ನಿಮ್ಮ ಬಳಿ 500 ರೂ. ನೋಟಿದ್ಯಾ ಹಾಗಾದ್ರೆ ಈ ಸ್ಟೋರಿನಾ ಮಿಸ್ ಮಾಡ್ದೇ ನೋಡಿ...!!!
ಮೋದಿ ಪ್ರಧಾನಿ ಆದ ಬಳಿಕ ನೋಟು ಅಮಾನೀಕರಣ ಮಾಡಿದ್ದರು. ಇದರಿಂದ ಹಳೇ ನೋಟುಗಳನ್ನು ಬ್ಯಾನ್ ಮಾಡಿ ಹೊಸ ನೋಟುಗಳನ್ನು ಜಾರಿಗೆ ತಂದ ಮೋದಿ ವಿರುದ್ಧ ಹೇಳಿಕೆಗಳು ಬರತೊಡಗಿದವು. ಆದರೆ 2 ವರ್ಷಗಳ ಹಿಂದೆ ನೋಟು ಬದಲಾವಣೆ ಮಾಡಿದ ನಂತರ ಬೇರೆಯದ್ದೇ ರೀತಿಯಲ್ಲಿ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಪ್ಪುಹಣ ತಡೆಯುವ ಉದ್ದೇಶದಿಂದ 500 ರೂ.ಗಳ ದೊಡ್ಡ ಮೊತ್ತದ ಹಣವನ್ನು ರದ್ದುಪಡಿಸಲಾಗಿತ್ತು. ಇದಾದ ನಂತರದಲ್ಲಿ ನಕಲು ಮಾಡಲು ಸಾಧ್ಯವಾಗದ ಹೆಚ್ಚಿನ ಭದ್ರತಾ ಅಂಶಗಳಿರುವ ಹೊಸ ನೋಟುಗಳನ್ನು ಚಲಾವಣೆಗೆ ತರಲಾಗಿದೆ.
ಆದರೆ, ಹೊಸ ನೋಟುಗಳನ್ನು ಕೂಡ ನಕಲು ಮಾಡಲಾಗ್ತಿದೆ. ಅಸಲಿ ನೋಟುಗಳನ್ನೂ ನಾಚಿಸುವಂತಹ ನಕಲಿ ನೋಟುಗಳು ಚಲಾವಣೆಯಲ್ಲಿವೆ ಎನ್ನಲಾಗಿದೆ. ಆದರೆ ಇದೀಗ ಹಣದ ಮಾರುಕಟ್ಟೆಯಲ್ಲಿ 500 ರೂ. ಹೊಸ ನೋಟುಗಳಂತೇ ನಕಲಿ ನೋಟುಗಳ ಹಾವಳಿ ಹೆಚ್ಚಾ‘ಗುತ್ತಿದೆ. 500 ರೂ. ನಕಲಿ ನೋಟಿನ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈಗಾಗಲೇ ಚಲಾವಣೆಯಲ್ಲಿರುವ ನಕಲಿ ನೋಟಿನಲ್ಲಿ Reserve ಬ್ಯಾಂಕ್ ಎಂದು ಮುದ್ರಿಸುವ ಬದಲು Resurve ಎಂದು ಮುದ್ರಿಸಲಾಗಿದೆ. ಇಂತಹ ನೋಟುಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಲಾಗಿದೆ. ಅಂದಹಾಗೇ ನೋಟುಗಳು ವರ್ಜಿನಲ್ ಅಥವಾ ಡ್ಯೂಪ್ಲೀಕೇಟ್ ಅಂತಾ ಗುರುತುಹಿಡಿಯುವುದು ಕಷ್ಟವಾಗಬಹುದು. ಆದರೆ. ನಕಲಿ ನೋಟುಗಳು ಚಲಾವಣೆಗೆ ಬರುತ್ತಿದ್ದಂತೇ ಮತ್ತಷ್ಟು ಕ್ರೈಂಗಳು ಆಗುವ ಸಾಧ್ಯತೆ ಇರುತ್ತವೆ.
Comments