ಪತ್ನಿಗೆ ವಿಚ್ಛೇದನ ಕೊಟ್ಟ ಜಗತ್ತಿನ ನಂ.1 ಶ್ರೀಮಂತ...!!!
ವಿಶ್ವದಲ್ಲಿಯೇ ಅತೀ ಶ್ರೀಮಂತ ವ್ಯಕ್ತಿ ಜೆಫ್ ಬೆಜೋಸ್ ಅವರು ತಮ್ಮ ಪತ್ನಿಗೆ ವಿಚ್ಛೇದನ ನೀಡುತ್ತಿರುವುದಾಗಿ ಘೋಷಿಸಿದ್ದಾರೆ. ಇವರು ಅಮೆಜಾನ್ ಸಂಸ್ಥಾಪಕರಾಗಿದ್ದು, ಜಗತ್ತಿನ ಅತೀದೊಡ್ಡ ಶ್ರೀಮಂತರಲ್ಲಿ ಒಬ್ಬರು. ಜೆಫ್, ಇಬ್ಬರು ಒಪ್ಪಿಗೆಯೇ ಮೇರೆಗೆ ಈ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ. ಅಂದಹಾಗೇ ಜೆಫ್ ಬೆಜೋಸ್ ಹೇಳುವ ಪ್ರಕಾರ ತುಂಬಾ ವರ್ಷಗಳಿಂದ ನಾವು ಬೇರೆ ಬೇರೆಯಾಗಿಯೇ ಜೀವಿಸಿ್ದೆವು.
ಸದ್ಯ ಇಬ್ಬರು ಕಾನೂನಿನ ಪ್ರಕಾರ ಬೇರೆ ಬೇರೆಯಾಗಿ ಇರಲು ವಿಚ್ಛೇದನ ಪಡೆಯಲು ಸಿದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ,.’ಧೀರ್ಘಕಾಲದಿಂದಲೂ ನಾವು ಪರಸ್ಪರ ಬೇರೆ ಬೇರೆಯಾಗಿಯೇ ಜೀವಿಸಿದ್ದೆವು. ನಮ್ಮ ಜೀವನದ ವಿಚಾರವೊಂದನ್ನು ಜನತೆಗೆ ತಿಳಿಸಲು ಇಚ್ಚಿಸುತ್ತಿದ್ದೇವೆ. ನಾನು(ಜೆಫ್ ಬಿಜೋಸ್) ಮತ್ತು ಮ್ಯಾಕ್‌ಕೆನ್ಝಿ ಬಿಜೋಸ್(48) ಪರಸ್ಪರ ವಿಚ್ಛೇದನಕ್ಕೆ ಮುಂದಾಗಿದ್ದೇವೆ,' ಎಂದು ಜಂಟಿ ಹೇಳಿಕೆಯನ್ನು ಟ್ವಿಟರ್ ಮೂಲಕ ಬಿಡುಗಡೆ ಮಾಡಿದ್ದಾರೆ.ಜೆಫ್ ಪ್ರಸ್ತುತ 10.50 ಲಕ್ಷ ಕೋಟಿ ರು. ಆಸ್ತಿ ಹೊಂದಿದ್ದು, ಅದರ ಅರ್ಧ ಪಾಲನ್ನು ಅಂದರೆ ಅಂದಾಜು 5 ಲಕ್ಷ ಕೋಟಿ ರು.ಗಳನ್ನು ಮ್ಯಾಕ್‌ಕೆನ್ಝಿ ಅವರಿಗೆ ನೀಡಬೇಕಾಗಿ ಬರಬಹುದು ಎನ್ನಲಾಗಿದೆ.
Comments