ಶಬರಿಮಲೆ ಗಲಾಟೆ ನಡುವೆಯೂ ಕರ್ತವ್ಯ ಪ್ರಜ್ಞೆ ಮೆರೆದ ಮಹಿಳಾ ಪತ್ರಕರ್ತೆ..!!!

ಶಬರಿಮಲೆಗೆ ಪ್ರವೇಶಿದ ಇಬ್ಬರು ಮಹಿಳೆಯರ ವಿರುದ್ಧ ಈಗಾಗಲೇ ಎರಡು ರಾಜ್ಯಗಳಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ತಾವು ಪೊಲೀಸರ ಸೆಕ್ಯುರಿಟಿಯೊಂದಿಗೆ ಕೊನೆಗೂ ಅಯ್ಯಪ್ಪನ ದರ್ಶನ ಪಡೆದಿದ್ದೂ ನಿಜಕ್ಕೂ ರೋಚಕವಾಗಿತ್ತು ಎಂದು ಐತಿಹಾಸಿಕ ದಾಖಲೆ ಮುರಿದ ಬಿಂದು ಮತ್ತು ಕನಕ ದುರ್ಗ ತಮ್ಮ ಅನುಭವ ಬಿಚ್ಚಿಟ್ಟರು. ಈ ಮಧ್ಯೆ ಕೆಲ ಮಾಲಧಾರಿಗಳು ಮಹಿಳೆಯರ ಪ್ರವೇಶದಿಂದ ಶಬರಿಮಲೆ ದೇವಸ್ಥಾನ ಅಪವಿತ್ರವಾಗಿದೆ ಎಂದು ಪ್ರತಿಭಟನೆಗಿಳಿದಿದ್ದಾರೆ. ಕೇರಳದಲ್ಲಿ ಬಿಗಿ ಬಂದೋ ಬಸ್ತ್ ಮಾಡಲಾಗಿದೆ. ಕೇರಳ ಹೊತ್ತಿ ಉರಿಯುತ್ತಿದೆ. ಮಹಿಳೆಯರು ಶಬರಿಮಲೆ ಪ್ರವೇಶ ಮಾಡಿದ ಹಿನ್ನಲೆ ಅನೇಕ ಮಾಧ್ಯಮ ವರದಿಗಾರರು ವರದಿ ಮಾಡಲು ಜಮಾಯಿಸಿದ್ದರು. ಈ ಬಗ್ಗೆ ವರದಿ ಮಾಡುವಾಗ ಮಹಿಳಾ ಕ್ಯಾಮೆರಾ ವರದಿಗಾರರೊಬ್ಬರು ಕೆಲಸದಲ್ಲಿ ತೊಡಗಿದಾಗ ಕೆಲವು ಪ್ರತಿಭಟನಾಕಾರರು ಅಟ್ಯಾಕ್ ಮಾಡ್ತಿದ್ರೂ ಆಕೆ ಧೃತಿಗೆಡಲಿಲ್ಲ.
