ರೋಗಿಗಳಿಗೂ ತಟ್ಟಿದ ಬಂದ್ ಎಫೆಕ್ಟ್..!! ಪರದಾಡುತ್ತಿರುವ ಬಾಣಂತಿಯರು..!!!

ಎಐಟಿಯುಸಿ, ಸಿಐಟಿಯು, ಎನ್ ಟಿಯುಸಿ, ಎಚ್‌ಎಂಎಸ್ ಸೇರಿದಂತೆ ರಾಷ್ಟ್ರಮಟ್ಟದ ಹನ್ನೊಂದು ಸಂಘಟನೆಗಳು ಈ ಎರಡು ದಿನಗಳ ಕಾಲ ದೇಶವ್ಯಾಪ್ತಿ ಬಂದ್‌ಗೆ ಕರೆ ನೀಡಿದ್ದು, ರಾಜ್ಯದಲ್ಲಿ ಕೆಲ ಸಂಘಟನೆಗಳು ನೇರವಾಗಿ ಬಂದ್‌ನಲ್ಲಿ ಭಾಗವಹಿಸುತ್ತಿವೆ ಎನ್ನಲಾಗಿದೆ. ಇನ್ನೂ ಮೋಟಾರ್ ವಾಹನ ಮಸೂದೆ ತಿದ್ದುಪಡಿ ವಿರೋಧಿಸಿ ಹಾಗೂ ವಿವಿಧ ಬೇಡಿಕೆ ಆಗ್ರಹಿಸಿ ಹಲವು ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ ಗೆ ಬಿಎಂಟಿಸಿ ಬೆಂಬಲವನ್ನು ನೀಡಿಲ್ಲ.ಬೆಂಗಳೂರಿನ ಮೆಜಿಸ್ಟಿಕ್, ಇಂದಿರಾನಗರಗಳಲ್ಲಿ ಎಂದಿನಂತೆ ಬಸ್ ಸಂಚಾರ ಪ್ರಾರಂಭವಾಗಿದ್ದು, ಒಟ್ಟು144 ಬಸ್ ಗಳು ಸಂಚರಿಸಲಿವೆ .
ಭಾರತ್ ಬಂದ್ ಬಿಸಿ ಆಸ್ಪತ್ರೆಯ ಬಾಣಂತಿಯರಿಗೂ ಕೂಡ ತಟ್ಟಿದೆ.. ಅಲ್ಲದೇ ಅದೆಷ್ಟೋ ವೃದ್ಧರು, ರೋಗಿಗಳು, ಮಹಿಳೆಯರು ಬಸ್ ಇಲ್ಲದೇ ಆಸ್ಪತ್ರೆಯ ಆವರಣದಲ್ಲಿ ಪರದಾಡುತ್ತಿದ್ದಾರೆ. ಹಾಗಾಗಿ ಬಂದ್’ನಿಂದಾಗಿ ರೋಗಿಗಳು ಪರದಾಡುವಂತೆ ಆಗಿದೆ..ಅಂಗಡಿ ಮುಂಗಟ್ಟುಗಳು ಮುಚ್ಚಿವೆ.. ಇದರಿಂದ ಸಾಕಷ್ಟು ತೊಂದರೆಗಳು ಆಗುತ್ತಿವೆ.. ಬಸ್ ಇಲ್ಲದೆ ಪರದಾಡುವಂತೆ ಆಗಿದೆ. ಈ ಹಿನ್ನಲೆಯಲ್ಲಿ ನಾಳೆಯು ಕೂಡ ಬಂದ್ ನ ಎಫೆಕ್ಟ್ ಎಲ್ಲಡೆಯೂ ಕೂಡ ಕಮಡು ಬರುತ್ತಿದೆ..
Comments