ಶಬರಿಮಲೆಗೆ ಹೋಗುವುದಾದರೆ ನಾವು ಮಸೀದಿಯೊಳಗೆ ನುಗ್ಗುತ್ತೇವೆಂದ ಮಹಿಳೆಯರು ಅರೆಸ್ಟ್...!!!

ಶಬರಿಮಲೆಗೆ ಮಹಿಳೆಯರು ಪ್ರವೇಶಿಸುವುದಾದರೆ ಶಬರಿಮಲೆ ಸಮೀಪವಿರುವ ವಾವರ್ ಮಸೀದಿಗೆ ಕೂಡ ನಾವು ಪ್ರವೇಶ ಮಾಡುತ್ತೇವೆಂದು ಬಂದಿದ್ದ ತಮಿಳು ನಾಡಿನ ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ. ತಿರುಪ್ಪುರ್ ರೇವತಿ, ಸುಶೀಲಾ ದೇವಿ ಹಾಗೂ ತಿರುನಲ್ವೇಲಿಯ ಗಾಂಧಿಮತಿ ಬಂಧಿತ ಮಹಿಳೆಯರು. ಈ ಮೂವರು 'ಹಿಂದು ಮಕ್ಕಳ್ ಕಚ್ಚಿ'ಗೆ ಸೇರಿದವರೆಂದು ಹೇಳಲಾಗಿದೆ. ಮಹಿಳೆಯರು ಶಬರಿಮಲೆ ಪ್ರವೇಶಿಸಬಹುದಾದರೆ ತಾವು ವಾವರ್ ಮಸೀದಿಯನ್ನು ಪ್ರವೇಶಿಸುತ್ತೇವೆ, ತಮಗೆ ಅನುಮತಿ ನೀಡಬೇಕು ಎಂದು ಈ ಮೂವರು ಮಹಿಳೆಯರು ಕೆಲ ದಿನಗಳ ಹಿಂದೆ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೊಂಡಿದ್ದರು.
ಅಲ್ಲದೇ ಆ ಮಹಿಳೆಯರ ಜೊತೆ ಬಂದಿದ್ದ ಅವರದ್ದೇ ಸಂಘದ ಮೂವರು ಪುರುಷರನ್ನು ಕೂಡ ಪೊಲೀಸರು ಬಂಧಿಸಿದ್ದಾರೆ.ಅವರು ಮತೀಯ ಉದ್ವಿಗ್ನತೆ ಸೃಷ್ಟಿಸುವ ಉದ್ದೇಶ ಹೊಂದಿದ್ದರು ಎಂದು ಪೊಲೀಸರು ಆರೋಪಿಸಿದ್ದು, ಅವರ ವಿರುದ್ಧ ಐಪಿಸಿ ಸೆಕ್ಷನ್ 153 ಎ ಅನ್ವಯ ಪ್ರಕರಣ ದಾಖಲಿಸಲಾಗಿದೆ. ಅವರ ಆಗಮನದ ಸುಳಿವು ಪಡೆದ ಪೊಲೀಸರು ಪಾಲಕ್ಕಾಡಿನ ವೇಲಾ ಥವಳಂ ಚೆಕ್ ಪೋಸ್ಟಿನಲ್ಲಿ ಬಂಧಿಸಿದ್ದರು.ಶಬರಿಮಲೆ ಸಮೀಪವೇ ವಾವರ್ ಮಸೀದಿಯೂ ಇದೆ. ಇಲ್ಲಿಗೆ ಬರುವವರು ಮಸೀದಿ ಕಟ್ಟಡ ಸುತ್ತಾ ಪ್ರದಕ್ಷಿಣೆ ಹಾಕಿ ನಮಸ್ಕರಿಸುತ್ತಾ ಹೋಗುತ್ತಾರೆ. ಆದರೆ ಮಸೀದಿಯ ಪ್ರಾರ್ಥನ ಸ್ಥಳಕ್ಕೆ ಯಾವ ಪುರುಷ ಮತ್ತು ಮಹಿಳಾ ಭಕ್ತಾದಿಗಳಿಗೆ ಪ್ರವೇಶವಿರುವುದಿಲ್ಲ. ಆದರೆ ಈ ಮಹಿಳೆಯರು ಮಸೀದಿಯ ಪ್ರಾರ್ಥನ ಕೇಂದ್ರಕ್ಕೆ ಪ್ರವೇಶಿಸಿಲು ಮುಂದಾಗಿದ್ದಾರೆ. ಇದರಿಂದ ಕೇರಳದ ಪೊಲೀಸರು ಇವರನ್ನು ಬಂಧಿಸಿದ್ದಾರೆ ಎನ್ನಲಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಈ ಮಹಿಳೆಯರು ನಾವು ವಾವರ್ ಮಸೀದಿಯೊಳಗೆ ಪ್ರವೇಶಿಸುತ್ತೇವೆಂದು ಹೇಳಿಕೆ ನೀಡಿದ್ದರೆನ್ನಲಾಗಿದೆ.
Comments