಯುವ ಹಿನ್ನಲೆ ಗೊತ್ತಾ..?
ತೆಂಗಿನಕಾಯಿಗೆ ತನ್ನದೇ ಆದ ವೈಶಿಷ್ಟ್ಯತೆ ಇದೆ. ದೇವರಿಗೆ ಕಾಯಿ ಅರ್ಪಿಸೋದ್ರಿಂದ ಇಷ್ಟಕಾರ್ಯ ನೆರವೇರುತ್ತದೆ. ಅಲ್ಲದೇ ತೆಂಗಿನ ಕಾಯಿಯೇ ಹೊಡೆಯಬೇಕು ಎನ್ನುವುದು ಪ್ರತೀತಿಕೂಡ ಹೌದು. ತೆಂಗಿಕಾಯಿಯಲ್ಲಿ ಐದು ದೇವತೆಗಳಿದ್ದಾರೆ. ಶಿವ, ದುರ್ಗ, ಗಣಪತಿ, ಶ್ರೀ ರಾಮ ಮತ್ತು ಕೃಷ್ಣ ನೆಲೆಸಿದ್ದಾರಂತೆ. ಈ ಎಲ್ಲ್ಲಾ ದೇವರುಗಳ ವಾಸ ಸ್ಥಾನಕ್ಕೆ ಇದನ್ನು ಶ್ರೀಫಲ ಎನ್ನುತ್ತಾರೆ. ತೆಂಗಿನಕಾಯಿಯನ್ನು ಹೊಡೆಯುವುದರಿಂದ ನಾವು ಆ ದೇವರನ್ನು ಸ್ಮರಿಸಿದಂತೆ. ಅದರಲ್ಲಿ ಹೆಚ್ಚು ಸಾತ್ವಿಕ ಶಕ್ತಿಯನ್ನು ಹೊಂದಿದೆ. ತೆಂಗಿನಕಾಯಿಯಲ್ಲಿ ಆ ಐದು ದೇವತೆಗಳು ನೆಲೆಸಿರುತ್ತಾರೆ. ಅದಕ್ಕಾಗಿಯೇ ಯಾರು ಕಾಯಿಯನ್ನು ಕಾಲಿನಿಂದ ಒದೆಯುವುದಿಲ್ಲ. ಕಾಯಿಯನ್ನು ಹೊಡೆಯುವುದರಿಂದ ಪೂಜೆ ಮಾಡುವವರಿಗೆ ಸಾತ್ವಿಕ ಶಕ್ತಿಯನ್ನು ಕೊಡುತ್ತದೆ. ಅದಕ್ಕಾಗಿಯೇ ಮನೆಯಲ್ಲಿ , ದೇವಾಲಯಗಳಲ್ಲಿ ತೆಂಗಿನಕಾಯಿಯನ್ನು ಇಟ್ಟು ಪೂಜೆ ಮಾಡುತ್ತಾರೆ.
ತೆಂಗಿನಕಾಯಿಗೆ ಮಹತ್ವದ ಸ್ಥಾನ ಇದೆ. ದೇವರಿಗೆ ಅರ್ಪಿಸುವುದರಿಂದ ಅಥವಾ ಹೊಡೆಯುವುದರಿಂದ ನಮ್ಮ ಅಹಂಕಾರದ ಕಣ್ಣು ತೆರೆಯುತ್ತದೆಯಂತೆ. ಒಮ್ಮೆ ತೆಂಗಿನಕಾಯಿಯನ್ನು ಒಡೆದ್ರೆ ಅದನ್ನು ಅದರಿಂದ ಹೊರ ಬರುವ ಸಿಹಿನೀರು, ಮತ್ತು ಚೂರಾದ ಪದಾರ್ಥ ದೇವರಿಗೆ ನೈವೇದ್ಯ ಎಂಬ ನಂಬಿಕೆ ಇದೆ.ಇನ್ನು ತೆಂಗಿನಕಾಯಿಯನ್ನು ಹೊಡೆದಾಗ ಅದರಿಂದ ಹೊರ ಬರುವ ಸಿಹಿ ನೀರು ಮನುಷ್ಯನ ಸಾತ್ವಿಕ ಶಕ್ತಿಯನ್ನು ಪ್ರತಿನಿಧಿಸುತ್ತದೆ.ಶ್ರೀಫಲಗಳಲ್ಲಿ ಮೊದಲ ಸ್ಥಾನ ತೆಂಗಿನಕಾಯಿಗೆ. ತೆಂಗಿನಕಾಯಿಯ ಮೇಲ್ಬಾಗದಲ್ಲಿರುವುದು ಮನುಷ್ಯನ ಅಹಕಾಂರವನ್ನು ಪ್ರತಿನಿಧಿಸುತ್ತದೆ. ಮತ್ತು ಅದರಲ್ಲಿರುವ ಸಿಹಿ ನೀರು ಸಾತ್ವಿಕ ಶಕ್ತಿಯನ್ನು ಪ್ರತಿನಿಧಿಸುತ್ತದೆ. ಅಹಕಾರದಿಂದ ತಿರುಳನ್ನು ಹೊಡೆದು ಆ ಸಿಹಿನೀರು ಹೊರ ಬಂದಾಗ ಖಂಡಿತಾ ನಾವು ಆ ಅಹಂಕಾರದಿಂದ ಹೊರ ಬಂದಿದ್ದೇವೆ ಅಂತಾ. ಅಷ್ಟೇ ಅಲ್ಲಾ ನಾವು ಸಾತ್ವಿಕ ಶಕ್ತಿಯನ್ನು ದೇವರ ಮುಂದೆ ಚೆಲ್ಲಿ ನಮ್ಮಿಷ್ಟಾರ್ಥಗಳು ಫಲಿಸುತ್ತವೆ ಎಂಬ ನಂಬಿಕೆ ಇದೆ. ಇನ್ನು ಪೂಜೆಗಾಗಿ ತೆಂಗಿನಕಾಯಿಯ ಮಹತ್ವ ಹೇಗೆ ಅಂತಾ ಗೊತ್ತಾಯ್ತಾ..? ಈ ಶ್ರೀಫಲ ರಹಸ್ಯವನ್ನು ತಿಳಿದುಕೊಂಡು ಇತರರಿಗೂ ಶೇರ್ ಮಾಡಿ.
Comments