ಜನರ ಬಳಿಯೇ ಪೊಲೀಸ್ ಠಾಣೆ ಕೊಂಡೊಯ್ದ ಲೇಡಿ ಸಿಂಗಂ..!
ಪೊಲೀಸ್ ಸ್ಟೇಷನ್ ಎಂದರೆ ಸಾಕು ಜನ ಭಯ ಬೀಳ್ತಾರೆ..ಪೊ,ಲೀಸ್ ಮನೆ ಹತ್ರ ಬಂದರೆ ಏನೋ ಒಂಥರಾ ಭಯ ಇಂದಿಗೂ ಪೊಲೀಸ್ ಠಾಣೆ ಮೆಟ್ಟಿಲು ಹತ್ತುವುದೆಂದರೆ ಜನರಿಗೆ ಏನೋ ಒಂಥರಾ ಹೆದರಿಕೆ. ಕೆಲವರಿಗೆ ಪೊಲೀಸ್ ಠಾಣೆಗೆ ಹೋಗಲು ಪ್ರತಿಷ್ಟೆಯು ಕೂಡ ಅಡ್ಡ ಬರುತ್ತದೆ. ಇದರ ನಡುವೆ ಪೊಲೀಸ್ ಠಾಣೆಗಳು ಹಾಗೂ ಪೊಲೀಸರು ಇರುವುದು ಸಮಾಜದ ಶಿಸ್ತು ಕಾಪಾಡಲು ಇರುವ ಶಾಂತಿ, ಸುವ್ಯವಸ್ಥೆ ಮತ್ತು ಕಾನೂನಿನ ಪರಿಪಾಲನೆಗಾಗಿ ಪೊಲೀಸರು ಇರುವುದು ಎನ್ನುವುದು . ಸಾಮಾನ್ಯ ಜನರ ರಕ್ಷಣೆಗಾಗಿಯೇ ಪೊಲೀಸರು ಹಗಲಿರುಳು ಎನ್ನದೇ ದುಡಿಯುತ್ತಾರೆ. ಅದರಂತೆ ಮಹಾರಾಷ್ಟ್ರದ ಗ್ರಾಮವೊಂದರ ಜನರಿಗೂ ಪೊಲೀಸರೆಂದರೆ ಎಲ್ಲಿಲ್ಲದ ಭಯ. ಗ್ರಾಮಸ್ಥರ ಮನಗೆಲ್ಲಲು ಎಷ್ಟೇ ಪ್ರಯತ್ನ ಮಾಡಿದರೂ ಪೊಲೀಸರನ್ನು ಕಂಡೊಡನೆ ಇವರು ದೂರ ಸರಿಯುತ್ತಿದ್ದರು.
ಇದನ್ನರಿತ ಮಹಿಳಾ ಐಪಿಎಸ್ ಅಧಿಕಾರಿಯೋರ್ವರು ಜನರಲ್ಲಿರುವ ಪೊಲೀಸರ ಮೇಲಿರುವ ಭಯ ಹೋಗಲಾಡಿಸಲು ಕೈಗೊಂಡ ಕ್ರಮ ನಿಜಕ್ಕೂ ಶ್ಲಾಘನೀಯ. ಮಹಾರಾಷ್ಟ್ರದ ಭಂಡಾರಾ ಜಿಲ್ಲೆಯ ಐಪಿಎಸ್ ಅಧಿಕಾರಿ ವಿನೂತಾ ಸಾಹೂ, ಪೊಲೀಸ್ ಠಾಣೆಗೆ ಬರಲು ಹೆದರುತ್ತಿದ್ದ ಜನರಿಗಾಗಿ ಪೊಲೀಸ್ ಠಾಣೆಯನ್ನೇ ಜನರ ಬಳಿ ಕೊಂಡೊಯ್ಯುವ ವಿನೂತನ ಪ್ರಯತ್ನಕ್ಕೆ ಕೈ ಹಾಕಿ ಆ ಪ್ರಯತ್ನದಲ್ಲಿ ಸೈ ಎನಿಸಿಕೊಂಡಿದ್ದಾರೆ. 2017ರಿಂದ ಪ್ರತಿ ವರ್ಷ ಪ್ರತಿ ಗ್ರಾಮದಲ್ಲೂ ತಾತ್ಕಾಲಿಕವಾಗಿ ಮಾದರಿ ಪೊಲೀಸ್ ಠಾಣೆಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಗ್ರಾಮದ ಶಾಲೆ ಅಥವಾ ಪಂಚಾಯ್ತಿ ಕಟ್ಟಡಗಳಲ್ಲಿ ಕೆಲ ದಿನಗಳವರೆಗೆ ಮಾದರಿ ಪೊಲೀಸ್ ಠಾಣೆಯನ್ನು ನಿರ್ಮಿಸಿ, ಜನ ತಮ್ಮ ಕುಂದು ಕೊರತೆಗಳನ್ನು ಹೇಳಿಕೊಳ್ಳುವಂತೆ ವಿನೂತಾ ಸಾಹೂ.ಮನವಿ ಮಾಡುತ್ತಾರೆ.
Comments