ಮತ್ತೆ ಮರುಕಳಿಸುತ್ತಾ ನೋಟ್ ಬ್ಯಾನ್ ಸಮಸ್ಯೆ..! ಇನ್ಮುಂದೆ 2000 ರೂ ನೋಟ್ ಬ್ಯಾನ್..?
ನೋಟು ಬ್ಯಾನ್ ಆಗಿ ಸುಮಾರು 2 ವರ್ಷಗಳೇ ಕಳೆದಿವೆ. ಆಗಿನಿಂದಲೂ ಒಂದಷ್ಟು ಸಮಸ್ಯೆಗಳು ಆಗುತ್ತಲೆ ಇವೆ.. ಆ ಸಂದರ್ಭದಲ್ಲಿ ಎಲ್ಲರಿಗೂ ನೋಟ್ ಬ್ಯಾನ್ ಎನ್ನುವುದು ತಲೆ ಬಿಸಿ ಆಗಿತ್ತು… ಎಲ್ಲಿ ಏನು ಮಾಡಬೇಕು ಎಂಬುದು ಗೊಂದಲವಾಗಿ ಬಿಟ್ಟಿತ್ತು. ಎಲ್ಲಿ ನೋಡಿದರು ಎಟಿಎಂ ಮುಂದೆ ಜನ ಕ್ಯೂ ನಿಂತು ಕೊಂಡು ಪರದಾಡುವ ಪರಿಸ್ಥಿತಿ ಬಂದಿತ್ತು. ನಗದೀಗರಣ ಪ್ರಕ್ರಿಯೆಯ ಸಂದರ್ಭದಲ್ಲಿ ಚಲಾವಣೆಗೆ ಬಂದಿದ್ದ 2 ಸಾವಿರ ರೂ ಮೌಲ್ಯದ ನೋಟುಗಳ ಮುದ್ರಣವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಅತ್ಯಂತ ಕನಿಷ್ಠ ಎನ್ನಬಹುದಾದ ಪ್ರಮಾಣಕ್ಕೆ ಇಳಿಸಿದೆ. ಹಾಗೆಂದು 2 ಸಾವಿರ ರು. ಮೌಲ್ಯದ ನೋಟುಗಳ ಚಲಾವಣೆ ನಿಲ್ಲುವುದಿಲ್ಲ. ಇದರ ಬದಲಾಗಿ ಇವುಗಳ ಚಲಾವಣೆಯನ್ನು ನಿಯಂತ್ರಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಲಾಗುತ್ತಿದೆ.
2000 ರೂ ಬರುಬರುತ್ತ ಕಾಳಧನಿಕ ಸ್ನೇಹಿಯಾಗಿ ಬದಲಾಗ ತೊಡಗಿವೆ. ಹೆಚ್ಚು ಮೌಲ್ಯ ಹೊಂದಿರುವ ಕಾರಣ ಆರಾಮವಾಗಿ ಶೇಖರಿಸಿ ಇಡಬಹುದು ಮತ್ತು ಸಾಗಿಸಬಹುದು ಎಂಬ ಕಾರಣಕ್ಕೆ ಕಾಳಧನಿಕರು ಈ ನೋಟು ಹೆಚ್ಚು ಸಂಗ್ರಹಿಸಿಡುತ್ತಿದ್ದಾರೆ ಎಂಬ ಗುಮಾನಿ ಮೋದಿ ಸರ್ಕಾರಕ್ಕೆ ಇದೆ. ಈ ಹಿನ್ನೆಲೆಯಲ್ಲಿ 2 ಸಾವಿರ ರು. ಮೌಲ್ಯದ ನೋಟುಗಳ ಮುದ್ರಣವನ್ನು ಕಡಿತಗೊಳಿಸಿ, ಬಳಿಕ ನಿಧಾನವಾಗಿ ಅವುಗಳನ್ನು ಚಲಾವಣೆಯಿಂದ ಹಿಂಪಡೆದು, ಕಮ್ಮಿ ಮೌಲ್ಯದ ನೋಟುಗಳ ಚಲಾವಣೆಯನ್ನು ಸರ್ಕಾರ ಹೆಚ್ಚಿಸಲಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ದ ಪ್ರಿಂಟ್’ ವೆಬ್‌ಸೈಟ್ ವರದಿ ಮಾಡಿದೆ.ಮಾರ್ಚ್ 2018ರ ಅಂಕಿಅಂಶಗಳ ಪ್ರಕಾರ ದೇಶದಲ್ಲಿ ಚಲಾವಣೆಯಲ್ಲಿ ಇದ್ದ 18.03 ಲಕ್ಷ ಕೋಟಿ ರೂ. ಮೌಲ್ಯದ ಕರೆನ್ಸಿಯಲ್ಲಿ 2 ಸಾವಿರ ರು. ಮೌಲ್ಯದ ನೋಟುಗಳ ಪಾಲು 6.73 ಲಕ್ಷ ಕೋಟಿ ರುಪಾಯಿ. ಅಂದರೆ ಪ್ರತಿಶತ 37ರಷ್ಟು. ಇದರ ನಂತರದ ಸ್ಥಾನ 500 ರು. ಮೌಲ್ಯದ ನೋಟಿದ್ದು. 7.73 ಲಕ್ಷ ಕೋಟಿ ರು.ನಷ್ಟು500 ರು. ಮೌಲ್ಯದ ನೋಟುಗಳು ಚಲಾವಣೆಯಲ್ಲಿವೆ. ಈ ಸುದ್ದಿ ಕೇಳಿದ ಜನರು ಮತ್ತೆ ತಲೆ ಬಿಸಿ ಮಾಡಿಕೊಂಡಿದ್ದಾರೆ. 2000 ರೂ ಬ್ಯಾನ್ ಆದರೆ ಅದಕ್ಕೆಷ್ಟು ಪರದಾಡಬೇಕಾಗುತ್ತೆದಯೋ ಎಂದು..
Comments