ಹೃದಯ ಕಾಣೆಯಾಗಿದೆ.. ಪ್ಲೀಸ್ ಹುಡುಕಿಕೊಡಿ..!! ವಿಚಿತ್ರ ದೂರಿಗೆ ತಬ್ಬಿಬ್ಬಾದ ಪೊಲೀಸ್ .!!
ಸಾಮಾನ್ಯವಾಗಿ ಪೊಲೀಸ್ ಸ್ಟೇಷನ್ ಗೆ ಯಾವ ರೀತಿಯ ಕಂಪ್ಲೇಟ್’ಗಳು ಬರುತ್ತೆವೆ ಹೇಳಿ.. ಹಣ ಕಳುವಾಗಿದೆ, ವಾಹನ ಹಾಗೂ ಚಿನ್ನಾಭರಣ ಕದ್ದಿದ್ದಾರೆ ಅಂತ ಜನರು ಪೊಲೀಸ್ ಸ್ಟೇಷನ್ ಹೋಗ್ತಾರೆ. . ಆದರೆ ಮಹಾರಾಷ್ಟ್ರದಲ್ಲಿ ಯುವಕನೊಬ್ಬ ತನ್ನ ಹೃದಯವೆ ಕಳ್ಳತನವಾಗಿದೆ ಹುಡುಕಿಕೊಡಿ ಅಂತ ಪೊಲೀಸರಿಗೆ ದೂರು ನೀಡಿರುವ ವಿಚಿತ್ರ ಘಟನೆ ನಡೆದಿದೆಯಂತೆ. ಮಹಾರಾಷ್ಟ್ರದ ನಾಗಪುರ ಪೊಲೀಸ್ ಠಾಣೆಗೆ ಇತ್ತೀಚೆಗೆ ಯುವಕನೊಬ್ಬ ತನ್ನ ಹೃದಯವನ್ನು ಹುಡುಗಿಯೊಬ್ಬಳು ಕದ್ದಿದ್ದಾಳೆ. ಅದನ್ನ ಹುಡುಕಿಕೊಡಿ ಅಂತ ದೂರನ್ನು ನೀಡಿದ್ದಾನೆ.
ಪ್ರೇಮಿಗಳು ತಮ್ಮ ಹೃದಯವು ಪ್ರೀತಿಯ ಬಲೆಗೆ ಸಿಕ್ಕಿ ಕಳೆದುದೋಗಿದೆ ನನ್ನ ಹೃದಯವನ್ನು ಹುಡುಗಿಯೊಬ್ಬಳು ಕದ್ದಿದ್ದಾಳೆ. ಅವಳನ್ನು ಹುಡುಕಿ ಕೊಡುವ ಮೂಲಕ ತನ್ನ ಹೃದಯ ವಾಪಸ್ ತನಗೆ ಕೊಡಿಸಿ ಅಂತ ಪೊಲೀಸರಿಗೆ ದೂರನ್ನು ನೀಡಿದ್ದಾನೆ.ನಂತರ ಉನ್ನತ ಅಧಿಕಾರಿ ಹತ್ತಿರ ಯುವಕನನ್ನು ಕಳುಹಿಸಿ ಮಾತನಾಡಿಸಿದ್ದೆವು. ಆಗ ಅಧಿಕಾರಿ ಭಾರತದ ಕಾನೂನಿನಲ್ಲಿ ಈ ರೀತಿಯ ದೂರುಗಳಿಗೆ ಯಾವುದೇ ಸೆಕ್ಷನ್ ಇಲ್ಲ. ಆದ್ದರಿಂದ ನಿಮ್ಮ ದೂರನ್ನು ದಾಖಲಿಸಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿ ಹೇಳಿದ್ದಾರೆ. ಕೊನೆಗೆ ಈ ದೂರಿಗೆ ಯಾವುದೇ ಪರಿಹಾರವಿಲ್ಲ ಎಂದು ತಿಳಿದ ನಂತರ ಆತ ವಾಪಸ್ ಹೋದನು ಎಂದು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡುವ ಸಂದರ್ಭದಲ್ಲಿ ನಾಗಪುರ ಪೊಲೀಸ್ ಕಮಿಷನರ್ ಭೂಷಣ್ ಕುಮಾರ್ ಉಪಾಧ್ಯಾಯ ಈ ವಿಚಿತ್ರ ಘಟನೆಯನ್ನು ಹಂಚಿಕೊಂಡರು.
Comments