ದೆಹಲಿಯಲ್ಲಿ ಪೆಟ್ರೋಲ್ ದರ ಇಳಿಸಿದ್ರೆ, ರಾಜ್ಯದಲ್ಲಿ ಹೆಚ್ಚಿಸ್ತಾರಂತೆ....!!! ಯಾಕಂತೆ..?

ದೇಶಾದ್ಯಂತ ಇಂದು ಪೆಟ್ರೋಲ್, ಡೀಸೇಲ್ ಬೆಲೆ ಕಡಿಮೆಯಾಗಿದೆ. ರಾಜ್ಯದ ವಾಹನ ಸವಾರರಿಗೆ ಬಿಗ್ ಶಾಕ್ ಆಗಿದೆ. ಪೆಟ್ರೋಲ್, ಡೀಸೇಲ್ ಬೆಲೆಗಳಲ್ಲಿ ಇಳಿಕೆಯಾಗಿದೆ. ಆದರೆ ಬೆಂಗಳೂರಿನಲ್ಲಿ ಮಾತ್ರ ಇದು ವ್ಯತಿರಿಕ್ತವಾಗಿದೆ. ಬೆಂಗಳೂರಿನ ವಾಹನ - ಸವಾರರಿಗೆ ಮಾತ್ರ ಇದು ಲಭ್ಯವಾಗಿಲ್ಲ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆಯಲ್ಲಿ 1.52 ರೂ. ಹಾಗೂ ಡೀಸೆಲ್ ಬೆಲೆಯಲ್ಲಿ 1.50 ರೂ. ಏರಿಕೆಯಾಗಿದೆ. ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೇ. ರಾಜ್ಯದ ವಾಹನ ಸವಾರರಿಗೆ ಶಾಕಿಂಗ್ ನ್ಯೂಸ್, ದೇಶಾದ್ಯಂತ ಇಂದು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿದೆ. ಈಗಾಗಲೇ ಕೆಡಎಸ್ಆರ್ಟಿಸಿ ಪ್ರಯಾಣ ಶುಲ್ಕವನ್ನು ಹೆಚ್ಚು ಮಾಡುವ ನಿರ್ಧಾರ ಮಾಡಿರುವ ರಾಜ್ಯ ಸರ್ಕಾರದ ಬ್ಗಗೆ ಜನ ಸಾಮಾನ್ಯರಿಗೆ ಬೇಸರ ತಂದಿದೆ.
ಇಂದಿನ ಪೆಟ್ರೋಲ್ ಬೆಲೆ 1.52 ರೂ. ಏರಿಕೆಯಾಗುವ ಮೂಲಕ 70.53 ರೂ.ಗೆ ಮಾರಾಟವಾಗುತ್ತಿದೆ. ಡೀಸೆಲ್ ಬೆಲೆಯಲ್ಲಿ 1.50 ರೂ. ಏರಿಕೆಯಾಗಿ 64.30 ರೂ.ಗೆ ಮಾರಾಟವಾಗುತ್ತಿದೆ. ನವದೆಹಲಿಯಲ್ಲಿ ಪೆಟ್ರೋಲ್ ಗೆ 15 ಪೈಸೆ ಕಡಿಮೆಯಾಗುವ ಮೂಲಕ 68.29 ರೂ. ಗಳಿಷ್ಟದ್ದರೆ, ಡೀಸೆಲ್ 18 ಪೈಸೆ ಇಳಿಕೆಯಾಗಿ 62.86 ರೂ.ಗಳಿಗೆ ಮಾರಾಟವಾಗುತ್ತಿದೆ. ಕಳೆದ ಒಂದು ವರ್ಷದಲ್ಲಿಯೇ ಅತಿ ಕಡಿಮೆ ಬೆಲೆಗೆ ಪೆಟ್ರೋಲ್ ತಲುಪಿದ್ದು, ಡೀಸೆಲ್ ಕೂಡ ಕಡಿಮೆ ಬೆಲೆಗೆ ಇಳಿಕೆಯಾಗಿದೆ. ಒಂದು ಕಡೆ ಚುನಾವಣೆ ಕಾವು ಕಾವೇರುತ್ತಿದ್ದರೇ, ಮತ್ತೊಂದು ಕಡೆ ದಿನಿನಿತ್ಯ ಉಪಯೋಗಿಸುವ ವಸ್ತುಗಳ ದರವು ಗಗನಕ್ಕೇರುತ್ತಿದೆ.
Comments