ಗಳಿಸಿದ ಹಣ ಕೈ ಸೇರುತ್ತಿಲ್ಲವೇ, ಹಾಗಾದ್ರೆ ಹೀಗೆ ಮಾಡಿ...
ಎಷ್ಟೋ ಜನ ಬೆರಳುಗಳಿಗೆ ಉಂಗುರ ತೊಡೋದು ಒಂಥರಾ ಫ್ಯಾಷನ್. ಮತ್ತೆ ಕೆಲವರಿಗೆ ಪ್ರತಿಷ್ಠೆ ಆದರೆ ಇತ್ತೀಚಿನವರಿಗೆ ಉಂಗುರ ತೊಡೋದು ಒಂಥರಾ ಸೆಕ್ಯುರಿಟಿಗೆ ಎಂದು ಹೇಳಬಹುದು, ರಾಶಿ, ಜೋತಿಷ್ಯಕ್ಕೆ ತಕ್ಕಂತೇ ಬೆರಳುಗಳಿಗೆ ಉಂಗುರ ತೊಡುತ್ತಾರೆ. ಸದ್ಯ ಟ್ರೆಂಡಿಂಗ್’ನಲ್ಲಿ ಆಮೆಯಾಕಾರದ ಉಂಗುರ ತೊಟ್ಟಿರುವುದನ್ನು ನೋಡಿರುತ್ತೇವೆ. ಬಹುತೇಕ ಜನರು ಆಮೆ ಆಕಾರದ ಉಂಗುರ ತೊಡುತ್ತಾರೆ.ಇವರನ್ನ ನೋಡಿದ್ರೆ ನಮಗೆ ಅನಿಸೋದು ಗ್ಯಾರಂಟಿ, ಇವರು ಯಾವುದೋ ಜೋತಿಷಿ ಶಾಸ್ತ್ರ ಕೇಳಿ ಧರಿಸಿರುತ್ತಾರಂತ. ಆದರೆ ಆಮೆ ಉಂಗುರ ತೊಟ್ಟರೆ ಲಾಭವೇನು ಗೊತ್ತಾ..? ಅದರ ವೈಷಿಷ್ಟ್ಯ ಕೇಳಿದ್ರೆ ದಂಗಾಗ್ತೀರಾ…
ಆಮೆಯಾಕಾರದ ಉಂಗುರ ಧರಿಸಿದ್ರೆ ವಾಸ್ತು ಶಾಸ್ತ್ರದಲ್ಲಿ ಶುಭವಾಗುತ್ತಂತೆ. ಹಲವಾರು ದೋಷಗಳನ್ನು ಹೋಗಲಾಡಿಸುತ್ತಂತೆ. ಅದಕ್ಕಿಂತಲೂ ಹೆಚ್ಚಾಗಿ ಆಮೆಯಾಕಾರದ ಉಂಗುರ ತೊಟ್ಟರೆ ಆತ್ಮವಿಶ್ವಾಸ ಹೆಚ್ಚಾಗುತ್ತದೆಯಂತೆ. ಸಾಮಾನ್ಯ ಆಮೆ ನೀರಿನಲ್ಲಿರುತ್ತದೆ. ನೀರಿನಲ್ಲಿರುವ ಆಮೆಗೆ ಸಕಾರಾತ್ಮಕ ಮತ್ತು ಪ್ರಗತಿಯ ಪ್ರತೀಕವೆಂದು ಕರೆಯಲಾಗುತ್ತದೆ. ಆಮೆ ಪರಮೇಶ್ವರನ ಮತ್ತು ವಿಷ್ಣುವಿನ ಅವತಾರವೆಂದು ಕರೆಯಲಾಗುತ್ತದೆ. ಸಮುದ್ರ ಮಂಥನದಿಂದ ಆಮೆ ಉದ್ಭವವಾಗುತ್ತದೆ ಎಂದು ಪುರಾಣದಲ್ಲಿ ಉಲ್ಲೇಖಿಸಲಾಗುತ್ತದೆ. ಆಮೆಗೆ ಮಹಾಲಕ್ಷ್ಮಿಯ ಕೃಪೆ ಇದೆ. ಲಕ್ಷ್ಮಿಯ ಕೃಪಾ ಕಟಾಕ್ಷದಿಂದ ಜೊತೆಗೆ ಧನ ಸಂಪತ್ತು ಕೂಡ ಪ್ರಾಪ್ತಿಯಾಗುತ್ತದ್ಯಂತೆ. ಧೈರ್ಯಕ್ಕೂ, ಸಮಾಧಾನಕ್ಕೂ,ಶಾಂತಿಗೂ, ಸಮೃದ್ಧಿಗೂ ಪ್ರತೀಕವಾಗುತ್ತಿದ್ಯಂತೆ ಆಮೆ. ಆಮೆಯಾಕಾರದ ಉಂಗುರವನ್ನು ತೊಡುವುದರಿಂದ ಆಮೆ ಮೇಲಿರುವ ದೈವ ಶಕ್ತಿ, ನಮ್ಮ ಮೇಲೆ ಬೀಳುತ್ತದೆ.
ಬೆಳ್ಳಿಯಲ್ಲಿಯೇ ಆಮೆಯಾಕಾರದ ಉಂಗುರವನ್ನು ತಯಾರಿಮಾಡಬೇಕು. ಅಷ್ಟೇ ಅಲ್ಲಾ ಧರಿಸುವಾಗ ಬಹಳ ಎಚ್ಚರಿಕೆ ವಹಿಸಬೇಕು. ಆಮೆಯ ತಲೆ ಉಂಗುರ ಧರಿಸುವಾಗ ವ್ಯಕ್ತಿಯ ಬಗಲಿಗೆ ಬರಬೇಕು. ಧರಿಸುವವರ ಮುಖಕ್ಕೆ ಆಮೆಯ ತಲೆ ಕಾಣಬೇಕು. ಒಂದು ವೇಳೆ ಉಂಗುರದ ತಲೆ ಏನಾದ್ರು ಬೆರಳಿನ ಮುಂದೆಗಡೆ ಮಾಡಿಕೊಂಡು ಧರಿಸಿದ್ರೆ, ಧನಲಕ್ಷ್ಮಿ ಬರುವುದಕ್ಕಿಂತ ನಿಮ್ಮ ಕೈಯಿಂದಲೇ ಹೋಗುತ್ತಾಳಂತೆ. ಮಧ್ಯದ ಬೆರಳಿನ ಅಥವಾ ಅದರ ಬದಲಿನ ಬೆರಳಿಗೆ ಧರಿಸಿದ್ರೆ ಒಳ್ಳೆದಾಗುತ್ತದೆ. ಮೊದ ಮೊದಲು ಶುಕ್ರವಾರದಂದೇ ಮಾತ್ರ ಧರಿಸಿ, ತದನಂತರ ಯಾವ ವಾರವಾದ್ರೂ ಧರಿಸಿಕೊಳ್ಳಬಹುದು. ಧರಿಸಿದ ನಂತರ ಆಮೆಯ ಉಂಗುರವನ್ನು ಗುಂಡಾಗಿ ತಿರುಗಿಸ ಬೇಕು. ಹೀಗೆ ತಿರುಗಿಸುವುದರಿಂದ ಆಮೆಯ ಮುಖದ ದೆಸೆ ಬದಲಾಗುತ್ತದೆ. ಇದರಿಂದ ಆಮೆಯ ಮೂಲಕ ನಮ್ಮ ಸಮಸ್ಯೆಗಳು ನಿವಾರಣೆಯಾಗುತ್ತವೆ.
Comments