ಇಂತಹ ಹಲವು ಐಟಿ ದಾಳಿಗಳು ನನ್ನ ನೇತೃತ್ವದಲ್ಲಿ ನಡೆದಿವೆ : ಎಸ್.ಎಂ ಕೃಷ್ಣ

ಕನ್ನಡ ಚಿತ್ರರಂಗದ ಕೆಲ ಸ್ಟಾರ್ ಗಳ ಮೇಲೆ ಐಟಿ ರೈಡ್ ಆಗಿದ್ದೇ ತಡ ಹಲವು ರಾಜಕೀಯ ನಾಯಕರು, ಸಿನಿಮಾ ನಟರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಐಟಿ ರೈಡ್ ಆಗಿದ್ದೇ ತಡ, ಮೋದಿ ಕಡೆಯಿಂದಲೇ ನಡೆದಿದೆ ಎನ್ನುವಂತೆ ಸೋಶಿಲ್ ಮಿಡಿಯಾದಲ್ಲಿ ಹೇಳಿಕೆಗಳು ಹರಿದಾಡಿದವು. ಒಂದಷ್ಟು ಮಂದಿ ಕನ್ನಡ ಚಿತ್ರಗಳು ಇತ್ತೀಚಿಗೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿವೆ. ಬಹುಕೋಟಿ ಬಂಡವಾಳದ ಸಿನಿಮಾಗಳು ಸ್ಯಾಂಡಲ್’ವುಡ್ ನೆಲದಲ್ಲಿ ನಿರ್ಮಾಣವಾಗುತ್ತಿವೆ. ಕನ್ನಡದ ಟಾಪ್ ಸ್ಟಾರ್’ಗಳು ಕೋಟಿಗಟ್ಟಲೇ ಸಂಭಾವನೆ ಪಡೆದದುಕಲೊಳ್ಳುತ್ತಿದ್ದು, ಸರ್ಕಾರಕ್ಕೆ ಟ್ಯಾಕ್ಸ್ ಕಟ್ಟದೇ ಇರುವುದರಿಂದ ಐಟಿ ರೈಡ್ ಆಗಿದೆ ಎಂದವರು ಇದ್ದಾರೆ
ಇದರ ನಡುವೆ ಡಿಕೆಶಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಸಿಎಂ ಕುಮಾರಸ್ವಾಮಿ ಅವರು ನ್ಯಾಯಾಲಯ, ಸರ್ಕಾರದಲ್ಲಿ ನಾವೆಲ್ಲರು ಒಂದೇ. ಎಲ್ಲರು ಒಂದೇ ಕಾನೂನಿನಡಿಯಲ್ಲಿ ಜೀವಿಸಬೇಕಾದ್ದರಿಂದ ಇದೆಲ್ಲವನ್ನು ಎದುರಿಸಬೇಕು ಎಂದು ಐಟಿ ರೈಡ್ ವಿಚಾರವಾಗಿ ಮಾತನಾಡಿದ್ದರು. ರೈಡ್ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಎಸ್.ಎಂ.ಕೃಷ್ಣ, ಹಲವು ವರ್ಷಗಳ ಹಿಂದೆ ನಾನು ಆರ್ಥಿಕ ಇಲಾಖೆಯ ಸಹಾಯಕ ಸಚಿವನಾಗಿದ್ದೆ. ಆ ಸಂದರ್ಭದಲ್ಲಿ ಇಂತಹ ದಾಳಿಗಳ ನೇತೃತ್ವ ವಹಿಸಿದ್ದೆ ಎಂದರು. ಇನ್ನು ಈಗಲಾದರೂ ಮಾಜಿ ಮುಖ್ಯಮಂತ್ರಿಗಳಿಗೆ ರೈತರ ನೆನಪಾಯಿತಲ್ಲಾ ಎಂಬ ಸಿಎಂ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಮಾತನಾಡಿ, ಕುಮಾರಸ್ವಾಮಿ ಟೀಕೆಗೆ ಏನು ಹೇಳಬೇಕೋ ಅದನ್ನ ಹೇಳಿದ್ದೇನೆ. ಈಗ ಆ ಬಗ್ಗೆ ಈಗ ಮಾತನಾಡಲಾರೆ ಎಂದರು.
Comments