ಮಾತೃದೇವೋಭವ ಎನ್ನುತ್ತೇವೆ, ಶಬರಿಮಲೆಗೆ ಅವರು ಬರಬಾರದು ಅಂತೀವಿ, ಇದೆಲ್ಲಾ ಯಾವ ನ್ಯಾಯ : ಜನಾರ್ಧನ ಪೂಜಾರಿ
ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೇ ಮತ್ತಷ್ಟು ಪರ-ವಿರೋಧ ಹೇಳಿಕೆಗಳು ತಾರಕಕ್ಕೇರುತ್ತಿವೆ. ಈಗಾಗಲೇ ಬಿಂದು ಮತ್ತು ಕನಕದುರ್ಗ ಎಂಬ 40ವರ್ಷದ ಒಳಗಿನ ಇಬ್ಬರು ಮಹಿಳೆಯರು ಶಬರಿಮಲೆ ಪ್ರವೇಶಿಸಿ ಅಯ್ಯಪ್ಪ ದರ್ಶನ ಪಡೆದಿರುವುದಕ್ಕೆ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ಕಾಂಗ್ರೆಸ್’ನ ಹಿರಿಯ ಮುಖಂಡ ಜನಾರ್ಧನ ಪೂಜಾರಿ ಪ್ರತಿಕ್ರಿಯೆ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಮೂವರು ಮಹಿಳೆಯರು ಪ್ರವೇಶ ಮಾಡಿದ್ದಾರೆ.
ಮಹಿಳೆಯರು ದೇವರ ಮಕ್ಕಳು, ಮಹಿಳೆಯರನ್ನು ಶಬರಿಮಲೆಗೆ ಪ್ರವೇಶ ಮಾಡಿಸಿ ಸಿಎಂ ಆಗಿ ಕರ್ತವ್ಯ ಪಾಲಿಸಿ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಅವರಿಗೆ ಸಲಹೆ ನೀಡಿದ್ದಾರೆ. ಇಷ್ಟು ಮಟ್ಟಕ್ಕೆ ಮಹಿಳೆಯರ ಪ್ರವೇಶ ವಿಚಾರವನ್ನು ತಾರಕಕ್ಕೇರಿಸುವುದು ಎಷ್ಟು ಸರಿ. ದೇಗುಲಕ್ಕೆ ಎಲ್ಲರಿಗೂ ಅವಕಾಶವಿದೆ. ಅವರು ಪ್ರವೇಶ ಮಾಡಿದ್ರೆ ಏನು ತಪ್ಪು…? ಯಾವ ಮೈಲಿಗೆ ಉಂಟಾಗುತ್ತದೆ. ಇದರಲ್ಲಿ ರಾಜಕಿಯ ಬೆರೆಸುವುದು ತಪ್ಪು. ಸುಪ್ರೀಂ ಆಜ್ಞೆ ಯನ್ನು ಪಾಲೀಸೋಣ ಎಂದರು. ದೇಗುಲಕ್ಕೆ ಮಹಿಳೆಯರು ಹೋಗುವುದನ್ನು ಕಾಂಗ್ರೆಸ್ ಮತ್ತು ಬಿಜೆಪಿ ವಿರೋಧ ಮಾಡುವುದು ತಪ್ಪು, ಅದು ಮಹಿಳೆಯರಿಗೆ ಮಾಡಿದ ದ್ರೋಹ, ನಾವು ಮಾತೃದೇವೋಭವ ಎನ್ನುತ್ತೇವೆ. ಅಯ್ಯಪ್ಪ ಮಹಿಳೆಯರ ಪ್ರವೇಶಕ್ಕೆ ಬೇಡ ಎಂದು ಎಲ್ಲಿಯೂ ಹೇಳಿಲ್ಲ ಎಂದರು ಅವರಿಗೂ ಅವಕಾಶ ಮಾಡಿಕೊಡೋಣ. ಇದೆಲ್ಲಾ ನಾವೇ ಹಾಕಿಕೊಂಡಿರುವ ನಂಬಿಕೆಯ ಬೇಲಿ ಅಷ್ಟೆ. ಅದನ್ನು ಮುರಿದು ಮುಂದೆ ನಡೆಯೋಣ. ದೇವರ ಭಕ್ತಿಯಲ್ಲೂ ಎಲ್ಲರಿಗೂ ಅವಕಾಶ ಕೊಡೋಣ. ಮಹಿಳೆಯರು ಶಬರಿ ಮಲೆಗೆ ಹೋಗಲೀ.
Comments