‘ ಶಬರಿಮಲೆ ಪ್ರವೇಶಿಸಿದ ಆ ಇಬ್ಬರು ಹೆಂಗಸರಿಗೆ ಮಾನ –ಮರ್ಯಾದೆ ಇಲ್ಲ’ : ಸಾಲುಮರದ ತಿಮ್ಮಕ್ಕ

ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ ಶಬರಿ ಮಲೆಗೆ ಪ್ರವೇಶ ಮಾಡಿದ ಮಹಿಳೆಯರ ಬಗ್ಗೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.ಈಗಾಗಲೇ ಸದ್ಯ ಕೇರಳದಲ್ಲಿ ಬಂದ್ ಜಾರಿಯಾಗಿದೆ. ಇಬ್ಬರು ಮಹಿಳೆಯರು ದೇವಸ್ಥಾನ ಪ್ರವೇಶ ಮಾಡಿದ ಹಿನ್ನಲೆಯಲ್ಲಿ ಅನೇಕರು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ. ಮಾಲಾಧಾರಿಗಳ ನಡುವೆ ಪೈಪೋಟಿ ಭುಗಿಲೆದ್ದಿದೆ. ಈ ನಡುವೆ ಪರ-ವಿರೋಧ ಚರ್ಚೆಗಳು ಜೋರಾಗುತ್ತಿವೆ. ಶಬರಿ ಮಲೆಗೆ 10 ವರ್ಷದ ಮೇಲ್ಪಟ್ಟ ಮತ್ತು 50 ವರ್ಷದ ಕೆಳಗಿರುವ ಮಹಿಳೆಯರು ಹೋಗುವಂತಿರಲಿಲ್ಲ, ಸುಮಾರು 800 ವರ್ಷಗಳಿಂದಲೂ ಈ ಸಂಪ್ರದಾಯ ರೂಢಿಯಲ್ಲಿತ್ತು. ಆ ನಿಷೇಧವನ್ನು ಮುರಿದು ಸದ್ಯ ಇಬ್ಬರು ಮಹಿಳೆಯರು ದೇವಾಲಯ ಪ್ರವೇಶಿಸಿ ತೀವ್ರ ವಿರೋಧ ಕಟ್ಟಿಕೊಂಡಿದ್ದಾರೆ. ಇವರ ಪ್ರವೇಶಕ್ಕೆ ಸಾಲುಮರದ ತಿಮ್ಮಕ್ಕ ಕೂಡ ಖಂಡಿಸಿದ್ದಾರೆ.
ಶಬರಿಮಲೆಯಲ್ಲಿ ಅಯ್ಯಪ್ಪ ದೇವಾಲಯಕ್ಕೆ ಮಹಿಳೆಯರ ಪ್ರವೇಶ ಮಾಡಿರುವುದು ಸರಿಯಿಲ್ಲ ಎಂದಿದ್ದಾರೆ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ. ಸೂತಕವಾಗುವ ಹೆಂಗಸರು ಶಬರಿಮಲೆ ದೇವಸ್ಥಾನಕ್ಕೆ ಹೋಗಬಾರದೆಂದು ಅನೇಕ ವರ್ಷಗಳಿಂದ ಬಂದತಂತಹ ಸಂಪ್ರದಾಯವಾಗಿದೆ. ನನ್ನಷ್ಟು ವಯಸ್ಸಾದ ಮೇಲೆ ಅಲ್ಲಿಗೆ ಹೋಗಿ ದೇವರ ದರ್ಶನ ಪಡೆಯಬಹುದು. ನಾನು ವಯಸ್ಸಾದ ಮೇಲೆ ಹೋಗಿದ್ದೇನೆ. ನನ್ನನ್ನು ದೊಡ್ಡ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದರು.ಆದರೆ ಈಗ ಆ ಹೆಂಗಸರು ಶಬರಿಮಲೆಗೆ ಹೋಗಿದ್ದು ಸರಿಯಿಲ್ಲ. ದೇವರ ಸಂಪ್ರದಾಯ ಮುರಿಯೋದು ಎಷ್ಟರ ಮಟ್ಟಿಗೆ ಸರಿ. ಆ ಇಬ್ಬರು ಮಾನ-ಮರ್ಯಾದೆ ಇಲ್ಲದೇ ದೇವರ ದರ್ಶನ ಪಡೆಯಲು ಹೋಗಿದ್ದಾರೆ. ಮುಟ್ಟಾಗುವ ಮಹಿಳೆಯರು ದೇವಸ್ಥಾನಕ್ಕೆ ಹೋಗಬಾರದು ಅಂತ ಅವರು ಎಂದು ವಿರೋಧಿಸಿದ್ದಾರೆ. 40 ವರ್ಷದ ಆ ಮಹಿಳೆಯರು ಬೆಟ್ಟ ಹತ್ತಿ ದೇವರ ದರ್ಶನ ಪಡೆದು ಬಂದಿದ್ದಾರೆ.800 ವರ್ಷಗಳ ಸಂಪ್ರದಾಯ ಮುರಿದು ದೇವಾಲಯ ಪ್ರವೇಶ ಮಾಡಿದ್ದಕ್ಕೆ ಭಾರೀ ವಿರೋಙಧ ವ್ಯಕ್ತವಾಗಿದೆ.
Comments