ಕಣ್ಣೀರು ಹಾಕುತ್ತಲೇ ತನ್ನ ಕೆಲಸವನ್ನ ಮುಂದುವರೆಸಿದ್ರು. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಧೈರ್ಯಕ್ಕೆ, ಕರ್ತವ್ಯಕ್ಕೆ ಇದೊಂದು ಬೆಸ್ಟ್ ಉದಾಹರಣೆ ಎನ್ನಬಹುದು.ಶಬರಿಮಲೆಗೆ ಮಹಿಳೆಯರ ಪ್ರವೇಶ ಖಂಡಿಸಿ 12 ಗಂಟೆಗಳ ಕೇರಳ ಬಂದ್ಗೆ ಕರೆ ನೀಡಿದ ವೇಳೆ ಸಾಕಷ್ಟು ಪತ್ರಕರ್ತರ ಮೇಲೆ ದಾಳಿ ನಡೆಯಿತು. ಫೋಟೋದಲ್ಲಿ ಕಾಣುವ ಕೈರಾಳಿ ಟಿವಿಯ ಕ್ಯಾಮೆರಾಪರ್ಸನ್ ಶೈಲಜಾ ಅಬ್ದುಲ್ ರೆಹಮಾನ್, ಅವರ ಮೇಲೆ ತಿರುವನಂತಪುರಂನಲ್ಲಿ ಪ್ರತಿಭಟನಾಕಾರರು ದಾಳಿ ನಡೆಸಿದ್ದರು. ಶೈಲಜಾ ಅವರನ್ನ ಮನಬಂದಂತೆ ನಿಂದಿಸಿ, ಲೇವಡಿ ಮಾಡ್ತಿದ್ರು. ಆದರೂ ಅವರು ಧೃತಿಗೆಡದೆ ಚಿತ್ರೀಕರಣವನ್ನ ಮುಂದುವರೆಸಿದ್ರು. ಈ ಮಧ್ಯೆ ಪ್ರತಿಭಟನಾಕಾರರು ಶೈಲಜಾರಿಂದ ಕ್ಯಾಮರಾ ಕಸಿದುಕೊಳ್ಳಲು ಕೂಡ ಯತ್ನಿಸಿದ್ರು. ಸದ್ಯ ಶೈಲಜಾ ಆಸ್ಪತ್ರೆಯಲ್ಲಿದ್ದು, ಅವರ ಕುತ್ತಿಗೆಗೆ ಸಪೋರ್ಟ್ ಬ್ಯಾಂಡ್ ಹಾಕಿಕೊಳ್ಳುವಂತಾಗಿದೆ.
ಶೈಲಜಾ ಹೇಳುವ ಪ್ರಕಾರ ಅಲ್ಲಿ ನನಗೆ ಎಷ್ಟು ನೋವು ಮಾಡಿದ್ರೂ ಸಹಿಸಿಕೊಳ್ಳುತ್ತಿದ್ದೆ. ಆದರೆ ನಾನು ಶೂಟ್ ಮಾಡಿದ್ದ ಕೆಲವು ಅಮೂಲ್ಯ ವಿಡಿಯೋ ತುಣುಕುಗಳು ನನಗೆ ಮಾತ್ರ ಲಭ್ಯವಾಗಿದ್ದವು. ಯಾರೋ ಹಿಂದಿನಿಂದ ನಾಲ್ಕೈದು ಜನರ ಗುಂಪು ಬಂದು ನನ್ನ ಮೇಲೆ ಅಟ್ಯಾಕ್ ಮಾಡಿತ್ತು. ನನ್ನ ಕ್ಯಾಮೆರಾವನ್ನು ಕೆಳಗೆ ಬೀಳಿಸಿ, ನನ್ನ ಮೇಲೆ ಹಲ್ಲೆ ನಡೆಸಿದ್ದರು. ನಾನು ನೋವಿನಿಂದ ಅಳುತ್ತಿದ್ದೆ, ನನ್ನ ಕಣ್ಣೀರು ಜನರಿಗೆ ಗೊತ್ತಾಗಬಾರದೆಂದು ಕ್ಯಾಮೆರಾವನ್ನು ಅಡ್ಡವಾಗಿ ಹಿಡಿಯುತ್ತಿದ್ದೆ. ಮತ್ತೆ ಕೆಳಗೆ ಬಿದ್ದ ಕ್ಯಾಮೆರಾವನ್ನು ತೆಗೆದುಕೊಂಡು ಬ್ಯಾಟರಿ ಹಾಕಿ ಮತ್ತೆ ಶೂಟ್ ಮಾಡುತ್ತಿದ್ದೆ. ನಾನು ಪಟ್ಟ ಪಾಡು ಅಷ್ಟಿಷ್ಟಲ್ಲ. ಆದರೆ ನಾನು ಯಾವುದಕ್ಕೂ ಧೃತಿಗೆಡಲಿಲ್ಲವೆಂದು ನೆನಪಿಸಿಕೊಳ್ಳುತ್ತಾರೆ. ಒಟ್ಟಾರೆ ಶಬರಿ ಮಲೆಯಲ್ಲಿ ಮಹಿಳಾ ಪತ್ರಕರ್ತೆ ಎದುರಿಸಿದ ಕಣ್ಣೀರ ಕಥೆ-ವ್ಯಥೆ ಇದು.
Comments