ಕಿಚ್ಚ,ಪುನೀತ್ ಶಿವಣ್ಣರ ಟ್ಯಾಕ್ಸ್ ವಿಚಾರವಾಗಿ ಜಯಮಾಲಾ ಹೇಳಿದ್ದೇನು...?

ಸ್ಯಾಂಡಲ್’ವುಡ್ ನಲ್ಲಿ ಐಟಿ ದಾಳಿ ವಿಚಾರವಾಗಿ ಸಚಿವೆ, ನಟಿ ಜಯಮಾಲಾ ಪ್ರತಿಕ್ರಿಯಿಸುತ್ತಾ ಐಟಿಯವರು ಅವರ ಕೆಲಸವನ್ನು ನಿರ್ವಹಿಸಿದ್ದಾರೆ. ಯಾರಿಗೂ ತೊಂದರೆಯಾಗುವುದಿಲ್ಲ. ಆತಂಕ ಪಡುವ ಮಾತೇ ಇಲ್ಲ. ಇಂದು ಕನ್ನಡ ಚಿತ್ರರಂಗ ಬಹಳ ಎತ್ತರಕ್ಕೆ ಬೆಳೆದಿರೋದು ರಾಷ್ಟ್ರದ್ಯಂತ ದೊಡ್ಡಮಟ್ಟದಲ್ಲಿ ಸುದ್ದಿಯಾಗಿದೆ .ನಮ್ಮೆಲ್ಲರಿಗೂ ಇದರ ಬಗ್ಗೆ ಹೆಮ್ಮೆ ಇದೆ. ಐಟಿಯವರು ಅವರ ಕೆಲಸ ಮಾಡುತ್ತಿದ್ದಾರಷ್ಟೆ, ನಾವು ಅದಕ್ಕೆ ಸಹಕರಿಸಬೇಕು. ಯಾರಿಗೂ ಇದರಿಂದ ತೊಂದರೆ ಆಗುವುದಿಲ್ಲ. ಕಲಾವಿದರುಗಳಿಗೆ ಈ ದಾಳಿಯಿಂದ ಏನೂ ಹಿನ್ನಡೆ ಆಗುವುದಿಲ್ಲ ಎಂದು ಹೇಳಿದ್ದಾರೆ. ರಾಜ್ ಕುಮಾರ್ ಮಕ್ಕಳು, ಯಶ್, ಸುದೀಪ್ ಬಹಳ ಕಲಾವಿದರ ಬಳಿ ಎರಡು ಒಡವೆ, ಬೆಳ್ಳಿತಟ್ಟೆ ಚೊಂಬು ಇರಬಹುದು. ಎಲ್ಲರೂ ಪ್ರಾಮಾಣಿಕರಿದ್ದಾರೆ. ಕನ್ನಡ ಚಿತ್ರರಂಗದ ಬಗ್ಗೆ ಎಲ್ಲರಿಗೂ ಒಳ್ಳೆಯ ಅಭಿಪ್ರಾಯವಿದೆ ಎಂದಿದ್ದಾರೆ.
ನಿಯಮ ಪ್ರಕಾರ ಎಲ್ಲರು ಟ್ಯಾಕ್ಸ್ ಕಟ್ಟಲೇ ಬೇಕು. ಎಲ್ಲಾ ಕಲಾವಿದರು ಟ್ಯಾಕ್ಸ್ ಕಟ್ಟಿರುತ್ತಾರೆ ಎಂದು ಸಚಿವೆ ಜಯಮಾಲಾ ಹೇಳಿದ್ದಾರೆ.ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರವಾಗಿ ಮಾತನಾಡುತ್ತಾ, ಶಬರಿಮಲೆ ಬಗ್ಗೆ ಮಾತಾಡಿ ನಾನು ಸುಸ್ತಾಗಿಬಿಟ್ಟೆ. ನಾನು ಈ ಬಗ್ಗೆ ಏನೂ ಮಾತಾಡುವುದಿಲ್ಲ. ದೇವರನ್ನು ನಾನು ವ್ಯಾಪಾರಕ್ಕೆ ಇಟ್ಟಿಲ್ಲ. ನಾನು ದೇವರನ್ನು ನಂಬಿಕೆಯ ತಳಹದಿಯಲ್ಲಿ ನೋಡುವವಳು. ಶಬರಿಮಲೆಗೆ ಭಕ್ತಿಯಿಂದ ಹೋಗಬೇಕು ಎಂಬಷ್ಟೇ ನನ್ನ ಭಾವನೆ ಎಂದು ಹೇಳಿದ್ದಾರೆ. ಈ ಹಿಂದೆ ಜಯಮಾಲಾ ಕೂಡ ಶಬರಿಮಲೆ ಅಯ್ಯಪ್ಪ ವಿಚಾರವಾಗಿ ಭಾರೀ ಸುದ್ದಿಯಾಗಿದ್ದರು. ಅಯ್ಯಪ್ಪನ ದರ್ಶನ ಪಡೆದು , ಪಾದ ಮುಟ್ಟಿ ನಮಸ್ಕರಿ ಮೈಲಿಗೆ ಮಾಡಿದ್ದಾರೆಂದು ಇಡೀ ರಾಜ್ಯದಂತ ದೊಡ್ಡಮಟ್ಟದಲ್ಲಿ ಸುದ್ದಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
Comments