ನನ್ನ ಪತ್ನಿ ಜೊತೆಯೇ ಸಹದ್ಯೋಗಿಯ ಲೈಂಗಿಕ ಚಾಟ್ : ಕೋರ್ಟು ಮೆಟ್ಟಿಲೇರಿತು ಕರ್ನಲ್ ಅಧಿಕಾರಿಗಳ ಕೇಸ್..!!!

ಸೇನೆಯ ಕರ್ನಲ್ ಅಧಿಕಾರಿವೊಬ್ಬರು ಅಕ್ರಮ ಸಂಬಂಧದ ಆರೋಪದ ಮೇಲೆ ವಿಚಾರಣೆ ಎದುರಿಸುತ್ತಿದ್ದಾರೆ. ತನ್ನ ಸಹೊದ್ಯೋಗಿ ಅಧಿಕಾರಿಯ ಪತ್ನಿ ಜೊತೆ ಅನೈತಿಕ ಸಂಬಂಧ ಹೊಂದಿದ್ದರೆಂಬ ಆರೋಪದ ಮೇಲೆ ಭಾರತೀಯ ಸೇನೆ ಯ ಕರ್ನಲ್ ವೊಬ್ಬರು ಕೋರ್ಟು ವಿಚಾರಣೆ ಎದುರಿಸುತ್ತಿದ್ದಾರೆ.. ತನ್ನ ಸಹೋದ್ಯೋಗಿ ಕರ್ನಲ್ ಪತ್ನಿಯ ಜತೆಗೆ ಆತ ಸಂಬಂಧ ಬೆಳೆಸುವ ವೇಳೆ ದೆಹಲಿಯಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದು, ಅದೇ ಸಮಯದಲ್ಲಿ ಮತ್ತೊಬ್ಬ ಕರ್ನಲ್ ಕೂಡ ಅದೇ ನಗರದಲ್ಲೇ ಕಾರ್ಯ ನಿರ್ವಹಿಸುತ್ತಿದ್ದರು.ತನ್ನ ಪತ್ನಿಯ ಮೊಬೈಲ್ ಫೋನ್ ನಲ್ಲಿ 'ಆಕ್ಷೇಪಾರ್ಹ ಚಿತ್ರಗಳನ್ನು' ಅಧಿಕಾರಿ ನೋಡಿದ ಮೇಲೆ ಆರೋಪಿ ವಿರುದ್ಧ ದೂರು ದಾಖಲಿಸಿದ್ದರು. ಅದರ ಆಧಾರದಲ್ಲಿ ಎರಡು ವರ್ಷಗಳಿಂದ ವಿಚಾರಣೆ ನಡೆಯುತ್ತಿತ್ತು. ಇತ್ತೀಚೆಗಷ್ಟೇ ಅಧಿಕಾರಿಗಳು ಮೂರು ಆರೋಪಕ್ಕೆ ಸೇನಾ ಕಾಯ್ದೆ ಅಡಿಯಲ್ಲಿ ಕೋರ್ಟ್ ನಲ್ಲಿ ಈ ಪ್ರಕರಣದ ವಿಚಾರಣೆ ನಡೆಯಲಿ ಎಂದು ಶಿಫಾರಸು ಮಾಡಿದ್ದರು.
ತನ್ನ ಪತ್ನಿ ಮೊಬೈಲ್ ಫೋನ್ ನಲ್ಲಿದ್ದ ಮೆಸೇಜ್ ಮತ್ತು ಚಿತ್ರಗಳನ್ನೇ ಸಾಕ್ಷಿಯಾಗಿ ಇಟ್ಟುಕೊಂಡು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆಂದು ದೂರುದಾರರು ತಿಳಿಸಿದ್ದಾರೆ. ಆರೋಪಿಯು ದೂರುದಾರರ ಪತ್ನಿಗೆ ಅಶ್ಲೀಲ ವಿಡಿಯೋಗಳನ್ನು ಕಳುಹಿಸಿದ್ದು ಸಹ ಪತ್ತೆಯಾಗಿತ್ತು. ಅದರ ಜತೆಗೆ ಪರಸ್ಪರರು ಲೈಂಗಿಕ ವಿಚಾರಗಳನ್ನು ಒಳಗೊಂಡ ಸಂದೇಶಗಳ ವಿನಿಮಯ ಮಾಡಿಕೊಂಡಿದ್ದರು ಎಂಬ ಗಂಭೀರ ಆರೋಪವನ್ನು ಕೂಡ ಮಾಡಿದ್ದರು. ಈ ಬಗ್ಗೆ ದೂರುದಾರರು ತಮ್ಮ ಪತ್ನಿ ಜೊತೆ ಮ್ಯೂಚುಯಲ್ ಸಂಬಂಧವೊಂದಿದ್ದಾರೆ ಎಂಬುದನ್ನು ಆರೋಪಿಸುತ್ತಾರೆ. ಈ ಬಗ್ಗೆ ಕೋರ್ಟು ವಿಚಾರಣೆ ನಡೆಯುತ್ತಿದೆ. ಮುಖ್ಯ ಸಾಕ್ಷಿಯಾಗಿ ತಮ್ಮ ಪತ್ನಿ ಮೊಬೈಲ್ ನ್ನೇ ಬಳಸಲಾಗಿದ್ದು ಸಹೋದ್ಯೋಗಿ ಸೇನಾಧಿಕಾರಿ ವಿರುದ್ಧ ಗಂಭೀರ ದೂರು ದಾಖಲಿಸಿದ್ದಾರೆ.
Comments