ಭಾರತ್ ಬಂದ್ ಗೆ ಬಿಎಂಟಿಸಿ ಬೆಂಬಲ ಇಲ್ಲ : ಎಂದಿನಂತೆ ಬಸ್ ಸಂಚಾರ ಪ್ರಾರಂಭ..!!
ಕಾರ್ಮಿಕರ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಕೂಡ ಪ್ರಯೋಜನವಾಗಿಲ್ಲವೆಂದು ಈ ಬಾರಿ ಭಾರತ್ ಬಂದ್ ಗೆ ಕರೆ ನೀಡಿದ್ದಾರೆ. ಕೇಂದ್ರ ಸರ್ಕಾರದ ನೀತಿಗಳನ್ನು ವಿರೋಧ ಮಾಡಿ, ಕಾರ್ಮಿಕರ ಹಲವು ರೀತಿಯ ಬೇಡಿಕೆಗಳನ್ನು ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿ ಯು) ಜ.8 ಮತ್ತು 9 ರಂದು ಕರೆ ನೀಡಿರುವ 'ಭಾರತ್ ಬಂದ್'ನಿಂದಾಗಿ ರಾಜ್ಯದಲ್ಲೂ ಕೆಲ ಸೇವೆಗಳಲ್ಲಿ ಏರು ಪೇರಾಗಿದೆ..
ಎಐಟಿಯುಸಿ, ಸಿಐಟಿಯು, ಎನ್ ಟಿಯುಸಿ, ಎಚ್‌ಎಂಎಸ್ ಸೇರಿದಂತೆ ರಾಷ್ಟ್ರಮಟ್ಟದ ಹನ್ನೊಂದು ಸಂಘಟನೆಗಳು ಈ ಎರಡು ದಿನಗಳ ಕಾಲ ದೇಶವ್ಯಾಪ್ತಿ ಬಂದ್‌ಗೆ ಕರೆ ನೀಡಿದ್ದು, ರಾಜ್ಯದಲ್ಲಿ ಕೆಲ ಸಂಘಟನೆಗಳು ನೇರವಾಗಿ ಬಂದ್‌ನಲ್ಲಿ ಭಾಗವಹಿಸುತ್ತಿವೆ ಎನ್ನಲಾಗಿದೆ. ಇನ್ನೂ ಮೋಟಾರ್ ವಾಹನ ಮಸೂದೆ ತಿದ್ದುಪಡಿ ವಿರೋಧಿಸಿ ಹಾಗೂ ವಿವಿಧ ಬೇಡಿಕೆ ಆಗ್ರಹಿಸಿ ಹಲವು ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ ಗೆ ಬಿಎಂಟಿಸಿ ಬೆಂಬಲವನ್ನು ನೀಡಿಲ್ಲ.ಬೆಂಗಳೂರಿನ ಮೆಜಿಸ್ಟಿಕ್, ಇಂದಿರಾನಗರಗಳಲ್ಲಿ ಎಂದಿನಂತೆ ಬಸ್ ಸಂಚಾರ ಪ್ರಾರಂಭವಾಗಿದ್ದು, ಒಟ್ಟು144 ಬಸ್ ಗಳು ಸಂಚರಿಸಲಿವೆ. ಸದ್ಯ 44 ಬಸ್ ಗಳ ಸಂಚಾರ ಪ್ರಾರಂಭವಾಗಿದೆ. ಇಂದಿರಾನಗರ, ಕಾಡುಗೋಡಿ, ಓಫಾರಂ, ಸಿಲ್ಕ್ ಬೋರ್ಡ್,ಸಿ.ವಿ. ರಾಮನ್, ಹೊಸಕೋಟೆ, ಮಡಿವಾಳ, ಚಿಲಕೋಡ, ಬನಶಂಕರಿ, ಕಾಡುಗೋಡಿ ಸೇರಿದಂತೆ ಹಲವು ಕಡೆ ಬಸ್ ಸಂಚಾರ ಆರಂಭವಾಗಿದ್ದು,ನಮ್ಮ ಕಡೆಯಿಂದ ಬಂದ್ ಗೆ ಯಾವುದೇ ರೀತಿಯ ಬೆಂಬಲವಿಲ್ಲ ಎಂದು ಬಿಎಂಟಿಸಿ ಸಿಬ್ಬಂದಿ ತಿಳಿಸಿದ್ದಾರೆ. ಬೆಂಗಳೂರಿನ ಹಲವೆಡೆ ಬಸ್ ಸಂಚಾರ ಪ್ರಾರಂಭವಾಗಿದೆ.
Comments