ನನಗೆ ಕಲ್ಲು ಹೊಡೆದರೆ ಅದರಲ್ಲೇ ಫೌಂಡೇಶನ್ ಕಟ್ಟೋನು ನಾನು : ಪ್ರತಾಪ ಸಿಂಹ

ಮೈಸೂರು : ಸಂಸದ ಪ್ರತಾಪ ಸಿಂಹ ಅವರು ಮುಂದಿನ ಬಾರಿಯೂ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ತಾವೇ ಸಂಸದ ಆಗೋದು ಎಂದು ಭವಿಷ್ಯ ನುಡಿದಿದ್ದಾರೆ. ಪ್ರತಾಪ ಸಿಂಹ ಅವರು ಈ ರೀತಿ ಮಾತನಾಡಲು ಕಾರಣವಿತ್ತು. ಅಷ್ಟೇ ಅಲ್ಲ, ಈ ಹಿಂದೆ ಅನೇಕ ಬಾರಿ ತಾವು ಮತ್ತೆ ಗೆದ್ದು ಸಂಸದರಾಗೇ ಆಗುತ್ತೇವೆ ಎಂಬ ಭರವಸೆ ಮಾತುಗಳನ್ನಾಡುತ್ತಿದ್ದರು. ಆದರೆ ಈ ಬಾರಿ ಖಾರವಾಗಿಯೇ ಈ ಹೇಳಿಕೆ ನೀಡಿ ದ್ದಾರೆ. 2019ರಲ್ಲಿ ಮುಂದಿನ ಬಾರಿ ಬಿಜೆಪಿ ಪ್ರಮೋದಾದೇವಿ ಒಡೆಯರ್ ಅವರಿಗೆ ಟಿಕೆಟ್ ನೀಡಲಿದೆ ಎಂಬ ಮಾಧ್ಯಮಗಳ ವರದಿಗೆ ಖಾರವಾಗಿ ಪ್ರತಿಕ್ರಿಯಿಸಿದ ಸಿಂಹ, ಮುಂದಿನ ಮೈಸೂರು-ಕೊಡಗು ಸಂಸದ ನಾನೇ ಎಂದು ಗುಡುಗಿದರು. ಕೆಲವು ಮಾಧ್ಯಮಗಳ ತಲೆಯಲ್ಲಿ ಕಸ ತುಂಬಿದೆ.
ಅದನ್ನೇ ತಮ್ಮ ಪತ್ರಿಕೆಗಳಲ್ಲಿ ಬರೆಯುತ್ತಾರೆ ಮತ್ತು ದೃಶ್ಯ ಮಾಧ್ಯಮಗಳು ಸ್ಪೆಶಲ್ ಸ್ಟೋರಿ ಹೆಸರಲ್ಲಿ ಬಿತ್ತರಿಸುತ್ತವೆ ಎಂದು ಸಿಂಹ ಈ ವೇಳೆ ಹರಿಹಾಯ್ದರು. ನನಗೆ ಕಲ್ಲು ಹೊಡೆದರೆ ಅದರಲ್ಲೇ ನಾನು ಫೌಂಡೇಶನ್ ಕಟ್ತಿನಿ ಎಂದು ಮಾರ್ಮಿಕವಾಗಿ ನುಡಿದ ಸಿಂಹ, ಮುಂಧಿನ ಲೋಕಸಭಾ ಚುನಾವಣೆಯಲ್ಲೂ ಮತ್ತೆ ನಾನೇ ಗೆಲ್ಲುತ್ತೇನೆಂದು ವಿಶ್ವಾಸ ವ್ಯಕ್ತಪಡಿಸಿದರು. ಅಷ್ಟೇ ಅಲ್ಲಾ, ಸಂಸದ ಪ್ರತಾಪ ಸಿಂಹ ಅವರು, ನಾವು ಹಾಲಿ 15 ಜನ ಬಿಜೆಪಿ ಸಂಸದರಿದ್ದು, ಈ 15 ಕ್ಷೇತ್ರದ ಜೊತೆಗೆ ಮತ್ತಷ್ಟು ಸ್ಥಾನ ಗೆಲ್ಲುತ್ತೇವೆ ಎಂದು ಸಿಂಹ ಭರವಸೆ ನೀಡಿದರು. ಈಗಾಗಲೇ ಎಲ್ಲಾ ಹಾಲಿ ಎಂಪಿಗಳಿಗೆ ಟಿಕೆಟ್ ಎಂದು ಯಡಿಯೂರಪ್ಪ ಹೇಳಿದ್ದಾರೆ ಎಂದು ಸಿಂಹ ಸ್ಪಷ್ಟಪಡಿಸಿದರು. ಮಾಧ್ಯಮದವರಿಗೆ ಏನು ತಿಳಿಯದು, ಏನು ಬೇಕಾದವರು ಬರೆಯುತ್ತಾರೆ.
Comments